ನನ್ನ ಹಿಂದೆ ಸಾವಿರ ಜನ ಹುಡುಗರಿದ್ದಾರೆ ಎಂದ ಸೋನು ಮಾತಿಗೆ ಹೊಟ್ಟೆ ಹುಣ್ಣಾಗಿಸುವಂತೆ ಕಾಮಿಡಿ ಮಾಡಿದ ಗುರೂಜಿ

Written by Soma Shekar

Published on:

---Join Our Channel---

ಬಿಗ್ ಬಾಸ್ ಕನ್ನಡ ಓಟಿಟಿ ಮನೆಯಲ್ಲಿ ಸ್ಪರ್ಧಿಯಾಗಿರುವ ಸೋನು ಶ್ರೀನಿವಾಸ್ ಗೌಡ ಈ ಮನೆಯಲ್ಲಿ ಹೆಚ್ಚು ಆತ್ಮೀಯವಾಗಿರುವುದು ರಾಕೇಶ್ ಅಡಿಗ ಅವರ ಜೊತೆಯಲ್ಲಿ ಮಾತ್ರ. ಅವರ ನಡುವಿನ ಸ್ನೇಹದ ಕುರಿತಾಗಿ, ಒಡನಾಟದ ಕುರಿತಾಗಿ ಈಗಾಗಲೇ ಹಲವು ಬಾರಿ ಸುದ್ದಿಗಳಾಗಿವೆ. ಆದರೆ ರಾಕೇಶ್ ಗೆ ಸೋನು ಇಷ್ಟೊಂದು ಹಚ್ಚಿಕೊಂಡಿರುವುದು ಇಷ್ಟ ಆಗ್ತಿಲ್ಲ. ಅವರು ಆದ್ದರಿಂದಲೇ ಕೆಲವೊಮ್ಮೆ ಹೇಳಬೇಕಾಗಿದ್ದನ್ನು ನೇರವಾಗಿ ಹೇಳುತ್ತಾರೆ. ಅಲ್ಲದೇ ಇನ್ನು ನಾಲ್ಕು ದಿನ ಕಳೆದರೆ ಬಿಗ್ ಬಾಸ್ ಮುಗಿಸಿ ಎಲ್ಲರೂ ಅವರವರ ಜೀವನಕ್ಕೆ ಮರಳಲೇಬೇಕು, ಆಗ ಒಬ್ಬರ ಭಾವನೆಗಳಿಂದ ಮತ್ತೊಬ್ಬರಿಗೆ ತೊಂದರೆ ಆಗಬಾರದು ಎನ್ನುವ ಆಲೋಚನೆ ರಾಕೇಶ್ ಅವರದ್ದಾಗಿದೆ. ಆದರೆ ರಾಕೇಶ್ ಅವರ ನೇರ ನುಡಿಗಳನ್ನು ಕೇಳಿ ಅವರು ಫೀಲಿಂಗ್ ಇಲ್ಲದ ಹುಡುಗ ಎಂದು ಸೋನುಗೆ ಅನಿಸಿದೆ.

ತನಗೆ ಬೇಜಾರಾದಾಗ ಕನ್ನಡಿ ಮುಂದೆ ನಿಂತು ಎಲ್ಲಾ ವಿಚಾರ ಹೇಳಿಕೊಳ್ಳುವ ಸೋನು ಇದೀಗ ರಾಕಿ ವಿಚಾರದಲ್ಲೂ ಅದನ್ನೇ ಮಾಡಿದ್ದಾರೆ. ಸೋನು ಕನ್ನಡಿ ಮುಂದೆ ಕುಳಿತು, ಬಿಡು ನಿಂಗೆ ಯಾರ ಜೊತೆಗೂ ಫೀಲಿಂಗ್ಸ್ ಬರಲ್ಲ. ನೀನು ಆ ತರದ ಹುಡುಗಿ, ನಿನ್ನದು ಕಲ್ಲು ಮನಸ್ಸು, ನಂಗೆ ಗೊತ್ತು ನೀನು ಏನು ಅಂತ. ಏನು ಅಂತ ಹಂಗೆ ಹಿಂಗೆ ಹೇಳ್ತಿದ್ದೆ ಹಾಗಾದ್ರೆ ಈಗ ಹೆಂಗೆ ಫೀಲಿಂಗ್ಸ್ ಬಂತು, ನಿಂದು ತಪ್ಪು ಸೋನು. ಗುಡ್ ಗರ್ಲ್ ನಾಳೆಯಿಂದ ಕೇರ್ ಟೇಕ್ ಮಾಡಬೇಡ. ಅವರಾಗಿ ಅವರು ಮಾರನಾಡಿಸಿದರೆ ಮಾತನಾಡಬೇಕು. ಇಲ್ಲಿ ಫೀಲಿಂಗ್ಸ್ ಗೆ ವ್ಯಾಲ್ಯೂ ಇಲ್ಲ ಆಯ್ತಾ ? ಆದರೂ ಏನೋ ಒಂತರಾ ಫೀಲ್ ಆಗ್ತಾ ಇದೆ ಕಣೇ.

ಅದು ನಂಗೂ ಗೊತ್ತಿಲ್ಲ ಕಣೇ, ಮಾಡೋದೆಲ್ಲಾ ಮಾಡಿ ಈಗ ನಂಗೆ ಗೊತ್ತಿಲ್ಲ ಅಂದ್ರೆ, ನೀನು ಏನೂ ತಪ್ಪು ಮಾಡಿಲ್ಲ, ನೀನು ಜಸ್ಟ್ ಅವನಿಗೆ ತಾಯಿ ಮಗು ಥರಾ ಟ್ರೀಟ್ ಮಾಡಿದ್ಯಾ ಅಷ್ಟೇ. ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇದ್ದೀಯಾ ತಾನೇ. ನೀನು ಮಗು ತರ ನೋಡಿದ್ದು ಸರಿ, ಆದರೆ ಯಾಕೆ ನಿನಗೆ ಪೊಸೆಸಿವ್ ನೆಸ್ ಆಗ್ತಾ ಇದೆ. ತಲೆ ಕೆಡಿಸಿಕೊಳ್ಳಬೇಡ, ಯಾರಿಗೋ ಕೇರ್ ಟೇಕ್ ಮಾಡೋಕೆ ಹೋಗಿ ನೀನು ಯಾಕೆ ಮೂಡ್ ಆಫ್ ಆಗ್ತೀಯಾ? ನಿನ್ನ ಹಿಂದೆ ಸಾವಿರ ಜನ ಹುಡುಗರು ಇದ್ದಾರೆ ಎಂದು ಸೋನು ಹೇಳಿದ್ದಾರೆ. ಸೋನು ಈ ಮಾತನ್ನು ಹೇಳಿದ್ದೇ ತಡ, ಅಲ್ಲೇ ಕತ್ತಲಲ್ಲಿ ನಿಂತು ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಆರ್ಯವರ್ಧನ್ ಗುರೂಜಿ ಹೊಟ್ಟೆ ಹುಣ್ಣಾಗುವಂತೆ ಕಾಮಿಡಿ ಮಾಡಿದ್ದಾರೆ.

ಹೌದು, ಸೋನು ಹೇಳಿದ ಮಾತು ಕೇಳಿಸಿಕೊಂಡ ಗುರೂಜಿ, ಎಲ್ಲಿದ್ದಾರೆ ಸಾವಿರ ಜನ ಹುಡುಗರು, ಇಲ್ಲಿ ಇರುವುದು ನಾನೊಬ್ಬನೇ.‌ ಹಲೋ ನಾನು ಒಬ್ಬನೇ ಇರುವುದು. ನಿಂಗೆ ನಾನು ಒಬ್ಬನೇ ಸಾವಿರ ಜನರ ಹಾಗೆ ಕಾಣುತ್ತಿದ್ದೀನಾ ಸೋನು ? ಎಂದು ಗುರೂಜಿ ಪ್ರಶ್ನೆ ಮಾಡಿದ್ದಾರೆ. ಗುರೂಜಿ ಮಾತುಗಳನ್ನು ಕೇಳಿಯೂ ಸೋನು ಏನೂ ಮಾತನಾಡದೇ ಸುಮ್ಮನೆ ಹೋಗಿದ್ದಾರೆ. ಒಂದು ವೇಳೆ ಸೋನು ಮೂಡ್ ಸಾಮಾನ್ಯವಾಗಿದೆ ಇದ್ದಿದ್ದರೆ ಖಂಡಿತ ಗುರೂಜಿಗೆ ಬೆವರಿಳಿಸುವಷ್ಟು ಮಾತನಾಡುತ್ತಿದ್ದರು. ಆದರೆ ಗುರೂಜಿ ಟೈಮ್ ಚೆನ್ನಾಗಿತ್ತು ಎನ್ನಬಹುದು.

Leave a Comment