ನಮಗೆ ಒಬ್ಬನೇ ಗಂಡ ಬೇಕು: ಮದ್ವೆ ಆಗೋದಾದ್ರೆ ಒಬ್ಬನ್ನೇ ಅಂತ ಪ್ರಕಟಣೆ ಕೊಟ್ಟ ಗೆಳತಿಯರು

Entertainment Featured-Articles News

ಸ್ನೇಹ ಅಥವಾ ಫ್ರೆಂಡ್ ಶಿಪ್ ಅನ್ನು ಪದಗಳಲ್ಲಿ ವರ್ಣಿಸುವುದು ಸಾಧ್ಯವೇ ಇಲ್ಲ.‌ ಸ್ನೇಹದಲ್ಲಿನ ಪ್ರೀತಿ, ನಂಬಿಕೆ, ವಿಶ್ವಾಸ, ಆತ್ಮೀಯತೆ ಎಲ್ಲವನ್ನೂ ಸಹಾ ನಿಜವಾದ ಸ್ನೇಹಿತರಿಗೆ ಮಾತ್ರವೇ ತಿಳಿದಿರುತ್ತದೆ. ಕೆಲವರು ಸ್ನೇಹ ಎಂದರೆ ಪ್ರಾಣವನ್ನು ಸಹಾ ನೀಡಲು ಹಿಂಜರಿಯುವುದಿಲ್ಲ, ಸ್ನೇಹಿತರಿಗಾಗಿ ಎಂತಹುದೇ ತ್ಯಾಗವನ್ನು ಮಾಡಲು ಸಿದ್ಧರಾಗಿರುತ್ತಾರೆ. ಅನೇಕರು ಬಾಲ್ಯದಿಂದಲೂ, ವೃದ್ಧಾಪ್ಯದವರೆಗೂ ಸ್ನೇಹವನ್ನು ನಿಭಾಯಿಸಿಕೊಂಡು ಬರುವುದು ನೋಡಿದಾಗ ಖುಷಿ ಎನಿಸುತ್ತದೆ. ಸ್ನೇಹ ಎನ್ನುವುದು ಒಂದು ಮಧುರಾನುಭೂತಿಯಂತೆ ಎಂದು ಅಪ್ಪಟ ಸ್ನೇಹಿತರಿಗೆ ಮಾತ್ರವೇ ಅನುಭೂತಿ.

ಸ್ನೇಹದ ಬಗ್ಗೆ ಈಗಾಗಲೇ ಅನೇಕ ಸಿ‌ನಿಮಾಗಳು, ಹಾಡುಗಳು, ಕಥೆಗಳು ಮೂಡಿ ಬಂದಿವೆ. ಸ್ನೇಹ ಎನ್ನುವುದು ಅದ್ಭುತವಾದ ಅನುಭೂತಿಯಾಗಿದ್ದು, ನಿಜವಾದ ಸ್ನೇಹಿತರನ್ನು ಮೀರಿದ ಸಂಪತ್ತು ಇನ್ನೊಂದಿಲ್ಲ. ಹೆತ್ತವರು, ಒಡಹುಟ್ಟಿದವರು ಹಾಗೂ ಜೀವನ ಸಂಗಾತಿಯ ಜೊತೆಗೂ ಹೇಳಿಕೊಳ್ಳಲಾಗದ ವಿಚಾರಗಳನ್ನು ಹೇಳಿಕೊಳ್ಳಲು ಸಾಧ್ಯ ಇರುವುದು ಒಬ್ಬ ಸ್ನೇಹಿತನ ಹತ್ತಿರ ಮಾತ್ರವೇ ಎನ್ನುವುದು ಜಗವೇ ಅರಿತಿರುವ ಸತ್ಯವಾಗಿದೆ. ಇದೇ ಸ್ನೇಹದ ದೊಡ್ಡತನವಾಗಿದೆ‌. ಕಷ್ಟ ಸುಖದಲ್ಲಿ ಜೊತೆಯಾಗಿ ನಿಸ್ವಾರ್ಥ ಸಹಾಯವನ್ನು ನೀಡುವವರೇ ನಿಜವಾದ ಸ್ನೇಹಿತರು‌.

ಇಂತಹ ಆದರ್ಶ ಸ್ನೇಹಿತರು ವಿಶ್ವದಾದ್ಯಂತ ಇದ್ದಾರೆ. ಇಂತಹ ಒಂದು ಸ್ನೇಹಕ್ಕೆ ಉದಾಹರಣೆ ಎನ್ನುವಂತಹ ಇಬ್ಬರು ಯುವತಿಯರ ಸುದ್ದಿಯೊಂದು ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ‌.‌ ಈ ಗೆಳತಿಯರು ನೀಡಿರುವ ಒಂದು ಪ್ರಕಟಣೆ ಒಂದು ಹೊಸ ಸಂಚಲನವನ್ನು ಸೃಷ್ಟಿಸಿದೆ. ಗೆಳತಿಯರಾಗಿ ಎಲ್ಲವನ್ನೂ ಶೇರ್ ಮಾಡಿಕೊಳ್ಳುವ ಇವರು ಇದೀಗ ಪತಿಯನ್ನು ಸಹಾ ಶೇರ್ ಮಾಡಿಕೊಳ್ಳುವ ಒಂದು ನಿರ್ಧಾರವನ್ನು ಮಾಡಿದ್ದು, ಇದು ಅಚ್ಚರಿ ಎನಿಸಿದರೂ ನಿಜವಾಗಿದೆ.

ಹೌದು, ಮಲೇಷಿಯಾ ದ ಇಬ್ಬರು ಗೆಳತಿಯರು ಒಬ್ಬನೇ ಪುರುಷನನ್ನು ಮದುವೆಯಾಗಲು ಬಯಸಿದ್ದು, ತಮ್ಮ ಈ ನಿರ್ಧಾರದ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಣೆ ಸಹಾ ನೀಡಿದ್ದು, ಇಬ್ಬರೂ ಗೆಳತಿಯರಿಗೆ ಒಬ್ಬನೇ ಗಂಡ ಬೇಕೆಂಬ ಅವರ ಪ್ರಕಟಣೆ ಇದೀಗ ದೊಡ್ಡ ಸುದ್ದಿಯಾಗಿದೆ. ಹಾಗಾದ್ರೆ ಯಾರೀ ಯುವತಿಯರು? ಏನು ಇವರು ನೀಡಿರುವ ಪ್ರಕಟಣೆ ಎಂದು ತಿಳಿಯುವ ಆಸಕ್ತಿ ನಿಮಗೂ ಇದ್ದರೆ ಇಲ್ಲಿದೆ ಅದರ ವಿವರ.

ಮಲೇಶಿಯಾದ ಫಾತಿಮಾ ಅಜ್ರಹ್ (31), ಫಾತಿಮಾ ಅಕ್ಮಾ ( 27 ) ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಇದರಲ್ಲಿ ಫಾತಿಮಾ ಅಜ್ರಹ್ ಗೆ ಈ ಮೊದಲೇ ಒಂದು ಮದುವೆಯಾಗಿ, ಒಂದು ಮಗುವಿನ ತಾಯಿ ಆಗಿದ್ದಾರೆ. ಆದರೆ ಆಕೆ ಗಂಡನಿಂದ ದೂರವಾಗಿದ್ದಾರೆ.‌ ಫಾತಿಮಾ ಅಜ್ರಹ್ ಮತ್ತು ಫಾತಿಮಾ ಅಕ್ಮಾ ನಡುವೆ ಒಂದು ಬಲವಾದ ಸ್ನೇಹ ಏರ್ಪಟ್ಟಿದೆ. ಇಬ್ಬರೂ ತಮ್ಮ ಜೀವನದ ನೋವು, ನಲಿವನ್ನು ಹಂಚಿಕೊಳ್ಳುತ್ತಾರೆ. ಒಬ್ಬರು ಬಹಳ ಆತ್ಮೀಯರಾಗಿದ್ದಾರೆ.

ಹೀಗೆ ಬಹಳಷ್ಟು ಆತ್ಮೀಯರಾಗಿರುವ ಈ ಇಬ್ಬರೂ ಇದೀಗ ತಮ್ಮ ಜೀವನದಲ್ಲಿ ಮದುವೆ ಆಗುವುದಾದರೆ ಇಬ್ಬರೂ ಒಬ್ಬನೇ ವ್ಯಕ್ತಿಯೊಡನೆ ಎಂದು ತೀರ್ಮಾನ ಮಾಡಿದ್ದಾರೆ. ತೀರ್ಮಾನ ಮಾಡಿದ ಬೆನ್ನಲ್ಲೇ ಅವರು ಫೇಸ್ ಬುಕ್ ನಲ್ಲಿ ವರ ಬೇಕಾಗಿದ್ದಾನೆ ಎಂದು ಪ್ರಕಟಣೆ ನೀಡಿದ್ದಾರೆ. ತಮಗೆ ಸಂಬಂಧಿಸಿದ ವಿವರಗಳನ್ನು ನೀಡಿರುವ ಈ ಗೆಳತಿಯರು ತಮಗೆ ಎಂತಹ ಪತಿ ಬೇಕೆಂಬುದನ್ನು ಸಹಾ ತಿಳಿಸಿದ್ದಾರೆ. ಈ ಗೆಳತಿಯರ ಪೋಸ್ಟ್ ನೋಡಿ ಜನರ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.