ನಮ್ಮನ್ನು ಕೊ”ಲ್ಲಲು ಬರುತ್ತಿದ್ದಾರೆಂದು ರಸ್ತೆಯಲ್ಲಿ ಓಡಿದ ನಿರ್ದೇಶಕಿ:ಆಫ್ಘಾನಿಸ್ತಾನದ ಭೀ ಕರತೆಗೆ ಸಾಕ್ಷಿ ಯಾದ ವೀಡಿಯೋ

Entertainment Featured-Articles News
84 Views

ಆಫ್ಘಾನಿಸ್ತಾನದಲ್ಲಿ ಉದ್ಭವಿಸಿರುವ ಭ ಯಾ ನಕ ಪರಿಸ್ಥಿತಿಯ ಚಿತ್ರಣ ಇಡೀ ಜಗತ್ತಿನಲ್ಲಿ ಒಂದು ತಲ್ಲಣವನ್ನು ಸೃಷ್ಟಿಸಿದೆ. ಆಫ್ಘಾನಿಸ್ತಾನದ ಬಹುತೇಕ ಎಲ್ಲ ಭಾಗಗಳ ಮೇಲೆ ತಾ ಲಿ ಬಾನ್ ಉ ಗ್ರ ರು ತಮ್ಮ ಅಧಿಕಾರವನ್ನು ಸ್ಥಾಪಿಸಿದ್ದಾರೆ ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ಅವರ ವಶವಾಗಿದೆ. ದೇಶದ ಅಧ್ಯಕ್ಷರು ಈಗಾಗಲೇ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಹೀಗೆ ದೇಶವು ಉ” ಗ್ರರ ಕೈ ಗೆ ಸೇರುತ್ತಿದ್ದಂತೆ ಅಸಂಖ್ಯಾತ ಜನರು ದೇಶವನ್ನು ಬಿಟ್ಟು ಓಡಿ ಹೋಗಲು ಪ್ರಯತ್ನ ಪಡುತ್ತಿದ್ದಾರೆ. ವಿದೇಶಿಯರು ಕೂಡಾ ಆದಷ್ಟು ಬೇಗ ತಮ್ಮ ತಮ್ಮ ದೇಶಗಳನ್ನು ಸೇರಿಕೊಳ್ಳಲು ತವಕಿಸುತ್ತಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಜನದಟ್ಟಣೆ ಅಧಿಕವಾಗಿದ್ದು ನೂಕುನುಗ್ಗಲಿನ ಪರಿಸ್ಥಿತಿ ಉಂಟಾಗಿದೆ. ವಿಮಾನ ಏರುವ ಸಂದರ್ಭದಲ್ಲಿ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಅಕ್ಷರಶಃ ಆಫ್ಘಾನಿಸ್ತಾನ ಒಂದು ತಲ್ಲಣದ ಪರಿಸ್ಥಿತಿಯಲ್ಲಿ ಮುಳುಗಿದ್ದು, ಜನರು ಸುರಕ್ಷಿತ ಸ್ಥಾನಗಳನ್ನು ಸೇರಲು ಹಾತೊರೆಯುತ್ತಿದ್ದಾರೆ.

ಕಾಬುಲ್ ಅನ್ನು ಉ ಗ್ರ ರು ವಶಪಡಿಸಿಕೊಳ್ಳುವ ಮುನ್ನ ಅಲ್ಲಿನ ಸುಪ್ರಸಿದ್ಧ ಸಿನಿಮಾ ನಿರ್ದೇಶಕಿಯೊಬ್ಬರು ಪ್ರಾಣ ಉಳಿಸಿಕೊಳ್ಳಲು ರಸ್ತೆಗಿಳಿದು ಓಡಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿದೆ. ಹೌದು ಆಫ್ಘಾನಿಸ್ತಾನದಲ್ಲಿ ಸಿನಿಮಾ ವಿಷಯದಲ್ಲಿ ಪಿಹೆಚ್‌ಡಿ ಮಾಡಿರುವ ಮೊದಲ ಹಾಗೂ ಏಕೈಕ ಮಹಿಳೆಯಾಗಿದ್ದಾರೆ ನಿರ್ದೇಶಕಿ ಸಹ್ರಾ ಕರೀಮಿ. ಈ ಮಹಿಳಾ ನಿರ್ದೇಶಕಿಯೂ ರಸ್ತೆಯಲ್ಲಿ ಓಡುತ್ತಲೇ ವಿಡಿಯೋವನ್ನು ಮಾಡಿ ರಸ್ತೆಯಲ್ಲಿ ಓಡುವಾಗಲೇ ಅವರು, ದಯವಿಟ್ಟು ಮೌನವಾಗಿ ಇರಬೇಡಿ, ಅವರು ನಮ್ಮನ್ನು ಕೊ ಲ್ಲ ಲು ಬರುತ್ತಿದ್ದಾರೆ ನಮಗೆ ಸಹಾಯ ಮಾಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.

ತಾಲಿಬಾನ್ ಕಾಬೂಲನ್ನು ಸುತ್ತುವರಿದಿತ್ತು, ನಾನು ಸ್ವಲ್ಪ ಹಣವನ್ನು ಪಡೆಯಲು ಬ್ಯಾಂಕಿಗೆ ಹೋಗಬೇಕಿತ್ತು, ಅವರು ಅದನ್ನು ಮುಚ್ಚಿದರು ಮತ್ತು ಸ್ಥಳಾಂತರಿಸಿದರು; ಇದು ಸಂಭವಿಸಿದೆ, ಯಾರು ನಡೆಸಿದರು ಇದನ್ನು ಎಂದು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನಮಗಾಗಿ ಪ್ರಾರ್ಥಿಸಿ, ನಾನು ಮತ್ತೆ ಕೇಳಿಕೊಳ್ಳುತ್ತಿದ್ದೇನೆ, ಈ ದೊಡ್ಡ ಪ್ರಪಂಚದ ಜನರೇ, ದಯವಿಟ್ಟು ಮೌನವಾಗಿರಬೇಡಿ, ಅವರು ನಮ್ಮನ್ನು ಕೊ ಲ್ಲ ಲು ಬರುತ್ತಿದ್ದಾರೆ” ಎಂದು ಕರೀಮಿ ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಕರೀಮಿ ಯವರ ಈ ಪೋಸ್ಟ್ ನ ನಂತರ ಬಹಳಷ್ಟು ಜನ ಸಿನಿಮಾಮಂದಿ ಅದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಬಾಲಿವುಡ್ ನ ಅನೇಕ ಸಿನಿತಾರೆಯರು ಆಫ್ಘಾನಿಸ್ತಾನದ ಮಹಿಳೆಯರಿಗಾಗಿ, ಅಲ್ಲಿನ ಸಿನಿ ರಂಗದೊಂದಿಗೆ ಗುರುತಿಸಿಕೊಂಡಿರುವವರಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಅವರ ಸುರಕ್ಷತೆಗಾಗಿ, ಅಲ್ಲಿನ ಪರಿಸ್ಥಿತಿ ಬೇಗ ಸುಧಾರಿಸಲಿ ಎಂದು ಶುಭ ಹಾರೈಸುತ್ತಿದ್ದಾರೆ. ಒಟ್ಟಾರೆ ಇಡೀ ಜಗತ್ತಿನ ದೃಷ್ಟಿ ಈಗ ಅಫ್ಘಾನಿಸ್ತಾನದ ಮೇಲೆ ಇದೆ. ಅಫ್ಘಾನಿಸ್ತಾನದಲ್ಲಿನ ದುಸ್ಥಿತಿಯನ್ನು ಕಂಡು ವಿಶ್ವ ಬೆ ಚ್ಚಿ ಬಿದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೇವ್ ಆಫ್ಘಾನಿಸ್ತಾನ ಎನ್ನುವ ಹ್ಯಾಷ್ ಟ್ಯಾಗ್ ಗಳನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *