ನಮ್ಮ ದೇಹವನ್ನು ನಾವೇ ಲವ್ ಮಾಡಬೇಕು: ನಟಿ ರಾಗಿಣಿ ದ್ವಿವೇದಿ ಹೀಗೆ ಹೇಳಿದ್ದೇಕೆ??

Entertainment Featured-Articles Movies News

ಸಿನಿಮಾ ಹಾಗೂ ಕಿರುತೆರೆಯಂತಹ ಗ್ಲಾಮರ್ ಜಗತ್ತಿನಲ್ಲಿ ಅಂದಕ್ಕೆ ಮೊದಲ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಆದ್ದರಿಂದಲೇ ಬಾಡಿ ಶೇಮಿಂಗ್ ನಂತಹ ಘಟನೆಗಳು ಕೂಡಾ ಆಗಾಗ ಇಲ್ಲಿ ನಡೆಯುತ್ತಲೇ ಇರುತ್ತದೆ. ನಟಿಯರು ತಮ್ಮ ದೇಹವನ್ನು ಸುಂದರವಾಗಿ ಇಟ್ಟುಕೊಳ್ಳಲು ಸ್ವಯಂ ಪ್ರೇರಣೆಯ ಬದಲಾಗಿ, ಬೇರೆಯವರು ಹೇರುವ ಒತ್ತಡದ ಕಾರಣದಿಂದಲೇ ಅದರ ಕಡೆಗೆ ಗಮನವನ್ನು ನೀಡುತ್ತಾರೆ ಎಂದು ಕೆಲವರು ಆ ರೋ ಪಗಳನ್ನು ಸಹ ಮಾಡಿದ್ದಾರೆ. ಬಾಡಿ ಶೇಮಿಂಗ್ ನಿಂದಾಗಿ ಕೆಲವರು ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದಾರೆ. ಇನ್ನು ಕೆಲವರು ದೇಹದಲ್ಲಿ ತೂಕವನ್ನು ಇಳಿಸಿಕೊಳ್ಳುವ ಸಲುವಾಗಿ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ.

ಇಂತಹುದೇ ಒಂದು ಘಟನೆಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಕನ್ನಡ ಕಿರುತೆರೆಯ ಯುವನಟಿ ಚೇತನ ರಾಜ್ ಅವರು ತಮ್ಮ ಪ್ರಾಣವನ್ನೇ ಕಳೆದುಕೊಂಡ ಘಟನೆ ದೊಡ್ಡ ಸುದ್ದಿಯಾಯಿತು. ನಟಿ ಚೇತನಾ ರಾಜ್ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳುವ ಸಲುವಾಗಿ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ತಮ್ಮ ಪ್ರಾಣಕ್ಕೆ ಕು ತ್ತನ್ನು ತಂದುಕೊಂಡರು. ಈ ಘಟನೆಯ ನಂತರ ಸ್ಯಾಂಡಲ್ವುಡ್ ನ ಕಲಾವಿದರು ಬಾಡಿ ಶೇಮಿಂಗ್ ಕುರಿತಾಗಿ ತಮ್ಮ ಅಸಮಾಧಾನ ಹಾಗೂ ಬೇಸರವನ್ನು ವ್ಯಕ್ತಪಡಿಸಿದರು.

ಈಗ ವಿಚಾರವಾಗಿ ಸ್ಯಾಂಡಲ್ವುಡ್ ನ ಮತ್ತೊಬ್ಬ ಜನಪ್ರಿಯ ನಟಿ ರಾಗಿಣಿ ದ್ವಿವೇದಿ ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನಿನ್ನೆ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಂಡ ನಟಿ ರಾಗಿಣಿ ದ್ವಿವೇದಿ ಯವರು ಈ ವೇಳೆಯಲ್ಲಿ ಅಗಲಿದ ನಟಿ ಚೇತನ ರಾಜ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಚೇತನಾ ರಾಜ್ ಅವರೊಡನೆ ನಡೆದ ಘಟನೆಯ ಬಗ್ಗೆ ವಿಶಾದವನ್ನು ವ್ಯಕ್ತಪಡಿಸಿದ್ದಾರೆ.

ನಟಿ ರಾಗಿಣಿ ದ್ವಿವೇದಿ ಅವರು ಮಾತನಾಡುತ್ತಾ, ನಾವು ಯಾರು ನಮ್ಮ ಬಗ್ಗೆ ಏನು ಅನ್ನುತ್ತಾರೆ ಎಂದು ತಲೆಕೆಡಿಸಿಕೊಳ್ಳುವುದು ಬೇಕಾಗಿಲ್ಲ. ನಾವು ಮೊದಲು ನಮ್ಮ ದೇಹವನ್ನು ಪ್ರೀತಿಸಬೇಕು. ಹಾಗೆ ನಮ್ಮ ದೇಹವನ್ನು ನಾವು ಪ್ರೀತಿಸಿ ಕೊಂಡರೆ ಇಂತಹ ಅನಾಹುತಗಳು ನಿಜಕ್ಕೂ ನಡೆಯುವುದಿಲ್ಲ. ಆ ಹುಡುಗಿಯ ಸಾವು ನಿಜಕ್ಕೂ ನನಗೆ ಆ ಘಾ ತ ವನ್ನು ಉಂಟು ಮಾಡಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *