ನವರಾತ್ರಿ ವಿಶೇಷ: ದುರ್ಗಾ ರೂಪದಲ್ಲಿ ಫೋಟೋ ಶೂಟ್ ಮಾಡಿಸಿದ ನಟಿ ಸಂಜನಾ ಗಲ್ರಾನಿ

0
198

ಇತ್ತೀಚಿನ ದಿನಗಳಲ್ಲಿ ಸಿನಿಮಾ ದಿಂದ ಹಿಡಿದು ಕಿರುತೆರೆಯ ವರೆಗೆ ಜನಪ್ರಿಯ ನಟಿಯರು ಹಬ್ಬ ಗಳ ವಿಶೇಷ ಸಂದರ್ಭಗಳಲ್ಲಿ ದೇವಿಯರಂತೆ ಅಲಂಕಾರ ಮಾಡಿಕೊಂಡು ಫೋಟೋ ಶೂಟ್ ಮಾಡಿಸುವ ಒಂದು ಹೊಸ ಟ್ರೆಂಡ್ ಬಹಳ ಜೋರಾಗಿ ನಡೆದಿದೆ. ನಟಿಯರು ಆಯಾ ಹಬ್ಬಕ್ಕೆ ಅನುಗುಣವಾಗಿ ಆಯಾ ದೇವತೆಗಳ ವಸ್ತ್ರಗಳಲ್ಲಿ ವಿಭಿನ್ನವಾದ ಭಂಗಿಗಳಲ್ಲಿ ಫೋಟೋ ಶೂಟ್ ಮಾಡಿಸಿ, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಖುಷಿಯನ್ನು ನೀಡಿದರೆ, ಹಬ್ಬಕ್ಕೆ ವಿಶ್ ಮಾಡುವ ಹೊಸ ಸಂಪ್ರದಾಯ ಇದಾಗಿದೆ ಎನ್ನುವಂತಾಗಿದೆ.

ಇದೀಗ ಈ ಸಾಲಿಗೆ ನಟಿ ಸಂಜನಾ ಗಲ್ರಾನಿ ಸಹಾ ಹೊಸ ಸೇರ್ಪಡೆಯಾಗಿದ್ದಾರೆ. ಹೌದು ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಟಿ ಸಂಜನಾ ಗಲ್ರಾನಿ ಸಹಾ ದುರ್ಗಾ ಮಾತೆಯ ಅಲಂಕಾರ ಮಾಡಿಸಿಕೊಂಡು ಫೋಟೋ ಶೂಟ್ ಮಾಡಿಸಿದ್ದಾರೆ. ಅಭಿಮಾನಿಗಳಿಗೆ ನವರಾತ್ರಿ ಶುಭಾಶಯ ಕೋರುತ್ತಾ ಸಂಜನಾ ಗಲ್ರಾನಿ ತಮ್ಮ ದುರ್ಗಾ ರೂಪದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಸಂಜನಾ ತಮಗೆ ನವರಾತ್ರಿ ಬಹಳ ಸಂಭ್ರಮದ ಹಬ್ಬವೆಂದು ಹೇಳಿದ್ದಾರೆ. ಅಲ್ಲದೇ ಬಾಲ್ಯದಿಂದಲೂ ಸಹಾ ನವರಾತ್ರಿ ಹಬ್ಬವನ್ನು ತಾನು ಬಹಳ ಸಂಭ್ರಮಿಸುವುದಾಗಿ ಅವರು ಹೇಳಿದ್ದಾರೆ. ಸಂಜನಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡ ಅವರ ಈ ಹೊಸ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಬಹಳ‌ ಖುಷಿ ಪಟ್ಟಿದ್ದಾರೆ. ಮಾತ್ರವೇ ಅಲ್ಲದೇ ಅವರು ಕಾಮೆಂಟ್ ಗಳನ್ನು ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನು ಮೊನ್ನೆಯಷ್ಟೇ ನಟಿ ಸಂಜನಾ ಅವರು ಕ್ಯಾಬ್ ಚಾಲಕ ತಮಗೆ ಕಿರುಕುಳ ನೀಡಿದನೆಂದು ಆರೋಪ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಆ ವಿಚಾರವಾಗಿ ಸಂಜನಾ ಅವರು ಸವಿವರವಾಗಿ ಆ ಎಲ್ಲಾ ಮಾಹಿತಿಯನ್ನು ಹಂಚಿಕೊಂಡು, ಅನಂತರ ಈ ವಿಷಯ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ, ಚರ್ಚೆಗಳಿಗೆ ಕಾರಣವಾಗಿತ್ತು. ಅಲ್ಲದೇ ನೆಟ್ಟಿಗರಿಂದ ಈ ವಿಚಾರದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಸಂಜನಾ ಗಲ್ರಾನಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟೀವ್ ಆಗಿದ್ದು, ಅವರು ಆಗಾಗ ಕೆಲವು ವಿಚಾರಗಳನ್ನು ಹಾಗೂ ಫೋಟೋ ಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ಅಲ್ಲದೇ ಒಂದಲ್ಲಾ ಒಂದು ವಿಷಯದ ಮೂಲಕ ಸಂಜನಾ ಮಾದ್ಯಮಗಳ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಈ ದುರ್ಗಾ ರೂಪದ ಫೋಟೋ ಶೂಟ್ ನಿಂದ ಮತ್ತೆ ಸುದ್ದಿಯಾಗಿದ್ದಾರೆ.

LEAVE A REPLY

Please enter your comment!
Please enter your name here