ನವರಸನಾಯಕ ಜಗ್ಗೇಶ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಯಾಗಿ ಹೋಗಿದ್ದೆಲ್ಲಿಗೆ??

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ತೋತಾಪುರಿ ಹಾಗೂ ರಂಗನಾಯಕ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದಲ್ಲದೇ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಸ್ಯಾಂಡಲ್ವುಡ್ ನ‌ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರ ಜೊತೆಗೆ ಕೈ ಜೋಡಿಸಿರುವ ಜಗ್ಗೇಶ್ ಅವರ ಹೊಸ ಸಿನಿಮಾ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಕೂಡಾ ಘೋಷಣೆಯಾಗಿದ್ದು, ಸಿಕ್ಕಾಪಟ್ಟೆ ಸಿನಿಮಾ ಕೆಲಸ ಗಳಲ್ಲಿ ಜಗ್ಗೇಶ್ ಅವರು ಬ್ಯುಸಿಯಾಗಿದ್ದಾರೆ. ‌

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ತ್ರಿಬಲ್ ರೈಡಿಂಗ್ ಸಿನಿಮಾ ಮುಗಿಸಿದ್ದಾರೆ. ಅದಲ್ಲದೇ ಕನ್ನಡ ಕಿರುತೆರೆಯಲ್ಲಿ ಅವರ ನಿರೂಪಣೆಯಲ್ಲಿ ಶೋ ಒಂದರ ಆರಂಭದ ಕುರಿತಾಗಿ ಈಗಾಗಲೇ ಪ್ರೊಮೋಗಳು ಪ್ರಸಾರ ಆಗುವ ಮೂಲಕ ಅಭಿಮಾನಿಗಳು ಹಾಗೂ ಕಿರುತೆರೆಯ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಈಗ ಈ ಇಬ್ಬರ ವಿಷಯ ಏಕೆ? ಎನ್ನುವಿರಾ? ಖಂಡಿತ ಅದಕ್ಕೊಂದು ಕಾರಣ ಇದೆ. ಬನ್ನಿ ಅದೇನು ಎನ್ನುವುದನ್ನು ಸಹಾ ತಿಳಿಯೋಣ.

ಗೋಲ್ಡನ್ ಸ್ಟಾರ್ ಗಣೇಶ್ ಅವರು ಹಾಗೂ ನವರಸ ನಾಯಕ ಜಗ್ಗೇಶ್ ಅವರು ಇಬ್ಬರೂ ಸಹಾ ತಮ್ಮ ಬ್ಯುಸಿ ಶೆಡ್ಯೂಲ್ ನ ನಡುವೆ ಬಿಡುವು ಮಾಡಿಕೊಂಡು ಗುರೂಜಿಗಳನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದು ಬಂದಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ನಟ ಜಗ್ಗೇಶ್ ಅವರು ತಮ್ಮ ಭೇಟಿಯ ವೀಡಿಯೋ ಒಂದನ್ನು ಶೇರ್ ಮಾಡಿಕೊಂಡು ಅದರ ವಿವರವನ್ನು ಹಂಚಿಕೊಂಡಿದ್ದಾರೆ.

ಜಗ್ಗೇಶ್ ಅವರು ವಿಡಿಯೋ ಹಂಚಿಕೊಂಡು, ಅದರ ಜೊತೆಗೆ, “ಇಂದು ನಾನು ಗಣಪ ಕೇದಾರಪೀಠದ ಜಗದ್ಗುರು ಶ್ರೀ ಶ್ರೀ ಭೀಮಾಶಂಕರ ಮಹರಾಜ್ ಹಾಗು ಕಣ್ವಕುಪ್ಪೆ ಮಠದ ಶ್ರೀ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಗುರುಗಳ ಆಶೀರ್ವಾದ ಪಡೆದೆವು… ಕೊರೋನ ಸಂಕಷ್ಟದಲ್ಲಿ ಕೇದಾರ ಶಿವನ ದರ್ಶನ ಪಡೆಯಲಾಗಲಿಲ್ಲಾ ಎಂಬ ಕೊರಗು ಶ್ರೀಗಳ ದರ್ಶನದಿಂದ ಸಾರ್ಥಕ ಸಮಾಧಾನ ಆಯಿತು…
ನೆನೆದವರ ಮನದಲ್ಲಿ ಶಿವಮಯ..
ಗುರುಭ್ಯೋನಮಃ…” ಎಂದು ಬರೆದುಕೊಂಡಿದ್ದಾರೆ.

ಜಗ್ಗೇಶ್ ಅವರು ಹಂಚಿಕೊಂಡ ಈ ವೀಡಿಯೋ ನೋಡಿದ ಅನೇಕ ಮಂದಿ ಜಗ್ಗೇಶ್ ಅವರಿಗೆ ಮೆಚ್ಚುಗೆಯನ್ನು ಸೂಚಿಸಿತ್ತಿದ್ದಾರೆ. ನೀವು ತುಂಬಾ ಒಳ್ಳೆಯವರು, ಎಲ್ಲರ ಒಳಿತಿಗಾಗಿ ಚಿಂತನೆ ಮಾಡುವ ನಿಮ್ಮ ಗುಣ ಎಲ್ಲದಕ್ಕೂ ಇರುವುದಿಲ್ಲ ಎಂದು ಹಾಡಿ ಹೊಗಳಿದ್ದಾರೆ. ಜಗ್ಗೇಶ್ ಅವರು ಶೇರ್ ಮಾಡಿದ ವೀಡಿಯೋ ವೈರಲ್ ಆಗುತ್ತಾ ಸಾಗಿದ್ದು, ಎಲ್ಲರ ಅಮಿತ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

Leave a Comment