ನಮ್ಮಿಂದ ಆಗಲ್ಲ ಅಂದ ನೆಟ್ಟಿಗರು: ಈ ಚಿತ್ರದಲ್ಲಿ ಹಾವು ಎಲ್ಲಿದೆ? ನಿಮಗಾದ್ರೂ ಸಿಗುತ್ತಾ? ನೋಡಿ!!

Written by Soma Shekar

Updated on:

---Join Our Channel---

ಸಾಮಾಜಿಕ ಜಾಲತಾಣಗಳು ಇಂದಿನ ಅದ್ಭುತ ಮನರಂಜನೆಯ ವೇದಿಕೆಗಳು, ಹೊಸ ಹೊಸ ವಿಷಯಗಳು, ಆಲೋಚನೆಗಳು, ಆವಿಷ್ಕಾರಗಳು ಹಾಗೂ ಪ್ರಯತ್ನಗಳನ್ನು ಜಗತ್ತಿನ ಮುಂದೆ ತರಲು ಸುಲಭವಾಗಿ ಸಿಗುವ ವೇದಿಕೆಗಳು ಸಹಾ ಆಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆಗೆ ಕೊರತೆ ಖಂಡಿತ ಇಲ್ಲ. ವೈರಲ್ ವೀಡಿಯೋಗಳು, ಫೋಟೋ ಪಜಲ್ ಗಳು ಹೀಗೆ ನೂರೆಂಟು ವಿಷಯಗಳು ಗಮನವನ್ನು ಸೆಳೆಯುವುದು ಮಾತ್ರವೇ ಅಲ್ಲದೇ ಒಳ್ಳೆ ಟೈಮ್ ಪಾಸ್ ಮಾತ್ರವೇ ಅಲ್ಲದೇ ಮೆದುಳಿಗೆ ಮತ್ತು ಕಣ್ಣಿಗೆ ಕೂಡಾ ಸವಾಲನ್ನು ಒಡ್ಡುತ್ತವೆ.

ಹೌದು,‌ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಪಜಲ್ಸ್ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತವೆ. ನೋಡಲು ಆಕರ್ಷಕವಾಗಿ ಕಾಣುವ ಫೋಟೋಗಳಲ್ಲಿ ಅಡಗಿರುವ ರಹಸ್ಯ ಅಥವಾ ಅದರಲ್ಲಿ ಅಡಗಿರುವ ವಸ್ತುವನ್ನೋ, ಪ್ರಾಣಯನ್ನೋ ಎಲ್ಲಿದೆ ಎಂದು ಕಂಡು ಹಿಡಿಯುವುದು ಅಕ್ಷರಶಃ ಒಂದು ಸವಾಲು ಎನಿಸುತ್ತದೆ. ಅಲ್ಲದೇ ಇಂತಹ ಫೋಟೋ ಪಜಲ್ಸ್ ಬಹಳ ಬೇಗ ವೈರಲ್ ಆಗುವುದರ ಜೊತೆಗೆ ಆಸಕ್ತಿಯುಳ್ಳವರ ಕಣ್ಣಿಗೆ ಹಾಗೂ ಬುದ್ಧಿಗೆ ಒಂದು ಸವಾಲನ್ನು ಹಾಕುತ್ತದೆ.

ಇಂತಹ ಫೋಟೋ ಪಜಲ್ ಗಳನ್ನು ನೋಡಿದಾಗ ದೃಷ್ಟಿ ಸೂಕ್ಷ್ಮವಾಗಿ ಮತ್ತು ಚುರುಕಾಗಿ ಇರುವವರು ಬಹಳ ಬೇಗ ಪಜಲ್ ಬಿಡಿಸಿದರೆ, ಇನ್ನೂ ಕೆಲವರು ತಾಳ್ಮೆ ಕಳೆದುಕೊಂಡು ಇದೆಲ್ಲಾ ಫೇ ಕ್ ಎಂದು ಉಡಾಫೆಯಿಂದ ಹೇಳಿ, ಟಾಸ್ಕ್ ಅರ್ಧಕ್ಕೆ ಕೈ ಬಿಡುತ್ತಾರೆ. ಪ್ರಸ್ತುತ ಅಂತಹುದೇ ಒಂದು ಫೋಟೋ ಪಜಲ್ ನೆಟ್ಟಿಗರ ಮುಂದೆ ಬಂದಿದೆ. ನೀವು ಸಹಾ ತಾಳ್ಮೆ ಇದ್ದರೆ ಈ ಫೋಟೋ ಪಜಲ್ ಅನ್ನು ಬಿಡಿಸುವ ಪ್ರಯತ್ನವನ್ನು ಖಂಡಿತ ಮಾಡಬಹುದು. ನಿಮ್ಮ‌ ಕಣ್ಣು ಹಾಗೂ ಮೆದುಳಿಗೆ ಕೆಲಸ ನೀಡಬಹುದು.

ಹೌದು ಈಗ ವೈರಲ್ ಆಗುತ್ತಿರುವ ಫೋಟೋದಲ್ಲಿ ಒಂದು ಹಾವು ಇದೆ, ಆದರೆ ಸೂಕ್ಷ್ಮವಾಗಿ ನೋಡದ ಹೊರತು ಆ ಹಾವು ಎಲ್ಲಿದೆ? ಎಂದು ಗುರ್ತಿಸುವುದು ಅಸಾಧ್ಯ. ಈಗಾಗಲೇ ಬಹಳಷ್ಟು ಜನರು ಹಾವನ್ನು ಗುರುತಿಸಲು ಆಗದೇ ಸುಮ್ಮನಾಗಿದ್ದಾರೆ. ಆದರೆ ಖಂಡಿತ ಚಿತ್ರದಲ್ಲಿ ಹಾವು ಇದ್ದು, ಇದು ಖಚಿತವಾಗಿ ನಿಮ್ಮ ದೃಷ್ಟಿಗೆ ಒಂದು ದೊಡ್ಡ ಸವಾಲಾಗಲಿದೆ. ಇನ್ನೇಕೆ ತಡ ಮಾಡುವಿರಿ, ಸ್ವಲ್ಪ ನಿಮ್ಮ ಬುದ್ಧಿಯನ್ನು ಉಪಯೋಗಿಸಿ, ನಿಮ್ಮ ಕಣ್ಣುಗಳಿಗೆ ಈಗಲೇ ಕೆಲಸ ನೀಡಿ, ನಿಮಗೆ ಹಾವು ಕಾಣಿಸುವುದೇನು?? ಪರೀಕ್ಷೆ ಮಾಡಿ.

Leave a Comment