ನನ್ನ ಸಿನಿಮಾ ಸೋಲಿಗೆ ಇವರೇ ಕಾರಣ: ಮತ್ತೆ ಸಿಡಿದೆದ್ದ ಕಂಗನಾ, ಕೋಪ ಯಾರ ಮೇಲೆ??

Written by Soma Shekar

Published on:

---Join Our Channel---

ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಒಂದಲ್ಲಾ ಒಂದು ವಿಷಯದಿಂದಾಗಿ ಸದಾ ಸುದ್ದಿಯಲ್ಲಿರುವ ನಟಿಯಾಗಿದ್ದಾರೆ. ನಟಿ ಕಂಗನಾ ಸಿನಿಮಾ ವಿಷಯಗಳು ಮಾತ್ರವೇ ಅಲ್ಲದೇ ತಾವು ನೀಡುವ ಹೇಳಿಕೆಗಳ ಕಾರಣವಾಗಿಯೂ ಸದ್ದು ಸುದ್ದಿಯಾಗುತ್ತಾರೆ. ಕಂಗನಾ ರಾಜಕೀಯ, ಧಾರ್ಮಿಕ ಹೀಗೆ ಎಲ್ಲಾ ವಿಚಾರಗಳಲ್ಲೂ ಸಹಾ ತಮ್ಮ ಹೇಳಿಕೆಗಳನ್ನು ನೀಡುವ ಮೂಲಕವೇ ದೊಡ್ಡ ದೊಡ್ಡ ಚರ್ಚೆ ಹಾಗೂ ವಿ ವಾ ದಗಳನ್ನು ಹುಟ್ಟು ಹಾಕಿರುವುದು ಕೂಡಾ ವಾಸ್ತವ. ಇನ್ನು ಬಾಲಿವುಡ್ ಮಂದಿಯನ್ನು ಎದುರು ಹಾಕಿಕೊಳ್ಳುವುದರಲ್ಲಿ ಸದಾ ಮುಂದು…

ಇಂತ ನಟಿ ಕಂಗನಾ ಈಗ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ನಟಿ ಕಂಗನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಹೊಸ ಸಿನಿಮಾ ದಾಖಡ್ ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿತ್ತು. ಈ ಸಿನಿಮಾದ ಬಗ್ಗೆ ನಟಿ ಕಂಗನಾ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಸಿನಿಮಾ ಬಿಡುಗಡೆಯ ನಂತರ ಕಂಗನಾ ಅವರ ಎಲ್ಲಾ ನಿರೀಕ್ಷೆಗಳು ಸುಳ್ಳಾಗಿದೆ. ಸುಮಾರು ಎಂಬತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸಿನಿಮಾ ಗಳಿಸಿದ್ದು ಮಾತ್ರ ಕೇವಲ ಎರಡು ಕೋಟಿ ರೂಪಾಯಿಗಳಾಗಿವೆ.

ಸಿನಿಮಾ ಈ ಮಟ್ಟಕ್ಕೆ ಸೋಲನ್ನು ಕಂಡಿರುವುದು ಸಿನಿಮಾ ನಿರ್ಮಾಪಕರಿಗೆ ಖಂಡಿತ ದೊಡ್ಡ ಹೊಡೆತವೇ ತಗುಲಿದೆ. ಇನ್ನು ಕಂಗನಾ ಗೆ ಈ ಸಿನಿಮಾದಲ್ಲಿ ಮೊದಲ ಸಿನಿಮಾಗಳಿಗಿಂತ ಹೆಚ್ಚು ಪ್ರಾಧಾನ್ಯತೆ ನೀಡಲಾಗಿತ್ತು, ಆದರೆ ಸಿನಿಮಾ ಈ ರೀತಿ ಸೋಲನ್ನು ಕಂಡಿದ್ದು ನಟಿ ಕಂಗನಾ ಗೆ ಇದು ತೀವ್ರವಾದ ಬೇಸರವನ್ನು ಉಂಟು ಮಾಡಿದೆ. ಅಲ್ಲದೇ ಇದೇ ಬೇಸರದಲ್ಲಿ ನಟಿ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಈ ಹಿಂದೆ ನಟಿ ಬಾಲಿವುಡ್ ಬಗ್ಗೆ ಆಡಿದ ಮಾತುಗಳೇ ಈ ಸೋಲಿಗೆ ಕಾರಣ ಎನ್ನುವುದು ನಟಿಯ ಸಿಟ್ಟಾಗಿದೆ.

ಕಂಗನಾ ನನ್ನ ಈ ಸಿನಿಮಾ ಸೋಲಿಗೆ ಪರೋಕ್ಷವಾಗಿ ಬಾಲಿವುಡ್ ಕಾರಣ ಎಂದಿದ್ದಾರೆ. ನಾನು ಯಾವಾಗಲೂ ಸತ್ಯವನ್ನು ನುಡಿದಿದ್ದೇ ಇಂತಹ ಸೋಲನ್ನು ಅನುಭವಿಸಲು ಕಾರಣವಾಗಿದೆ‌ ಎಂದಿದ್ದಾರೆ. ನಟಿ ಕಂಗನಾ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಯಾದಾಗ ಬಾಲಿವುಡ್ ನ ಕೆಲವು ಮಂದಿಯ ಹೆಸರನ್ನು ಹೇಳಿ ಟೀಕೆ ಟಿಪ್ಪಣಿಗಳನ್ನು ಮಾಡಿದ್ದರು. ಇದೇ ಈಗ ತನ್ನ ಸಿನಿಮಾ ಸೋಲಿಗೆ ಕಾರಣ ಎನ್ನುವುದು ಕಂಗನಾ ಸಿಟ್ಟಾಗಿದೆ.

Leave a Comment