ನಮ್ಮ ಬಳಿ ಡ್ರ” ಗ್ಸ್ ಇರಲಿಲ್ಲ, ಅಧಿಕಾರಿಗಳೇ ಅದನ್ನು ನಮ್ಮ ಬ್ಯಾಗಲ್ಲಿ ಇಟ್ರು: ಆರ್ಯನ್ ಖಾನ್ ಸ್ನೇಹಿತನ ಆರೋಪ

Written by Soma Shekar

Published on:

---Join Our Channel---

ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರ ಗ್ಸ್ ಪ್ರಕರಣದಲ್ಲಿ ಎನ್ ಸಿ ಬಿ ವಶದಲ್ಲಿ ಇದ್ದು ವಿಚಾರಣೆ ನಡೆಯುತ್ತಿದೆ. ಈ ವೇಳೆ ದಿನದಿಂದ ದಿನಕ್ಕೊಂದು ಹೊಸ ಸುದ್ದಿ ಹೊರಗೆ ಬರುತ್ತಿದೆ. ಬಾಲಿವುಡ್ ನ ಸ್ಟಾರ್ ನಟರು ನಾವು ಶಾರುಖ್ ಪರ, ಆರ್ಯನ್ ಖಾನ್ ಬಂ ಧ ನ ಸರಿಯಲ್ಲ, ಆತನನ್ನು ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಬೇಡಿಕೆ ಇಟ್ಟಿದ್ದಾರೆ. ಈಗ ಇವೆಲ್ಲವುಗಳ ನಡುವೆ ಎನ್ ಸಿ ಬಿ ಅಧಿಕಾರಿಗಳ ಮೇಲೆ ಅನುಮಾನ ಮೂಡಿದೆ.

ಹೌದು, ಎನ್ ಸಿ ಬಿ ಅಧಿಕಾರಿಗಳು ವಿನಾಕಾರಣ ಆರ್ಯನ್ ಖಾನ್ ಮತ್ತು ಆತನ ಗೆಳೆಯ ಅರ್ಬಾಜ್ ಸೇಠ್ ಅನ್ನು ಬಂ ಧಿ ಸಿದ್ದಾರೆ ಎನ್ನುವ ಅನುಮಾನ ಮೂಡಿದೆ. ಆರ್ಯನ್ ಖಾನ್, ಅರ್ಬಾಜ್ ಸೇಠ್ ಹಾಗೂ ಮುನ್ ಮುನ್ ಧಮೇಚಾರ ಮೂವರನ್ನು ಎನ್ ಸಿ ಬಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ಇನ್ನಷ್ಟು ದಿನ ವಶಕ್ಕೆ ನೀಡುವಂತೆ ಅನುಮತಿ ಕೋರಿತ್ತು.

ನ್ಯಾಯಾಲಯದಲ್ಲಿ ಮಾತನಾಡಿದ ಅರ್ಬಾಜ್ ಸೇಠ್ “ನಾವು ಡ್ರ ಗ್ಸ್ ಹೊಂದಿರಲಿಲ್ಲ. ಅಧಿಕಾರಿಗಳೇ ನಮ್ಮ ಬ್ಯಾಗ್ ನಲ್ಲಿ ಡ್ರ ಗ್ಸ್ ಇಟ್ಟು ಅದನ್ನು ವಶಪಡಿಸಿಕೊಂಡಿದ್ದಾರೆ. ಬೇಕಾದರೆ ಆ ಕ್ರೂಸ್ ಶಿಪ್ ನ ಸಿಸಿ ಟಿವಿ ದೃಶ್ಯಗಳನ್ನು ಒಮ್ಮೆ ಪರಿಶೀಲನೆ ಮಾಡಲಿ” ಎಂದು ನ್ಯಾಯಾಧೀಶರ ಮುಂದೆ ಹೇಳಿದ್ದಾರೆ ಎನ್ನಲಾಗಿದೆ. ಈ ಕುರಿತಾದ ಮಾಹಿತಿಯನ್ನು ಲೈವ್ ಲಾ ವರದಿ ಮಾಡಿದೆ.

ಹೌದು ಲೈವ್ ಲಾ ಕೋರ್ಟ್ ನಲ್ಲಿ ನಡೆಯುವ ವಾದ ಹಾಗೂ ವಿಚಾರಣೆಯ ಮಾಹಿತಿಯನ್ನು ಯಥಾವತ್ತಾಗಿ ಟ್ವಿಟರ್ ನಲ್ಲಿ ಪ್ರಕಟಿಸುತ್ತದೆ. ಅಲ್ಲದೇ ಲೈವ್ ಲಾ ನೀಡುವ ಸುದ್ದಿಗಳು ಬಹಳ ವಿಶ್ವಾಸಾರ್ಹವಾದುದು ಎನ್ನಲಾಗಿದೆ. ಅರ್ಬಾಜ್ ಸೇಠ್ ಮರ್ಚೆಂಟ್ ನ ತಂದೆ ಕೂಡಾ ಒಬ್ಬ ಹಿರಿಯ ವಕೀಲರಾಗಿದ್ದಾರೆ. ಅವರು ಕೂಡಾ ಎರಡು ದಿನಗಳ ಹಿಂದೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಅರ್ಬಾಜ್ ಸೇಠ್ ನ ತಂದೆ ಮಾತನಾಡುತ್ತಾ ನನ್ನ ಮಗ ಡ್ರ ಗ್ಸ್ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಪ್ರಕರಣದಲ್ಲಿ ಏನೋ ಗೊಂದಲವಿದೆ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದರು. ‌ಈಗ ಅರ್ಬಾಜ್ ಸೇಠ್ ಹೇಳಿದ್ದಾನೆ ಎನ್ನಲಾಗಿರುವ ಮಾತಿನ ನಂತರ ಆ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ಇದೇ ರೀತಿಯ ಅನುಮಾನಗಳನ್ನು ಇನ್ನೂ ಅನೇಕರು ಸಹಾ ವ್ಯಕ್ತಪಡಿಸಿದ್ದಾರೆ.

Leave a Comment