ನಮ್ಮಮ್ಮ ಚಪ್ಪಲಿ ತಗೊಂಡು ಹೊಡೀತಾರೆ: ಬಿಗ್ ಬಾಸ್ ಮನೇಲಿ ಸೋನು ಬೇಸರದಿಂದ ಹೀಗೆ ಹೇಳಿದ್ಯಾಕೆ??

Entertainment Featured-Articles Movies News
30 Views

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಒಂದು ಒಂದು ವಾರ ಮುಗಿಸಿ ಎರಡನೇ ಭರ್ಜರಿ ವಾರ ಆರಂಭವಾಗಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇರೋದು ಯಾರು ಅಂದ್ರೆ ತಟ್ಟನೆ ಸಿಗೋ ಉತ್ತರ ಒಂದೇ ಅದೇ ಸೋನು ಶ್ರೀನಿವಾಸ್ ಗೌಡ‌. ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಸಖರ್ ಸದ್ದು ಮಾಡಿರುವ ಸೋನು ಇದೀಗ ಬಿಗ್ ಬಾಸ್ ನಲ್ಲೂ ಸಹಾ ಮಿಂಚುತ್ತಿದ್ದಾರೆ. ಬಿಗ್ ಬಾಸ್ ಮನೆಯೊಳಕ್ಕೆ ಬಂದಾಗಿನಿಂದಲೂ ಸಹಾ ಸೋನು ಒಂದಲ್ಲಾ ಒಂದು ವಿಚಾರವಾಗಿ ಕಿರಿಕ್ ಮಾಡುತ್ತಾ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ. ಸೋನು ಅವರ ವಿ ರೋ ಧಿಗಳಿಗೆ ಇದು ಹಿಡಿಸದೇ ಹೋದರೂ, ಅವರ ಬೆಂಬಲಿಗರಿಗೆ ಮಾತ್ರ ಇದು ಭರ್ಜರಿ ಮನರಂಜನೆಯನ್ನು ನೀಡಿದೆ.

ಬಿಂದಾಸ್ ಮಾತನಾಡುತ್ತಾ, ಮನೆಯವರ ಜೊತೆ ಗಲಾಟೆ ಮಾಡಿಕೊಳ್ಳುವ ಸೋನು ಗೌಡ ಮೊದಲ ವಾರದಲ್ಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬರಲು ನಾಮಿನೇಟ್ ಆಗಿದ್ದರು. ಆದರೆ ಜನರ ಓಟಿನಿಂದ ಎಲಿಮಿನೇಷನ್ ತಪ್ಪಿಸಿಕೊಂಡಿದ್ರು ಸೋನು. ಆದ್ರೆ ಈಗ ಎರಡನೇ ವಾರ ಮತ್ತೊಮ್ಮೆ ಸೋನು ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಎರಡನೇ ವಾರ ಸಹಾ ಮತ್ತೊಮ್ಮೆ ತಾನು ನಾಮಿನೇಟ್ ಆಗಿರುವುದಕ್ಕೆ ಸೋನು ಗೌಡ ಅವರಿಗೆ ಬಹಳ ಬೇಸರವಾಗಿದೆ. ಈಗ ಅವರ ಆಲೋಚನೆ ವಾರಾಂತ್ಯದ ಎಪಿಸೋಡ್ ಗಳ ಕಡೆಗೆ ಹೊರಳಿದೆ.

ಹೌದು, ಸೋನು ನಾಮಿನೇಟ್ ಆಗಿರುವುದರಿಂದ‌ ವಾರಾಂತ್ಯದಲ್ಲಿ ನಾಮಿನೇಟ್ ಆಗಿರುವ ಸದಸ್ಯರ ಕುಟುಂಬದ ಸದಸ್ಯರು ಹಾಜರಾಗಬೇಕಾಗುತ್ತದೆ. ಹಾಗಾಗಿ ಈ ವಾರ ಸಹಾ ತಾನು ನಾಮಿನೇಟ್ ಆಗಿರುವುದರಿಂದ ಈ ವಾರಾಂತ್ಯದಲ್ಲಿ ಸಹಾ ತಮ್ಮ ತಾಯಿ ಸುದೀಪ್ ಅವರು ನಡೆಸಿಕೊಡುವ ಕಾರ್ಯಕ್ರಮಕ್ಕೆ ಹಾಜರಿರುತ್ತಾರೆ ಎಂದು ಅರ್ಥ ಮಾಡಿಕೊಂಡಿದ್ದು, ಮನೆಯಿಂದ ಆಚೆ ಹೋದರೆ ನಮ್ಮಮ್ಮ ಚಪ್ಪಲಿ ತಗೊಂಡು ಹೊಡೀತಾರೆ ಎಂದು ಹೇಳುತ್ತಾ, ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಸೋನು ಟಾಸ್ಕ್ ಒಂದರ ಭಾಗವಾಗಿ ನಂದಿನಿ ಅವರನ್ನು ನಾಮಿನೇಟ್ ಮಾಡಿದರು.

ನಂದಿನಿ ತನಗೆ ಟಫ್ ಕಾಂಪಿಟೇಟರ್ ಅವರು ತುಂಬಾ ಚೆನ್ನಾಗಿ ಆಡ್ತಾ ಇದ್ದಾರೆ ಎಂದು ಹೇಳಿದ್ರು ಸೋನು. ಆದ್ರೆ ಅನಂತರ ಜಶ್ವಂತ್ ಆಟ ಗೆದ್ದು, ನಾಮಿನೇಟ್ ಮಾಡುವ ಅವಕಾಶ ಸಿಕ್ಕಾಗ ಸೋನು ಅವರ ಹೆಸರನ್ನು ಹೇಳಿದ್ದು, ಸೋನು ಮನೆಯಲ್ಲಿ ಯಾರೊಂದಿಗೂ ಬೆರೆಯುವುದಿಲ್ಲ ಹಾಗೂ ನನ್ನ ಗರ್ಲ್ ಫ್ರೆಂಡ್ ಅನ್ನು ನಾಮಿನೇಟ್ ಮಾಡಿದ್ದಾರೆ ಎನ್ನುವ ಕಾರಣ ನೀಡಿ ಸೋನು ನ ನಾಮಿನೇಟ್ ಮಾಡಿ ತಮ್ಮ ಗರ್ಲ್ ಫ್ರೆಂಡ್ ಹೆಸರು ಹೇಳಿದ್ದಕ್ಕೆ ಸರಿಯಾದ ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *