ನನ್ನ ಸಿನಿಮಾಕ್ಕೆ ಆ ಸ್ಟಾರ್ ನಟ ಹೀರೋ ಆಗ್ಬೇಕು: ಸೋನು ಮಾತಿಗೆ ನೆಟ್ಟಿಗರು ಶಾಕ್, ಇಷ್ಟಕ್ಕೂ ಯಾರು ಆ ಹೀರೋ?

0 1

ಬಿಗ್ ಬಾಸ್ ಮನೆಗೆ ಹೋಗುವ ಸೆಲೆಬ್ರಿಟಿಗಳಿಗೆ ಮನೆಯಿಂದ ಹೊರಗೆ ಬಂದ ಮೇಲೆ ಸಾಕಷ್ಟು ಅವಕಾಶಗಳು ಅರಸಿ ಬರುತ್ತವೆ. ಸಿನಿಮಾ ನಿರ್ದೇಶಕ, ನಿರ್ಮಾಪಕರು ಹಾಗೂ ರಿಯಾಲಿಟಿ ಶೋ ಗಳು, ಸೀರಿಯಲ್ ಗಳವರು ಬಿಗ್ ಬಾಸ್ ನಿಂದ ಹೊರಗೆ ಬರುವ ಸ್ಪರ್ಧಿಗಳಿಗೆ ಅವಕಾಶವನ್ನು ನೀಡಲು ಸಜ್ಜಾಗಿರುತ್ತಾರೆ. ಈಗಾಗಲೇ ಹಿಂದಿನ ಸೀಸನ್ ಗಳಲ್ಲಿ ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಹಲವು ಸ್ಪರ್ಧಿಗಳು ಸಿನಿಮಾಗಳಲ್ಲಿ ಅವಕಾಶವನ್ನು ಪಡೆದಿದ್ದಾರೆ. ಅಲ್ಲದೇ ಪ್ರಥಮ್, ಶಶಿ ಅಂತ ಸ್ಪರ್ಧಿಗಳು ಸಿನಿಮಾಗಳಲ್ಲಿ ನಾಯಕರಾಗಿ ಸಹಾ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಕೆಲವು ನಟಿಯರು ನಿರೂಪಕಿಯರಾಗಿ, ಸಿನಿಮಾ ನಟಿಯರಾಗಿಯೂ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಇದೀಗ ಬಿಗ್ ಬಾಸ್ ಕನ್ನಡ ಓಟಿಟಿ ಮೊದಲನೇ ಸೀಸನ್ ಮುಗಿದಾಗಿದೆ. ಟಾಪರ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿ ಐದು ಲಕ್ಷ ಬಹುಮಾನ ಪಡೆದಿದ್ದಾರೆ. ಜೊತೆಗೆ ರಾಕೇಶ್ ಅಡಿಗ, ಸಾನ್ಯಾ ಅಯ್ಯರ್, ಆರ್ಯವರ್ಧನ್ ಗುರೂಜಿ ಸೇರಿದಂತೆ ನಾಲ್ಕು ಜನರು ಟಿವಿ ಬಿಗ್ ಬಾಸ್ ನ ಹೊಸ ಸೀಸನ್ ಗೆ ಎಂಟ್ರಿ ನೀಡಲು ಅವಕಾಶವನ್ನು ಪಡೆದುಕೊಂಡಿದ್ದಾರೆ. ಓಟಿಟಿ ಬಿಗ್ ಬಾಸ್ ನ ಕಡೆ ನೋಡಿದಾಗ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದು, ಸುದ್ದಿಯನ್ನು ಮಾಡಿದ್ದು ಯಾರು ಎಂದರೆ ಅದು ಸೋನು ಶ್ರೀನಿವಾಸ್ ಗೌಡ. ಹೇಳಬೇಕಾಗಿದ್ದನ್ನು ಯಾವುದೇ ಮುಚ್ಚು ಮರೆಯಿಲ್ಲದೇ ನೇರವಾಗಿ ಮಾತನಾಡುವ ಮೂಲಕ ಸೋನು ಸುದ್ದಿಯಾಗಿದ್ದರು.

ಮನೆಯೊಳಗೆ ಒಂದಷ್ಟು ಜಗಳ, ಚರ್ಚೆ, ಗಲಾಟೆ ಹೀಗೆ ಸೋನು ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಾದರು. ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಗೆ ಬರುವ ಮೊದಲೇ ಸಿನಿಮಾದಲ್ಲಿ ನಟಿಸಿದ್ದರು. ಈಗ ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಹೊಸ ಹೊಸ ಅವಕಾಶಗಳನ್ನು ಅವರನ್ನು ಅರಸಿ ಬರುತ್ತಿವೆ ಎನ್ನಲಾಗಿದೆ. ಮನೆಯಿಂದ ಹೊರ ಬಂದ ಕೂಡಲೇ ಸಾಕಷ್ಟು ಅವಕಾಶಗಳು ಬಂದಿವೆ ಎಂದಿರುವ ಸೋನು, ಸಿಕ್ಕ ಸಿನಿಮಾಗಳಲ್ಲಿ ತಾನು ನಟಿಸುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಸಿನಿಮಾದಲ್ಲಿ ನನ್ನ ಪಾತ್ರಕ್ಮೆ ಮಹತ್ವ ಇರಬೇಕು ಎಂದು ಹೇಳಿದ್ದಾರೆ ಸೋನು ಶ್ರೀನಿವಾಸ್ ಗೌಡ.

ಇದೇ ವೇಳೆ ತಾನು ಸ್ಟಾರ್ ನಟರ ಸಿನಿಮಾ ಮೂಲಕ ತಾನು ರೀ ಎಂಟ್ರಿ ನೀಡಬೇಕು ಎಂದಿರುವ ಸೋನು ಶ್ರೀನಿವಾಸ್ ಗೌಡ, ತಾನು ನಟಿಸುವ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ಹೀರೋ ಆಗಿರಬೇಕು ಎಂದು ಹೇಳಿದ್ದಾರೆ. ಅಂತಹ ಸ್ಟಾರ್ ನಟರ ಜೊತೆ ನಟಿಸಲು ಇಷ್ಟಪಡುತ್ತೇನೆ. ಹಾಗಂದ ಮಾತ್ರಕ್ಕೆ ಅವರ ಸಿನಿಮಾದಲ್ಲಿ ಮಾತ್ರ ನಟಿಸುತ್ತೇನೆ ಎಂದಲ್ಲ. ಅದು ನನ್ನ ಕನಸು ಅಷ್ಟೇ. ಕನ್ನಡದಲ್ಲಿ ಸಾಕಷ್ಟು ಒಳ್ಳೆಯ ನಟರು ಇದ್ದಾರೆ, ಅವಕಾಶ ಬಂದಾಗ, ಒಳ್ಳೆಯ ಪಾತ್ರ ಸಿಕ್ಮಾಗ ಅದನ್ನು ನಾನು ಬಳಸಿಕೊಳ್ಳುತ್ತೇನೆ ಎನ್ನುವ ಮಾತನ್ನು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ. ಸಿನಿಮಾ ರಂಗದ ಬಗ್ಗೆ ದೊಡ್ಡ ಕನಸನ್ನು ಕಂಡಿರುವುದಾಗಿ ಸೋನು ಹೇಳಿಕೊಂಡಿದ್ದಾರೆ.

Leave A Reply

Your email address will not be published.