ನಮ್ಮ ಮಗು, ನಮ್ಮ ಪ್ರಪಂಚ: ಮಗನ ಮೊದಲ ಜನ್ಮದಿನಕ್ಕೆ ವಿಶೇಷ ಪೋಸ್ಟ್ ಹಂಚಿಕೊಂಡ ಮೇಘನಾ ರಾಜ್

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಹಾಗೂ ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಮುದ್ದಾಗ ಮಗು ರಾಯನ್ ರಾಜ್ ಸರ್ಜಾ ಜನ್ಮದಿನ ಇಂದು. ಇದು ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬಕ್ಕೆ ಇಂದು ವಿಶೇಷ ದಿನ. ಮೇಘನಾ ಅವರ ಜೀವನದಲ್ಲಿ ಹೊಸ ನಗುವಿನ ಅಲೆಯನ್ನು ತಂದ ತಮ್ಮ ಮಗನ ಜನ್ಮದಿನದ ಹಿನ್ನೆಲೆಯಲ್ಲಿ ಮೇಘನಾ ಅವರು ನಿನ್ನೆ ರಾತ್ರಿ ಹನ್ನೆರಡು ಗಂಟೆಯ ಸಮಯದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡು ಮಗ‌ನಿಗೆ ಜನ್ಮದಿನದ ಶುಭಾಶಯವನ್ನು ತಿಳಿಸಿದ್ದಾರೆ ಮೇಘನಾ. ಮಗನ ಮೊದಲ ವರ್ಷದ ಜನ್ಮದಿನ ಬಹಳ ವಿಶೇಷವಾಗಿದೆ ಮೇಘನಾ ಅವರಿಗೆ.

ಮೇಘನಾ ಅವರು ತಮ್ಮ ಮುದ್ದು ಮಗನನ್ನು ಬಿಗಿದಪ್ಪಿ ಮುದ್ದಾಡುತ್ತಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದು, ಅದರ ಜೊತೆಗೆ ಕೆಲವು ಸಾಲುಗಳನ್ನು ಸಹಾ ಬರೆದುಕೊಂಡಿದ್ದಾರೆ. ಮೇಘನಾ ತಮ್ಮ ಪೋಸ್ಟ್ ನಲ್ಲಿ, ನಮ್ಮ ಮಗು.. ನಮ್ಮ ಪ್ರಪಂಚ.. ನಮ್ಮ ವಿಶ್ವ .. ನಮ್ಮ ಎಲ್ಲವೂ! ಚಿರು.. ನಮ್ಮ ಪುಟ್ಟ ರಾಜಕುಮಾರನಿಗೆ ಇಂದು ಒಂದು ವರ್ಷ!! ಅವನು ‘ಅಮ್ಮ ನಿಲ್ಲಿಸು!’ ಎನ್ನುವವರೆಗೆ ಅವನನ್ನು ಪ್ರೀತಿಯಿಂದ ಹಿಂಡುತ್ತೇನೆ. ಅವನು ನಾಚಿ,‌ ಕೆಂಪಾಗುವವರಗೆ ಮುದ್ದಾಡುತ್ತೇನೆ.

ಅವನು ತನ್ನ ಕಣ್ಣುಗಳನ್ನು ನನ್ನ ಕಡೆಗೆ ತಿರುಗಿಸಿ ನೋಡುವವರೆಗೂ ಅವನನ್ನು ಚುಂಬಿಸುತ್ತೇನೆ ಮತ್ತು ಅವನು ನನ್ನ ಕಡೆ ತಿರುಗಿ ‘ಅಮ್ಮಾ! ಎಂದ ಮೇಲೆ ಅವನನ್ನು ಚುಂಬಿಸುವುದನ್ನ ಮುಂದುವರಿಸುತ್ತೇ‌ನೆ, ಹೆಚ್ಚು ಚುಂಬಿಸುತ್ತಾನೆ! ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಮಗು .. ನೀನು ತುಂಬಾ ಬೇಗ ಬೇಗ ಬೆಳೆಯುತ್ತಿದ್ದೀಯಾ!! ನಾವು ಸದಾ ಕಾಲ ಪರಸ್ಪರರ ತೋಳುಗಳಲ್ಲಿ ಮುದ್ದಾಡಲು ನಾನು ಬಯಸುತ್ತೇನೆ! ಜನ್ಮದಿನದ ಶುಭಾಶಯಗಳು ರಾಯನ್! ಅಪ್ಪ ಮತ್ತು ಅಮ್ಮ ನಿನ್ನನ್ನು ಪ್ರೀತಿಸುತ್ತಾರೆ! ಎಂದು ಬರೆದುಕೊಂಡಿದ್ದಾರೆ.

Leave a Comment