ನಯನತಾರ ಜಾಗಕ್ಕೆ ಸಮಂತಾ: ಶಾರೂಖ್ ಸಿನಿಮಾದಿಂದ ನಯನತಾರ ಹೊರ ಬಂದಿದ್ದೇಕೆ??

Entertainment Featured-Articles News
40 Views

ನಟ ಶಾರೂಖ್ ಖಾನ್ ಗೆ ಅದೇಕೋ ಬಾಲಿವುಡ್ ನಲ್ಲಿ ಅವರ ಈ ಹಿಂದಿನ ಸಿನಿಮಾಗಳು ನಿರೀಕ್ಷಿತ ಮಟ್ಟದ ಯಶಸ್ಸನ್ನು ತಂದು ಕೊಡಲೇ ಇಲ್ಲ. ಅವರಿಗೆ ಸದ್ಯಕ್ಕಂತೂ ಒಂದು ಸೂಪರ್ ಹಿಟ್ ಸಿನಿಮಾ ಬೇಕೇ ಬೇಕು ಅನ್ನೋ ಹಾಗಿದೆ ಪರಿಸ್ಥಿತಿ. ಇನ್ನು ಕಳೆದ ಕೆಲವು ದಿನಗಳಿಂದ ಅಂತೂ ಮಗನ ಡ್ರ ಗ್ಸ್ ಕೇಸ್ ವಿಚಾರದಲ್ಲಿ ಶಾರೂಖ್ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಮಗನನ್ನು ಜೈಲಿನಿಂದ ಹೊರಗೆ ತರಲು ಹರಸಾಹಸ ಪಡ್ತಾ ಇರೋ ಶಾರೂಖ್ ಸದ್ಯಕ್ಕೆ ಯಾವುದೇ ಚಿತ್ರೀಕರಣದಲ್ಲೂ ಭಾಗವಹಿಸುತ್ತಿಲ್ಲ. ಅವರ ಪಠಾಣ್ ಹಾಗೂ ಲಯನ್ ಸಿನಿಮಾಗಳ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ.

ಬಾಲಿವುಡ್ ನಲ್ಲಿ ಒಂದು ಸೂಪರ್ ಹಿಟ್ ಸಿನಿಮಾ ನೀಡಬೇಕು ಅಂತ ಶಾರೂಖ್ ತಮಿಳಿನ ಪ್ರಖ್ಯಾತ ನಿರ್ದೇಶಕ ಆ್ಯಟ್ಲಿ ನಿರ್ದೇಶನದ ಹಿಂದಿ ಸಿನಿಮಾ ಪ್ರಾರಂಭ ಮಾಡಿದ್ರು. ಈ ಸಿನಿಮಾಕ್ಕೆ ಸದ್ಯಕ್ಕೆ ಲಯನ್ ಅನ್ನೊ ಹೆಸರನ್ನು ಇಟ್ಟಿದ್ದು, ಸಿನಿಮಾದಲ್ಲಿ ದಕ್ಷಿಣದ ಸ್ಟಾರ್ ನಟಿ ನಯನತಾರ ಶಾರೂಖ್ ಗೆ ನಾಯಕಿಯಾಗಿದ್ದಾರೆ ಎನ್ನುವ ವಿಷಯ ಸಾಕಷ್ಟು ಸುದ್ದಿಯಾಗಿತ್ತು. ಈ ಸಿನಿಮಾ ಮೂಲಕ ನಯನತಾರಾ ಬಾಲಿವುಡ್ ಗೆ ಎಂಟ್ರಿ ನೀಡಿದಕ್ಕೆ ಸಜ್ಜಾಗಿದ್ದರು. ಆದರೆ ಈಗ ಈ ಸಿನಿಮಾದ ಕುರಿತಾಗಿ ಹೊಸ ಅಪ್ಡೇಟ್ ಗಳು ಬಾಲಿವುಡ್ ಅಂಗಳದಲ್ಲಿ ಸುದ್ದಿಗಳಾಗಿ ಹರಿದಾಡಿದೆ.

ಶಾರೂಖ್ ತಮ್ಮ ಮಗನ ವಿಚಾರದಲ್ಲಿ ಸಮಸ್ಯೆ ಎದುರಿಸುತ್ತಿರೋ ಹಿನ್ನೆಲೆಯಲ್ಲಿ ಹೊಸ ಸಿನಿಮಾ ಶೂಟಿಂಗ್ ನಿಂತಿದೆ. ಆದರೆ ಇದೇ ವೇಳೆ ಸಿನಿಮಾ ನಾಯಕಿಯಾಗಿರೋ ನಯನತಾರಾ ಅವರು ಬೇರೆ ಸಿನಿಮಾಗಳನ್ನು ಒಪ್ಪಿಕೊಂಡರುವ ಕಾರಣ, ಮತ್ತೆ ಚಿತ್ರೀಕರಣ ಆರಂಭವಾದಾಗ ಡೇಟ್ಸ್ ಸಮಸ್ಯೆ ಆಗಬಹುದು ಎನ್ನೋ ಕಾರಣಕ್ಕೆ ಸಿನಿಮಾದಿಂದ ಹೊರ ಬರುವ ನಿರ್ಧಾರವನ್ನು ಮಾಡಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ನಯನತಾರಾ ಸಿನಿಮಾ ದಿಂದ ಹೊರ ಬಂದ್ರೆ ಶಾರೂಖ್ ಗೆ ಈ ಸಿನಿಮಾದಲ್ಲಿ ನಾಯಕಿಯಾಗೋದು ಯಾರು??

ಹೀಗೊಂದು ಪ್ರಶ್ನೆ ಮೂಡೋಕು ಮೊದಲೇ ಅದಕ್ಕೆ ಉತ್ತರ ಕೂಡಾ ಸಿಕ್ಕಿದೆ ಎನ್ನಲಾಗಿದೆ. ನಯನತಾರಾ ಜಾಗಕ್ಕೆ ದಕ್ಷಿಣದ ಮತ್ತೊಬ್ಬ ಸ್ಟಾರ್ ನಟಿ ಸಮಂತಾ ಎಂಟ್ರಿ ಕೊಡ್ತಾ ಇದ್ದಾರೆ ಎನ್ನಲಾಗಿದೆ. ಹೌದು ಶಾರೂಖ್ ಪಕ್ಕ ಲಯನ್ ಸಿನಿಮಾದಲ್ಲಿ ಸಮಂತಾ ನಾಯಕಿ ಆಗುವ ಚಾನ್ಸಸ್ ತುಂಬಾ ಇದೆ ಎನ್ನಲಾಗಿದೆ. ಈ ಹಿಂದೆ ನಯನತಾರಾ ಗಿಂತ ಮೊದಲು ಇದೇ ಅವಕಾಶ ಸಮಂತಾ ಗೆ ದಕ್ಕಿತ್ತು ಎನ್ನುವ ಸುದ್ದಿ ಕೂಡಾ ಇತ್ತು. ಆಗ ಸಮಂತಾ ಕೆಲವು ವೈಯಕ್ತಿಕ ಕಾರಣಗಳಿಂದ ಸಿನಿಮಾ ಆಫರ್ ಅನ್ನು ಒಪ್ಪಿಕೊಂಡಿರಲಿಲ್ಲ.

Leave a Reply

Your email address will not be published. Required fields are marked *