ನನ್ನ ಹತ್ರ ಡೇಂಜರಸ್ ಹೆಂಗಸರಿದ್ದಾರೆ: ರಾಜಮೌಳಿಗೆ ಟಾಂಗ್ ಕೊಟ್ಟ ರಾಮ್ ಗೋಪಾಲ್ ವರ್ಮಾ

Entertainment Featured-Articles News

ತೆಲುಗು ಸಿನಿಮಾ ರಂಗದಲ್ಲಿ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಕಾಂಟ್ರವರ್ಸಿ ಗಳಿಗೆ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಿರ್ದೇಶಕ ಎಂದರೆ ಅದು ರಾಮ್ ಗೋಪಾಲ್ ವರ್ಮಾ ಮಾತ್ರವೇ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ ಆರ್ ಜಿ ವಿ. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಾಕುವ ಪೋಸ್ಟ್ ಗಳು ಒಮ್ಮೆ ವಿವಾದಗಳನ್ನು ಸೃಷ್ಟಿ ಮಾಡಿದರೆ, ಇನ್ನೂ ಕೆಲವೊಮ್ಮೆ ಚರ್ಚೆಯ ವಿಷಯಗಳಾಗಿ ಬದಲಾಗುತ್ತದೆ. ಆರ್ ಜಿ ವಿ ಮಾಡುವ ಟ್ವೀಟ್ ಗಳು ಅನೇಕ ಸಂದರ್ಭಗಳಲ್ಲಿ ಅಪಹಾಸ್ಯಕ್ಕೆ ಸಹಾ ಗುರಿಯಾಗುತ್ತದೆ.

ಪ್ರಸ್ತುತ ರಾಮ್ ಗೋಪಾಲ್ ವರ್ಮಾ ಅವರು ಬಾಹುಬಲಿ ಹಾಗೂ ತ್ರಿಬಲ್ ಆರ್ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರಿಗೆ ಟಾಂಗ್ ನೀಡುವಂತಹ ಒಂದು ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ. ರಾಮ್ ಗೋಪಾಲ್ ವರ್ಮಾ ಮಾತನ್ನು ಕೇಳಿ ಕೆಲವರು ಅಪಹಾಸ್ಯ ಮಾಡಿದರೆ, ಇನ್ನೂ ಕೆಲವರು ನಿರ್ದೇಶಕನ ಮೇಲೆ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ರಾಮ್ ಗೋಪಾಲ್ ವರ್ಮಾ ತಮ್ಮ ಟ್ವೀಟ್ ಮೂಲಕ ಹೇಳಿದ್ದಾದರೂ ಏನು ಎನ್ನುವುದನ್ನು ತಿಳಿಯೋಣ ಬನ್ನಿ.

ರಾಮ್ ಗೋಪಾಲ್ ವರ್ಮಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಿರ್ದೇಶಕ ರಾಜಮೌಳಿ ಸ್ಟಾರ್ ನಟರಾದ ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್ಟಿಆರ್ ಜೊತೆಗಿರುವ ಫೋಟೋವೊಂದನ್ನು ಹಾಕಿ ಅದರ ಜೊತೆಯಲ್ಲಿ ತಾನು ನಟಿಯರಾದ ಸೈನಾ ಮತ್ತು ಅಪ್ಸರ ರಾಣಿ ಜೊತೆಯಲ್ಲಿರುವ ಫೋಟೋವನ್ನು ಹಾಕಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿಕೊಂಡವರು, ಅದರ ಜೊತೆಗೆ ಶೀರ್ಷಿಕೆಯಲ್ಲಿ ಬರೆದ ಸಾಲುಗಳು ಎಲ್ಲರ ಗಮನವನ್ನು ಸೆಳೆಯುವಂತೆ ಮಾಡಿದೆ.

ಫೋಟೋ ಜೊತೆ ಶೀರ್ಷಿಕೆಯಲ್ಲಿ ಆರ್ ಜಿ ವಿ, “ರಾಜಮೌಳಿ ಸರ್, ನಿಮ್ಮ ಹತ್ತಿರ ರಾಮ್ ಚರಣ್ ಹಾಗೂ ಎನ್ ಟಿ ಆರ್ ಅಂತಹ ಡೇಂಜರಸ್ ಗಂಡಸರು ಇದ್ದರೆ, ನನ್ನ ಬಳಿ ಡೇಂಜರಸ್ ಹೆಂಗಸರು ಅಂದರೆ ಸೈನಾ ಮತ್ತು ಆಪ್ತರ ರಾಣಿ ಇದ್ದಾರೆ ಗೊತ್ತಾ” ಎಂದು ಬರೆದುಕೊಂಡಿದ್ದಾರೆ. ಆರ್ ಜಿ ವಿ ಮಾಡಿದ ಟ್ವೀಟ್ ನೋಡಿ ನೆಟ್ಟಿಗರು ಅವರನ್ನು ವ್ಯಂಗ್ಯ ಮಾಡಿದ್ದಾರೆ. ಮತ್ತೆ ಕೆಲವರು ಟೀಕೆಗಳನ್ನು ಮಾಡುತ್ತಾ ತಮ್ಮದೇ ಆದ ರೀತಿಯಲ್ಲಿ ನಿರ್ದೇಶಕನಿಗೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ನೆಟ್ಟಿಗರು, ನೀವು ರಾಜಮೌಳಿ ಅವರಿಗಿಂತ ಹತ್ತು ಸಾವಿರ ಕಿಲೋಮೀಟರ್ ದೂರದಲ್ಲಿ ಇದ್ದೀರಾ. ರಾಜಮೌಳಿ ಜನರಿಗಾಗಿ ಸಿನಿಮಾ ಮಾಡಿದರೆ ನೀವು ನಿಮ್ಮ ಸಿನಿಮಾ ಸಂಸ್ಥೆ ಸುದ್ದಿಯಲ್ಲಿ ಇರುವುದಕ್ಕಾಗಿ ಸಿನಿಮಾ ಮಾಡುವಿರಿ. ರಾಜಮೌಳಿ ಸಿನಿಮಾವನ್ನು ದೇಶದಾದ್ಯಂತ ಜನರು ವೀಕ್ಷಣೆ ಮಾಡುತ್ತಾರೆ, ಆದರೆ ನಿಮ್ಮ ಸಿನಿಮಾ ವೀಕ್ಷಣೆ ಮಾಡಲು ಯಾರಿದ್ದಾರೆ? ನಿಮಗೂ ಹಾಗೂ ರಾಜಮೌಳಿಗೆ ಬಹಳ ವ್ಯತ್ಯಾಸವಿದೆ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *