ನಯನತಾರಾ ಕನಸು ನನಸಾಗೇ ಹೋಯ್ತು: ಮದುವೆ ನಂತರ ಪತಿಯಿಂದ ಸಿಕ್ಕಿದ ದುಬಾರಿ ಉಡುಗೊರೆ ಏನು ಗೊತ್ತಾ??

Entertainment Featured-Articles Movies News

ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನ ತಾರಾ ಅವರು ಇತ್ತೀಚಿಗೆ ಸುದ್ದಿಯಾಗಿದ್ದು ಅವರ ಮದುವೆಯ ವಿಚಾರವಾಗಿ. ಮದುವೆಯ ನಂತರ ನಟಿ ನಯನತಾರಾ ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ಹೊಸ ಸುದ್ದಿಯೊಂದು ಹೊರಬಿದ್ದಿದೆ. ನಟಿ ನಯನತಾರಾ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ಸಪ್ತಪದಿ ತುಳಿದಿರವ ವಿಚಾರ ಎಲ್ಲರಿಗೂ ತಿಳಿದೇ ಇದೆ. ನಿರ್ದೇಶಕ ವಿಜ್ಞೇಶ್ ಹಾಗೂ ಸ್ಟಾರ್ ನಟಿ ನಯನತಾರಾ ಇಬ್ಬರೂ ಕೂಡಾ ಸಾಕಷ್ಟು ಆಸ್ತಿಗಳನ್ನು ಮಾಡಿದ್ದಾರೆ.

ಈಗ ಈ ಜೋಡಿಯು ಮತ್ತೊಂದು ಹೊಸ ಆಸ್ತಿ ಖರೀದಿಗೆ ಮುಂದಾಗಿದ್ದಾರೆ. ಹೌದು, ನಯನತಾರಾ ಮತ್ತು ವಿಘ್ನೇಶ್ ದಂಪತಿ ಈಗ ಹೊಸ ಮನೆಯೊಂದನ್ನು ಖರೀದಿ ಮಾಡುವ ಪ್ಲಾನ್ ಮಾಡಿದ್ದಾರೆ ಎನ್ನುವ ವಿಚಾರವೊಂದು ಸದ್ದು ಮಾಡಿದೆ. ಅಲ್ಲದೇ ಈ ಹೊಸ ಮನೆಯ ಖರೀದಿ ವಿಚಾರದಲ್ಲಿ ನಟಿ ನಯನತಾರಾ ಸ್ವತಃ ಸಖತ್ ಥ್ರಿಲ್ ಆಗಿದ್ದಾರೆ ಹಾಗೂ ಬಹಳ ಖುಷಿ ಪಡುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ನಯನ ತಾರಾ ಅವರು ಖರೀದಿ ಮಾಡುತ್ತಿರುವ ಹೊಸ ಮನೆಯು ಅವರ ನೆಚ್ಚಿನ ಸ್ಟಾರ್ ನಟನ ಮನೆಯ ಪಕ್ಕದಲ್ಲೇ ಇದೆ ಎನ್ನುವುದಾಗಿದೆ.

ನಟಿ ನಯನತಾರಾ ತಮಿಳು ಚಿತ್ರ ರಂಗದ ಸ್ಟಾರ್ ನಟ ತಲೈವಾ ರಜನೀಕಾಂತ್ ಅವರ ಅಭಿಮಾನಿ. ತನ್ನ ಚಿಕ್ಕ ವಯಸ್ಸಿನಿಂದ ರಜನೀಕಾಂತ್ ಸಿನಿಮಾಗಳನ್ನು ನೋಡಿ, ಬೆಳೆದ ನಟಿ ನಯನತಾರಾ ಅವರಿಗೆ ಮೊದಲ ಬಾರಿ ರಜನೀಕಾಂತ್ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಾಗ ಅವರು ಪಟ್ಟ ಖುಷಿ ಅಷ್ಟಿಷ್ಟಲ್ಲ, ಅದು ತನ್ನ ಜೀವಮಾನದ ಸಾಧನೆಯೇ ಆಗಿತ್ತು ಎಂದು ನಟಿ ಸಂದರ್ಶನವೊಂದರಲ್ಲಿ ಹೇಳಿದ್ದು ಉಂಟು. ಅಲ್ಲದೇ ನಟ ರಜನೀಕಾಂತ್ ಅವರನ್ನು ದಿನವೂ ನೋಡಬೇಕು ಎನ್ನುವುದು ನಟಿಯ ಆಸೆಯಾಗಿತ್ತು.

ಈಗ ನಟಿಯ ಇಂತಹುದೊಂದು ಆಸೆ, ಕನಸು ನಿಜವಾಗಲು ಹೊರಟಿದೆ. ನಟಿ ನಯನತಾರಾ ಅವರು ಖರೀದಿ ಮಾಡಲು ಹೊರಟಿರುವ ಹೊಸ ಮನೆಯು ನಟ ರಜನೀಕಾಂತ್ ಅವರ ಮನೆಯ ಪಕ್ಕದಲ್ಲೇ ಇದೆ ಎನ್ನಲಾಗಿದೆ. ಇಲ್ಲಿ ಮತ್ತೊಂದು ವಿಶೇಷ ಏನೆಂದರೆ ನಯನತಾರಾ ಅವರ ಪತಿ ವಿಘ್ನೇಶ್ ತಮ್ಮ ಪ್ರೀತಿಯ ಪತ್ನಿ ನಯನತಾರಾ ಅವರಿಗೆ ಮದುವೆ ನಂತರ ಕೊಡುತ್ತಿರುವ ದುಬಾರಿ ಉಡುಗೊರೆ ಇದಾಗಿದೆ. ರಜನೀಕಾಂತ್ ಅವರ ಮನೆಯ ಪಕ್ಕದಲ್ಲೇ ನಯನತಾರಾ ಮನೆ ಖರೀದಿ ಮಾಡುತ್ತಿರುವುದು ಈಗ ತಮಿಳು ಚಿತ್ರರಂಗದಲ್ಲಿ ಹಾಟ್ ಟಾಪಿಕ್ ಆಗಿದೆ.

Leave a Reply

Your email address will not be published.