ನರಾಚಿ ನಾಯಕನ ಅಬ್ಬರಕ್ಕೆ ಬೆರಗಾದ ಚಿತ್ರರಂಗ, ಕೆಜಿಎಫ್-2 ಮೊದಲ ದಿನ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

Entertainment Featured-Articles News

ಕೆಜಿಎಫ್-2 ನ ತುಫಾನ್ ಹಾಡಿನಂತೆ ಬಿಡುಗಡೆಯ ನಂತರ ಕೆಜಿಎಫ್-2 ಎಲ್ಲೆಲ್ಲೂ ತುಫಾನ್ ಎಬ್ಬಿಸಿದೆ. ಜನರ ನಿರೀಕ್ಷೆಗಳನ್ನು ಸುಳ್ಳು ಮಾಡದ ರಾಕಿ ಭಾಯ್ ತೆರೆಯ ಮೇಲೆ ಅಬ್ಬರಿಸುತ್ತಿದ್ದಾನೆ. ಕೆಜಿಎಫ್ ನ ನಾಯಕನ ಅಬ್ಬರಕ್ಕೆ ಭಾರತೀಯ ಸಿನಿಮಾ ರಂಗ ಕೂಡಾ ಅಚ್ಚರಿಯಾಗಿದೆ. ಸುನಾಮಿಯಂತೆ ಮುನ್ನುಗ್ಗುತ್ತಿರುವ ಕೆಜಿಎಫ್-2 ಹೊಸ ಇತಿಹಾಸವನ್ನು ಬರೆಯಲು, ಹಳೆಯ ದಾಖಲೆಗಳನ್ನು ಪುಡಿಗಟ್ಟುವತ್ತ ದಾಪುಗಾಲು ಹಾಕುತ್ತಿದ್ದು, ಮೊದಲನೇ ದಿನವೇ ಸಿನಿಮಾ ಮಾಡಿರುವ ಕಲೆಕ್ಷನ್ ಬಗ್ಗೆ ಎಲ್ಲೆಲ್ಲೂ ದೊಡ್ಡ ಚರ್ಚೆಯೇ ನಡೆದಿದ್ದು, ಸಿನಿಮಾ ಮಾಡಿರುವ ಕಲೆಕ್ಷನ್ ನ ಬಗ್ಗೆ ಸುದ್ದಿಗಳು ಎಲ್ಲರನ್ನು ಬೆರಗುಗೊಳಿಸಿದೆ.

ಏಪ್ರಿಲ್ 13 ರ ಮಧ್ಯರಾತ್ರಿಯೇ ತನ್ನ ಅಬ್ಬರವನ್ನು ಆರಂಭಿಸಿದ ಕೆಜಿಎಫ್-2 ಮೂರು ವರ್ಷಗಳ ಕಾಲ ಕಾದಿದ್ದ ಅಭಿಮಾನಿಗಳ ನಿರೀಕ್ಷೆಯನ್ನು ಸುಳ್ಳು ಮಾಡಿಲ್ಲ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿ ಸಹಾ ಕೆಜಿಎಫ್-2 ಸಿನಿಮಾಕ್ಕೆ ಅತ್ಯುತ್ತಮ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ವಿಶ್ವದಾದ್ಯಂತ ಸುಮಾರು 10 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆ ಗೊಂಡಿತು. ಮೊದಲ ದಿನವೇ ಬಿರುಗಾಳಿಯನ್ನು ಎಬ್ಬಿಸಿರುವ ಕೆಜಿಎಫ್-2 ನ ಮೊದಲ ದಿನದ ಕಲೆಕ್ಷನ್ ಬಗ್ಗೆ ಸಿನಿ ತಜ್ಞರ ಲೆಕ್ಕಾಚಾರ ಏನಿದೆ? ತಿಳಿಯೋಣ ಬನ್ನಿ‌.

ಕೆಜಿಎಫ್-2 ನ ಮೊದಲ ದಿನದ ಕಲೆಕ್ಷನ್ ಸುಮಾರು 125 ಕೋಟಿ ರೂ. ಎನ್ನುವ ಸುದ್ದಿಗಳು ಹರಿದಾಡಿವೆ. ಹಿಂದಿ ಭಾಷೆಯಲ್ಲಿ ಕೆಜಿಎಫ್-2 ಅಬ್ಬರವನ್ನೇ ಎಬ್ಬಿಸಿದ್ದು, ಈ ವರ್ಷನ್ ನಲ್ಲಿ‌ ಮೊದಲ ದಿನವೇ ಅಧಿಕ ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಯನ್ನು ಕೆಜಿಎಫ್-2 ಪಡೆದುಕೊಂಡಿದೆ. ಇದು ಬಾಹುಬಲಿ ದಾಖಲೆಯನ್ನು ಮುರಿದಿದೆ ಎನ್ನಲಾಗಿದೆ. ಹೌದು ಬಾಹುಬಲಿ 37 ಕೋಟಿ ರೂ. ಮೊದಲ ದಿನದ ಕಲೆಕ್ಷನ್ ಮಾಡಿತ್ತು ಎನ್ನಲಾಗಿದ್ದು, ಕೆಜಿಎಫ್-2 39 ಕೋಟಿ ಕಲೆಕ್ಷನ್ ಮಾಡಿ ಬಾಹುಬಲಿ ದಾಖಲೆಗೆ ಬ್ರೇಕ್ ಹಾಕಿದೆ.

ಇನ್ನು ವಿದೇಶಗಳ ಕಲೆಕ್ಷನ್ ಬಗ್ಗೆ ಸುದ್ದಿಗಳಾಗಿದ್ದು ಅಮೆರಿಕಾ ಒಂದರಲ್ಲೇ ಕೆಜಿಎಫ್-2 ಸಿನಿಮಾ 10 ಲಕ್ಷ ಡಾಲರ್ ಅಂದರೆ ಸುಮಾರು 7.5 ಕೋಟಿ ರೂ. ಗಳ ಸಂಗ್ರಹವಾಗಿದ್ದರೆ, ಬೇರೆ ಕಡೆಗಳಲ್ಲಿ ಸುಮಾರು 20 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಕೆಜಿಎಫ್-2 ಸಿನಿಮಾಕ್ಕೆ ಭಾಷಾ‌ ಬೇಧವಿಲ್ಲದೇ ಎಲ್ಲೆಡೆಯಿಂದಲೂ ಸಹಾ ಉತ್ತಮವಾದ ಪ್ರತಿಕ್ರಿಯೆಗಳು ಹರಿದು ಬರುತ್ತಿದ್ದು, ಕನ್ನಡದ ಈ ಪ್ಯಾನ್ ಇಂಡಿಯಾ ಸಿನಿಮಾ ಸ್ಯಾಂಡಲ್ವುಡ್ ನ ಕಡೆ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ.

Leave a Reply

Your email address will not be published.