ನಮಗೆ ಮದುವೆ ಮಾಡಿಸಿ: ಪ್ರೀತಿಸಿದ ಯುವತಿಯರು ಸಲಿಂಗ ವಿವಾಹಕ್ಕೆ ಹಿಡಿದಿದ್ದಾರೆ ಹಠ!!

0 1

ಒಂದು ಗಂಡಿಗೆ ಒಂದು ಹೆಣ್ಣು ಎನ್ನುವುದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುವುದನ್ನು ನಾವೆಲ್ಲರೂ ಕೇಳಿರುತ್ತೇವೆ. ಯಾವುದಾದರೂ ಹುಡುಗ ಅಥವಾ ಹುಡುಗಿಗೆ ಸೂಕ್ತ ಸಮಯದಲ್ಲಿ ವಿವಾಹಕ್ಕೆ ಜೋಡಿ ದೊರೆಯದೇ ಹೋದಾಗ ಈ ಮಾತನ್ನು ಸಹಜವಾಗಿಯೇ ಹೇಳಲಾಗುತ್ತದೆ. ಆದರೆ ಆಧುನಿಕ ಕಾಲದಲ್ಲಿ ಈ ಮಾತು ಬದಲಾವಣೆ ಆಗಿದೆ. ಸಲಿಂಗ ಸಂಬಂಧಕ್ಕೆ ಅವಕಾಶಗಳನ್ನು ಕಲ್ಪಿಸಿದ ನಂತರ ಹುಡುಗ ಹುಡುಗನನ್ನು, ಹಾಗೂ ಹುಡುಗಿ ಹುಡುಗಿಯನ್ನು ಪ್ರೀತಿಸುವ ಘಟನೆಗಳು ತೀರಾ ಸಾಮಾನ್ಯ ಎನ್ನುವ ಮಟ್ಟಕ್ಕೆ ಬಂದಿದ್ದು, ಆಗಾಗ ಇಂತಹ ವಿಚಾರಗಳು ಸುದ್ದಿಯಾಗಿತ್ತಲೇ ಇರುತ್ತವೆ.

ಇಂತಹದೇ ಒಂದು ಘಟನೆಯಲ್ಲಿ ಪಾಟ್ನಾದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಇಷ್ಟಪಟ್ಟ ಇಬ್ಬರು ಯುವತಿಯರು ಈಗ ತಮಗೆ ವಿವಾಹ ಮಾಡಬೇಕೆಂದು ಹಠ ಹಿಡಿದಿರುವ ಘಟನೆಯೊಂದು ವರದಿಯಾಗಿದೆ. ಪಾಟ್ನಾದ ಇಬ್ಬರು ಯುವತಿಯರು ತಮ್ಮ ಒಬ್ಬ ಸಾಮಾನ್ಯ ಗೆಳೆಯನ ಮೂಲಕ ಒಬ್ಬರಿಗೊಬ್ಬರೂ ಪರಿಚಯವಾಗಿದ್ದಾರೆ. ಪರಿಚಯವಾದ ಅಲ್ಪಾವಧಿಯಲ್ಲೇ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿದ್ದು, ಆನಂತರ ಅದು ಪ್ರೀತಿಯಾಗಿ ಬದಲಾಗಿದೆ.

ಈಗ ಇಬ್ಬರು ಯುವತಿಯರ ಸಹಾ ತಮ್ಮ ಪ್ರೀತಿಗೆ ವಿವಾಹದ ರೂಪವನ್ನು ನೀಡಲು ಸಜ್ಜಾಗಿದ್ದು, ತಮ್ಮ ಸಲಿಂಗ ವಿವಾಹಕ್ಕೆ ಅವಕಾಶ ನೀಡ ಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ. ಪರಸ್ಪರ ಪ್ರೀತಿಸುತ್ತಿರುವ ಇಬ್ಬರು ಹುಡುಗಿಯರು ವಿವಾಹ ಬಂಧನದ ಮೂಲಕ ಜೊತೆಯಾಗಿ ಜೀವನವನ್ನು ನಡೆಸಲು ನಿರ್ಧಾರವನ್ನು ಮಾಡಿದ್ದು, ದೇಶದಲ್ಲಿರುವ ಸಲಿಂಗ ಲೈಂಗಿಕತೆಯ ಕಾನೂನನ್ನು ಉದಾಹರಣೆ ನೀಡುತ್ತಿದ್ದಾರೆ. ಆದರೆ ಇವರ ಎರಡು ಕುಟುಂಬಗಳೂ ಇವರ ಮದುವೆಗೆ ಒಪ್ಪಿಗೆ ನೀಡಿಲ್ಲ.

ಒಬ್ಬ ಯುವತಿಯ ಕುಟುಂಬವಂತೂ ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಮತ್ತೊಬ್ಬ ಯುವತಿಯ ಮೇಲೆ ಹಾಗೂ ಹಾಗೆಯೇ ಆಕೆಯ ಕುಟುಂಬದ ಮೇಲೆ ಪಾಟಲಿಪುತ್ರದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಎಫ್ಐಆರ್ ಕೂಡ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಸಿಕ್ಕಿರುವ ಮಾಹಿತಿಗಳ ಪ್ರಕಾರ ಈ ಇಬ್ಬರು ಯುವತಿಯರ ಹೆಸರು ತನಿಷ್ಕಾ ಶ್ರೀ ( 19 ) ಮತ್ತು ಶ್ರೇಯಾ ಘೋಶ್ (22 ); ಎಂದು ಹೇಳಲಾಗಿದೆ

ಇಬ್ಬರು ಯುವತಿಯರು ಪಾಟಲಿಪುತ್ರ ಠಾಣೆಯ ವ್ಯಾಪ್ತಿಯ ಪ್ರದೇಶದಲ್ಲಿನ ನಿವಾಸಿಗಳಾಗಿದ್ದು, ಕೆಲವು ದಿನಗಳ ಹಿಂದೆ ಇಬ್ಬರು ಮಾಲ್ ಒಂದರಲ್ಲಿ ಬೇಟಿಯಾಗಿದ್ದರು. ಆ ಭೇಟಿಯ ನಂತರ ಅವರು ನಾಪತ್ತೆಯಾಗಿದ್ದರ. ಈ ವೇಳೆ ಶ್ರೇಯಾ ಘೋಷ್ ಪರಿವಾರದ ವಿರುದ್ಧ ತನಿಷ್ಕಾ ಶ್ರೀ ಅವರ ಕುಟುಂಬದವರು ಕಿಡ್ನಾಪಿಂಗ್ ಕೇಸನ್ನು ದಾಖಲಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ಪ್ರಕರಣದ ಕುರಿತಾಗಿ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.