“ನನ್ನ ಹೀರೋ,ನನ್ನ ಗೆಳೆಯ”- ಎಂದು ಸ್ಟಾರ್ ನಟನ ಭೇಟಿಯನ್ನು ಸಂಭ್ರಮಿಸಿದ ನಟಿ ಖುಷ್ಬೂ!! ಯಾರು ಆ ನಟ??

0 1

ದಕ್ಷಿಣ ಸಿನಿಮಾರಂಗದ ಜನಪ್ರಿಯ ನಟಿ ಖುಷ್ಬೂ ಒಂದು ಕಡೆ ಸಿನಿಮಾ, ಮತ್ತೊಂದು ಕಡೆ ರಾಜಕೀಯ ಎರಡರಲ್ಲೂ ಸಹಾ ಗುರುತಿಸಿಕೊಂಡು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ತಮಿಳು ಭಾಷೆಯ ಸಿನಿಮಾರಂಗದಲ್ಲಿ ತಾರಾ ವರ್ಚಸ್ಸನ್ನು ಪಡೆದಿರುವ ಖುಷ್ಬೂ ಅವರು ತಮಿಳುನಾಡಿನ ಸಕ್ರಿಯ ರಾಜಕಾರಣಿಯೂ ಹೌದು. ಒಂದಲ್ಲಾ ಒಂದು ವಿಷಯವಾಗಿ ಆಗಾಗ ಸದ್ದು ಹಾಗೂ ಸುದ್ದಿಯನ್ನು ಮಾಡುವ ನಟಿ ಖುಷ್ಬೂ, ಇತ್ತೀಚಿನ‌ ವರ್ಷಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ರಾಜಕೀಯ ವಿಚಾರಗಳಿಂದಾಗಿ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.

ಈಗ ಇವೆಲ್ಲವುಗಳ ನಡುವೆ ನಟಿ ಖುಷ್ಬೂ ತಮಿಳಿನ ಸ್ಟಾರ್ ನಟ ಕಮಲಹಾಸನ್ ಜೊತೆಗೆ ಒಂದು ಫೋಟೋವನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟಿದ್ದಾರೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿದೆ. ನಟಿ ಹಾಗೂ ನಟನ ಅಭಿಮಾನಿಗಳ ಕಡೆಯಿಂದ ಅಪಾರವಾದ ಮೆಚ್ಚುಗೆಗಳು ಹರಿದುಬರುತ್ತಿವೆ‌. ಹಲವು ಸಿನಿಮಾಗಳಲ್ಲಿ ಕಮಲಹಾಸನ್ ಮತ್ತು ನಟಿ ಖುಷ್ಬೂ ಜೋಡಿಯಾಗಿ ನಟಿಸಿದ್ದಾರೆ. ಇದೀಗ ಬಹಳ ವರ್ಷಗಳ ನಂತರ ಇಬ್ಬರೂ ಒಬ್ಬರನ್ನೊಬ್ಬರು ಭೇಟಿ ಮಾಡಿದ್ದಾರೆ.

ಈ ಸಂತೋಷದ ಸಮಯದಲ್ಲಿ ಸ್ಟಾರ್ ನಟನ ಜೊತೆಗೆ ಫೋಟೋವನ್ನು ತೆಗೆಸಿಕೊಂಡಿರುವ ನಟಿ ಖುಷ್ಬೂ ಅವರು ಬಹಳ ಖುಷಿಯಿಂದ ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡು, “ನನ್ನ ಹೀರೋ, ನನ್ನ ಗೆಳೆಯ, ನನ್ನ ವಿಕ್ರಂ” ಎಂದು ಬರೆದುಕೊಂಡು ಖುಷಿಪಟ್ಟಿದ್ದಾರೆ. ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದು ಪಡೆದು ರಾಜಕೀಯದಲ್ಲಿ ಬ್ಯುಸಿಯಾಗಿದ್ದ ನಟ ಕಮಲಹಾಸನ್ ವಿಕ್ರಂ ಸಿನಿಮಾದ ಮೂಲಕ ಕಂಬ್ಯಾಕ್ ಮಾಡಿದ್ದಾರೆ.

ವಿಕ್ರಂ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡು, ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ. ಈಗ ಸಿನಿಮಾ ಕಂಡಂತಹ ದೊಡ್ಡ ಗೆಲುವಿನಿಂದಾಗಿ ಖುಷಿಯಲ್ಲಿರುವ ನಟ ಕಮಲಹಾಸನ್ ಅವರು ಚಿತ್ರರಂಗದ ತಮ್ಮ ಸ್ನೇಹಿತರನ್ನು ಭೇಟಿಯಾಗಿ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕಮಲಹಾಸನ್ ಅವರು ನಟಿ ಖುಷ್ಬೂ ಅವರನ್ನು ಭೇಟಿ ಮಾಡಿದ್ದು, ಈ ಸಂತಸದ ಕ್ಷಣಗಳ ಸುಂದರ ಚಿತ್ರವನ್ನು ಖುಷ್ಬು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Leave A Reply

Your email address will not be published.