ನಯನತಾರಾ ವಿಘ್ನೇಶ್ ದಂಪತಿಗೆ ಸರ್ಪ್ರೈಸ್ ಕೊಟ್ಟ ಬಾಲಿವುಡ್ ಬೆಡಗಿ ಮಲೈಕಾ: ಪೋಸ್ಟ್ ವೈರಲ್

Entertainment Featured-Articles Movies News
60 Views

ತಮಿಳು ಸಿನಿಮಾ ರಂಗದ ಸ್ಟಾರ್ ಜೋಡಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ಮದುವೆಯ ನಂತರ ಸುಂದರವಾದ ಹಾಗೂ ಮಧುರ ಕ್ಷಣಗಳನ್ನು ಎಂಜಾಯ್ ಮಾಡುತ್ತಾ, ಸಂತಸದ ಅನುಭೂತಿಗಳನ್ನು ಕೂಡಿಡುತ್ತಿದ್ದಾರೆ. ಪ್ರಸ್ತುತ ನಯನತಾರಾ ಮತ್ತು ವಿಘ್ನೇಶ್ ದಂಪತಿಯು ಮಹಾನಗರ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ನಯನತಾರಾ ಬಾಲಿವುಡ್ ನಟ ಶಾರೂಖ್ ಖಾನ್ ಜೊತೆ ನಾಯಕಿಯಾಗಿ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ನಟಿ ಬಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ. ಮದುವೆ ನಂತರ ಮತ್ತೆ ನಟಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

ಹೀಗೆ ನಯನತಾರಾ ಮತ್ತು ವಿಘ್ನೇಶ್ ದಂಪತಿ ಮುಂಬೈನಲ್ಲಿರುವ ವೇಳೆಯಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಬಾಲಿವುಡ್ ನಟಿ, ಫಿಟ್ನೆಸ್ ನಿಂದಲೇ ಸಖತ್ ಸದ್ದು ಮಾಡುವ ಮಲೈಕಾ ಅರೋರಾ ಅವರನ್ನು ಭೇಟಿ ಮಾಡಿದ್ದಾರೆ. ಈ ಮೂವರು ಭೇಟಿಯಾದ ಕ್ಷಣದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಫೋಟೋ ನೋಡಿ ಮೆಚ್ಚುಗೆಯನ್ನು ನೀಡಿದ್ದಾರೆ. ಬಾಲಿವುಡ್ ಬ್ಯೂಟಿ ಮಲೈಕಾ ಅನಿರೀಕ್ಷಿತವಾಗಿ ನಯನತಾರಾ ಮತ್ತು ವಿಘ್ನೇಶ್ ದಂಪತಿಯನ್ನು ರೆಸ್ಟೋರೆಂಟ್ ಒಂದರಲ್ಲಿ ಭೇಟಿಯಾಗಿದ್ದಾರೆ.

ಮಲೈಕಾ ನವ ದಂಪತಿಗಳನ್ನು ಭೇಟಿ ಮಾಡಿ ಅವರಿಗೆ ಶುಭ ಹಾರೈಸಿದ್ದಾರೆ. ಅನಂತರ ಈ ಸುಂದರ ಕ್ಷಣದ ನೆನಪಿಗಾಗಿ ನಯನತಾರಾ ಮತ್ತು ವಿಘ್ನೇಶ್ ದಂಪತಿಯೊಂದಿಗೆ ಸೆಲ್ಫಿ ತೆಗೆದುಕೊಂಡ ಮಲೈಕಾ ಅರೋರಾ ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು, ಮತ್ತೊಮ್ಮೆ ನವ ದಂಪತಿಯ ಹೊಸ ಜೀವನ ಸಂತೋಷವಾಗಿರಲೆಂದು ಶುಭ ಹಾರೈಸಿದ್ದಾರೆ. ಅವರೊಡನೆ ಭೇಟಿ ಬಹಳ ಖುಷಿ ನೀಡಿದೆ ಎಂದು ಮಲೈಕಾ ಬರೆದುಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ನಯನತಾರಾ ಹಾಗೂ ಶಾರೂಖ್ ಖಾನ್ ಅಭಿನಯದ ಜವಾನ್ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೆಶಕ ಆ್ಯಟ್ಲಿ ನಿರ್ದೇಶನ ಮಾಡುತ್ತಿದ್ದು, ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಬಾಲಿವುಡ್ ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ನಟ ಶಾರೂಖ್ ಖಾನ್ ಅವರಿಗೆ ಅವರ ಹೊಸ ಸಿನಿಮಾಗಳು ಅದೃಷ್ಟವನ್ನು ತರುವುದಾ? ಎಂದು ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *