ನಮ್ಮದು ಖಂಡಿತ ರೀಮೇಕ್ ಸಿನಿಮಾ ಅಲ್ಲ: ವೈರಲ್ ಸುದ್ದಿಯ ಬೆನ್ನಲ್ಲೇ ಸಿಕ್ತು ದೊಡ್ಡ ಸ್ಪಷ್ಟನೆ!!

Entertainment Featured-Articles News

ಟಾಲಿವುಡ್ ನ ಹಿರಿಯ ನಟ, ಸ್ಟಾರ್ ನಟ ನಂದಮೂರಿ ಪ್ರಸ್ತುತ ಎರಡೆರಡು ಗೆಲುವಿನ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಒಂದು ತಾವು ನಾಯಕನಾಗಿ ನಟಿಸಿದ್ದ ಅಖಂಡ ಸಿನಿಮಾ ಸಾಧಿಸದ ದೊಡ್ಡ ವಿಜಯವು ಅವರ ಸಿನಿಮಾಗಳ ಕ್ರೇಜ್ ಎನ್ನುವುದು ಏನು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ‌. ಇನ್ನು ಎರಡನೆಯ ಯಶಸ್ಸು ಬಾಲಕೃಷ್ಣ ಅವರು ಓಟಿಟಿಯಲ್ಲಿ ಮೊದಲ ಬಾರಿಗೆ ನಿರೂಪಕನಾಗಿ ಕಾಣಿಸಿಕೊಂಡ ಅನ್ ಸ್ಟಾಪಬಲ್ ಟಾಕ್ ಶೋ ಕೂಡಾ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿದ್ದು, ಈಗ ಎರಡನೇ ಸೀಸನ್ ಆರಂಭಕ್ಕೆ ಸಜ್ಜಾಗಿದೆ‌.

ಈಗ ಅದರ ಬೆನ್ನಲ್ಲೇ ನಟ ಬಾಲಕೃಷ್ಣ ನಾಯಕನಾಗಿ, ಜನಪ್ರಿಯ ನಟಿ ಶೃತಿ ಹಾಸನ್ ನಾಯಕಿಯಾಗಿ ನಟಿಸುತ್ತಿರುವ, ಕನ್ನಡ ಸಿನಿರಂಗದ ಸ್ಟಾರ್ ನಟ ದುನಿಯಾ ವಿಜಯ್ ಅವರು ಇದೇ ಸಿನಿಮಾದ ಮೂಲಕ ತೆಲುಗು ಸಿನಿ ರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ ಎನ್ನುವುದು ಸಹಾ ವಿಶೇಷವಾಗಿದೆ. ಈ ಸಿನಿಮಾಕ್ಕೆ NBK 107 ಎನ್ನುವ ಶೀರ್ಷಿಕೆಯನ್ನು ಇಡಲಾಗಿದ್ದು, ಈ ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ದೇಶಕ ಗೋಪಿಚಂದ್ ಮಲಿನೇನಿ ನಿರ್ದೇಶ ಮಾಡುತ್ತಿದ್ದಾರೆ. ಚಿತ್ರದ ಮುಹೂರ್ತ ಕೂಡಾ ಮುಗಿದಿದ್ದು, ಚಿತ್ರೀಕರಣ ಆರಂಭವಾಗಿದೆ.

ಈ ಸಿನಿಮಾ ಘೋಷಣೆಯ ಬೆನ್ನಲ್ಲೇ ಒಂದೆರಡು ದಿನಗಳಿಂದಲೂ ಸಹಾ ಬಾಲಕೃಷ್ಣ ಅವರ ಈ ಸಿನಿಮಾ ರಿಮೇಕ್ ಎನ್ನುವ ಸುದ್ದಿಯೊಂದು ಹರಿದಾಡಿ ದೊಡ್ಡ ಸದ್ದನ್ನು ಮಾಡಿದೆ. ಸ್ಯಾಂಡಲ್ವುಡ್ ನ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್ ಕುಮಾರ್ ಮಫ್ತಿ ಸಿನಿಮಾವನ್ನು ತೆಲುಗಿನಲ್ಲಿ ರೀಮೇಕ್ ಮಾಡಲಾಗುತ್ತಿದೆ ಎನ್ನುವ ವಿಷಯ ದೊಡ್ಡ ಸುದ್ದಿಯಾಗಿ, ಎಲ್ಲೆಡೆ ವೈರಲ್ ಆಗಿದೆ. ಈಗ ಈ ಸುದ್ದಿಯು ದೊಡ್ಡ ಮಟ್ಟದಲ್ಲಿ ಹರಿದಾಡಿದ ಬೆನ್ನಲ್ಲೇ ನಿರ್ದೇಶಕ ಗೋಪಿಚಂದ್ ಮಲಿನೇನಿ ತಮ್ಮ ಸ್ಪಷ್ಟನೆ ನೀಡಿದ್ದಾರೆ.

ಹೌದು ನಿರ್ದೇಶಮ ಗೋಪಿಚಂದ್ ಮಲಿನೇನಿ ಅವರು ತಮ್ಮ ಈ ಹೊಸ ಸಿನಿಮಾ ಯಾವುದೇ ರೀಮೇಕ್ ಅಥವಾ ಫ್ರೀ ಮೇಕ್ ಅಲ್ಲ ಎನ್ನುವ ಉತ್ತರ ನೀಡಿದ್ದಾರೆ. ಗೋಪಿಚಂದ್ ಮಲಿನೇನಿ ಎನ್ ಬಿ ಕೆ 107 ಒಂದು ಸ್ವಂತವಾದ ಸ್ಕ್ರಿಫ್ಟ್ ಆಗಿದೆ ಎಂದಿದ್ದು, ಬಾಲಕೃಷ್ಣ ಅವರಿಗೆ ಸರಿಹೊಂದುವಂತಹ ಕಥೆಯನ್ನು ಸಿದ್ಧಪಡಿಸಲಾಗಿದ್ದು, ಇದೊಂದು ಸೇ ಡಿ ನ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಆಗಿದ್ದು, ಇದು ಯಾವುದೇ ಬೇರೆ ಸಿನಿಮಾವೊಂದರ ರೀಮೇಕ್ ಅಲ್ಲ ಎನ್ನುವ ಸ್ಪಷ್ಟನೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *