ತೆಲುಗು ಚಿತ್ರರಂಗದ ಸ್ಟಾರ್ ನಟ ಮಹೇಶ್ ಬಾಬು ಅವರು ಬಾಲಿವುಡ್ ನ ವಿಚಾರ ಬಂದಾಗ ಸಿಟ್ಟು ಮತ್ತು ಅಸಮಾಧಾನವನ್ನು ಹೊರಹಾಕಿರುವ ಘಟನೆ ಗಳು ಈಗಾಗಲೇ ನಡೆದಿದೆ. ಈ ಹಿಂದೆ ಅವರು ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡಿದ್ದರು, ಆ ಸಂದರ್ಭದಲ್ಲಿ ಅವರು ತನ್ನ ಸಿನಿಮಾಗಳು ದಕ್ಷಿಣದಲ್ಲಿ ಯಶಸ್ಸನ್ನು ಕಂಡರೆ ಸಾಕು, ತನಗೆ ಹಿಂದಿ ಸಿನಿಮಾಗಳೇನು ಬೇಕಾಗಿಲ್ಲ ಎನ್ನುವ ಮಾತನ್ನು ಹೇಳಿದ್ದರು. ಅಲ್ಲದೇ ಇದುವರೆಗೂ ನಟ ಮಹೇಶ್ ಬಾಬು ತೆಲುಗು ಭಾಷೆಯ ಹೊರತಾಗಿ ಅನ್ಯಭಾಷೆಗಳ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ ಎನ್ನುವುದು ಕೂಡಾ ವಾಸ್ತವದ ವಿಷಯವಾಗಿದೆ.
ನಟ ಮಹೇಶ್ ಬಾಬು ಅವರು ಹಿಂದಿ ಸಿನಿಮಾಗಳಲ್ಲಿ ಅವಕಾಶ ಸಿಕ್ಕರೂ ಸಹಾ ನಾನು ನಟಿಸುವುದಿಲ್ಲ ಎಂದು ಹೇಳಿದ ವಿಚಾರ ಕೆಲವೇ ದಿನಗಳ ಹಿಂದೆ ದೊಡ್ಡ ಚರ್ಚೆಯನ್ನು ಕೂಡಾ ಹುಟ್ಟುಹಾಕಿತ್ತು. ಈಗ ಇವೆಲ್ಲವುಗಳ ನಂತರ ಮಹೇಶ್ ಬಾಬು ಅವರು ಮತ್ತೊಮ್ಮೆ ಬಾಲಿವುಡ್ ವಿಚಾರ ಒಂದರ ಕುರಿತಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ತಾವು ನಟಿಸುವ ಸಿನಿಮಾಗಳಲ್ಲಿ ಬಾಲಿವುಡ್ ನಟಿಯರಿಗೆ ಅವಕಾಶ ನೀಡುವ ಅಗತ್ಯ ಇಲ್ಲ ಎನ್ನುವ ಮಾತನ್ನು ಮಹೇಶ್ ಬಾಬು ಅವರು ಹೇಳಿದ್ದಾರೆ ಎನ್ನುವ ವಿಚಾರ ಇದೀಗ ದೊಡ್ಡ ಸುದ್ದಿಯಾಗಿದೆ.
ನಟ ಮಹೇಶ್ ಬಾಬು ಅವರು ಬಾಹುಬಲಿ ಹಾಗೂ ತ್ರಿಬಲ್ ಆರ್ ಸಿನಿಮಾಗಳ ಖ್ಯಾತಿಯ ನಿರ್ದೇಶಕ ರಾಜಮೌಳಿಯವರ ಜೊತೆಯಲಿ ಹೊಸ ಸಿನಿಮಾ ಮಾಡುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರ ಜೊತೆ ನಟಿಸಲು ನಾಯಕಿಯ ಆಯ್ಕೆ ಪ್ರಕ್ರಿಯೆ ಬಹಳ ಜೋರಾಗಿ ನಡೆಯುತ್ತಿದೆ. ಈ ವೇಳೆ ನಿರ್ದೇಶಕ ರಾಜಮೌಳಿ ಅವರು ಬಾಲಿವುಡ್ ನಿಂದ ನಾಯಕಿಯನ್ನು ಕರೆತರಲು ಸಜ್ಜಾಗಿದ್ದರು ಎನ್ನಲಾಗಿದ್ದು, ನಟ ಮಹೇಶ್ ಬಾಬು ಅವರು ಮಾತ್ರ ತನ್ನ ಸಿನಿಮಾಕ್ಕೆ ಬಾಲಿವುಡ್ ನಟಿ ಬೇಡ ಎನ್ನುವ ಮಾತು ಹೇಳಿದ್ದಾರೆನ್ನಲಾಗಿದೆ.
ಈಗಾಗಲೇ ತಾನು ಬಾಲಿವುಡ್ ನ ಸಿನಿಮಾಗಳನ್ನು ರಿಮೇಕ್ ಮಾಡುವುದಿಲ್ಲ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದ ನಟ ಮಹೇಶ್ ಬಾಬು ಅವರು ಈಗ ಬಂದ ಹೆಜ್ಜೆ ಮುಂದಿಟ್ಟು, ತಮ್ಮ ಸಿನಿಮಾಗಳಲ್ಲಿ ಬಾಲಿವುಡ್ ನಟಿಯರು ಬೇಡ ಎನ್ನುವ ಮಾತನ್ನು ಹೇಳುವ ಮೂಲಕ ದಕ್ಷಿಣದ ನಟಿಯರಿಗೆ ಪ್ರಾಧಾನ್ಯತೆಯನ್ನು ನೀಡಿದ್ದಾರೆ. ಅಲ್ಲದೇ ದಕ್ಷಿಣ ಸಿನಿಮಾರಂಗ ಬಾಲಿವುಡ್ ಗೆ ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ ಎನ್ನುವ ಸಂದೇಶವನ್ನು ರವಾನೆ ಮಾಡಿದ್ದಾರೆ.