ನರ್ಸ್ ತೆಗೆದುಕೊಂಡ ಸಮಯೋಚಿತ ನಿರ್ಧಾರ: ಉಳಿಯಿತು ರಸ್ತೆ ಹೆಣವಾಗಬೇಕಿದ್ದವನ ಪ್ರಾಣ!!

0 3

ರಸ್ತೆ ಅ ಪ ಘಾ ತಗಳು ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕೆಲವರು ರಸ್ತೆ ನಿಯಮಗಳ ಪಾಲನೆ ಮಾಡದಿರುವುದು, ಇನ್ನೊಂದೆಡೆ ಆತುರ,‌ ಒತ್ತಡ ಹೀಗೆ ಹಲವು ಕಾರಣಗಳಿಂದ ರಸ್ತೆ ಅ ಪ ಘಾ ತಗಳು ನಡೆಯುತ್ತಲೇ ಇರುತ್ತವೆ. ಹೀಗೆ ರಸ್ತೆ ಅ ಪ ಘಾ ತ ಗಳು ನಡೆದಾಗ ಅನೇಕ ಸಂದರ್ಭಗಳಲ್ಲಿ ಅ ಪ ಘಾ ತಕ್ಕೆ ಒಳಗಾದವರಿಗೆ ಸೂಕ್ತ ಸಮಯದಲ್ಲಿ ಪ್ರಥಮ ಚಿಕಿತ್ಸೆ ದೊರೆಯದೇ ಆಸ್ಪತ್ರೆಗೆ ಸಾಗಿಸುವ ಮುನ್ನವೇ ರಸ್ತೆಯಲ್ಲೇ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಆಗ ಅ ನ್ಯಾ ಯ ವಾಗಿ ಒಂದು ಪ್ರಾಣ ಹೊರಟು ಹೋಯಿತಲ್ಲ ಎಂದು ಅದೆಷ್ಟೋ ಜನರು ಮರುಗುತ್ತಾರೆ.

ಆದರೆ ತಮಿಳು ನಾಡಿನಲ್ಲಿ ರಸ್ತೆ ಅ ಪ ಘಾ ತವೊಂದು ಸಂಭವಿಸಿದ್ದು, ಈ ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರ ಸಮಯೋಚಿತ ಆರೈಕೆ ಹಾಗೂ ಪ್ರಥಮ‌ ಚಿಕಿತ್ಸೆಯ ಕಾರಣದಿಂದ ವ್ಯಕ್ತಿಯೊಬ್ಬರ ಪ್ರಾಣ ಉಳಿದಿದ್ದು, ಈ ಮಹಿಳೆಯ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಗಳು ಹರಿದು ಬರುತ್ತಿದೆ. ಅಲ್ಲದೇ ಜನರು ಈ ಮಹಿಳೆಯನ್ನು ನಿಜವಾದ ನಾಯಕಿ ಎಂದು ಹಾಡಿ ಹೊಗಳುತ್ತಿದ್ದಾರೆ. ಇಷ್ಟಕ್ಕೂ ಈ ಘಟನೆ ಏನೆಂದು ತಿಳಿಯೋಣ ಬನ್ನಿ.

ಡಿಸೆಂಬರ್ 3 ರಂದು ಕುರುವಾಕುರುಚ್ಚಿ ಯ ನಿವಾಸಿಯಾಗಿರುವ ವಸಂತ್ ಎನ್ನುವವರು ಬೈಪಾಸ್ ರಸ್ತೆಯ ಮೂಲಕ ತನ್ನ ವಾಹನದಲ್ಲಿ ಮನ್ನಾರ್ಗುಡಿ ಕಡೆಗೆ ಹೋಗುವಾಗ ರಸ್ತೆಯನ್ನು ದಾಟುತ್ತಿದ್ದ ಮೇಕೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಆಗ ವಾಹನದ ಮೇಲೆ ಹಿಡಿತ ಕಳೆದಕೊಂಡು ಆತ ಕೆಳಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾನೆ.‌ ಅದೇ ಸಮಯದಲ್ಲಿ ಮನ್ನಾರ್ಗುಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನರ್ಸ್ ವನಜ ಅವರು ಅದೇ ರಸ್ತೆಯಲ್ಲಿ ಬರುತ್ತಿದ್ದರು.

ರಸ್ತೆಯಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದ ವ್ಯಕ್ತಿಯನ್ನು ನೋಡಿದ ವನಜ ಅವರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಗಂಡನಿಗೆ ವಾಹನ ನಿಲ್ಲಿಸಲು ಹೇಳಿದ ಆಕೆ ಕೂಡಲೇ ಪ್ರಜ್ಞಾ ಹೀನನಾಗಿದ್ದ ವಸಂತ್ ಬಳಿ ಹೋಗಿ ನೋಡಿದ್ದಾರೆ. ಕೂಡಲೇ ಅವರು ಸಿಪಿಆರ್ ( cardiopulmonary resuscitation) ಮಾಡಿದ್ದಾರೆ. ಆತನ ಎದೆ ಹಾಗೂ ಅಂಗೈಗಳನ್ನು ಉಜ್ಜಿ, ಕೃತಕ ಉಸಿರಾಟವನ್ನು ನೀಡಿ ಆತನ ಪ್ರಾಣವನ್ನು ಉಳಿಸಿದ್ದಾರೆ.

ಸರಿಯಾದ ಸಮಯದಲ್ಲಿ ಮನುಷ್ಯನ ಪ್ರಾಣ‌ ಮುಖ್ಯ ಎಂದು ಪರಿಗಣಿಸಿ, ರಸ್ತೆಯಲ್ಲೇ ವಸಂತ್ ಅವರಿಗೆ ಅಗತ್ಯ ಚಿಕಿತ್ಸೆಯನ್ನು ನೀಡಿ ಆತನ ಪ್ರಾಣಕ್ಕೆ ಎದುರಾಗಿದ್ದು ಕು ತ್ತ ನ್ನು ಕಳೆಯುವಂತೆ ಮಾಡಿ, ಆತನ ಜೀವ ಉಳಿಸಿದ ನರ್ಸ್ ವನಜ ಅವರ ಈ ಕಾರ್ಯಕ್ಕೆ ಜನರಿಂದ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ವನಜ ಅವರನ್ನು ಅಭಿನಂದಿಸುತ್ತಿದ್ದಾರೆ.

Leave A Reply

Your email address will not be published.