ನನ್ನ ರೇಟಿಂಗ್ ಆ..ಥೂ ಎಂದು ಕೆಜಿಎಫ್-2 ಬಗ್ಗೆ ಮನಬಂದಂತೆ ವಿಮರ್ಶೆ ಮಾಡಿದ KRK! ಅಭಿಮಾನಿಗಳು ಸಿಟ್ಟು

Entertainment Featured-Articles News

ಬಿಡುಗಡೆ ಆದ ಎಲ್ಲಾ ಭಾಷೆಗಳಲ್ಲಿ ಸಹಾ ಅಬ್ಬರಿಸುತ್ತಿರುವ, ಸಿನಿಮಾ‌ ರಂಗದಲ್ಲೊಂದು ಸಂಚಲನ ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್-2 ಗೆ ಎಲ್ಲೆಡೆಯಿಂದಲೂ ಮೆಚ್ಚುಗೆಗಳು ಹರಿದು ಬರುತ್ತಿವೆ. ಅಲ್ಲದೇ ಸ್ಟಾರ್ ನಟ ರಜನೀಕಾಂತ್ ಕೂಡಾ ಸಿನಿಮಾವನ್ನು ಕನ್ನಡ ವರ್ಷನ್ ನಲ್ಲಿಯೇ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಇವೆಲ್ಲವುಗಳ ನಡುವೆ ಬಾಲಿವುಡ್ ನ ಸ್ವಯಂ ಘೋಷಿತ ಚಿತ್ರ ವಿಮರ್ಶಕ ಕಮಾಲ್ ಆರ್ ಖಾನ್ ಮಾತ್ರ ಕೆಜಿಎಫ್-2 ಸಿನಿಮಾ ಬಗ್ಗೆ ಕಟುವಾಗಿ ಟೀಕೆಗಳನ್ನು ಮಾಡಿದ್ದಾರೆ.

ಸಿನಿಮಾ ಬಿಡುಗಡೆ ನಂತರ ನಿರಂತರವಾಗಿ ಸಾಲು ಸಾಲು ಟ್ವೀಟ್ ಮಾಡುತ್ತಾ ಕಮಾಲ್ ಆರ್ ಖಾನ್ ಕೆಜಿಎಫ್-2 ಸಿನಿಮಾ ಬಗ್ಗೆ ಒಂದರ ನಂತರ ಮತ್ತೊಂದು ಎನ್ನುವಂತೆ ಟೀಕೆಗಳನ್ನು ಮಾಡುತ್ತಾ, ನಟ ಯಶ್ ಅವರನ್ನು ವ್ಯಂಗ್ಯವಾಡಿದ್ದು ಮಾತ್ರವೇ ಅಲ್ಲದೇ, ಸಿನಿಮಾವನ್ನು ಡಿಸಾಸ್ಟರ್, ಹಣ ವ್ಯರ್ಥ ಎಂದೆಲ್ಲಾ ಮನಸ್ಸಿಗೆ ಬಂದ ಹಾಗೆ ಟ್ವೀಟ್ ಮಾಡಿ, ತೀರಾ‌‌ ಕೆಳಮಟ್ಟಕ್ಕೆ ಇಳಿದು ಟ್ವೀಟ್ ಗಳನ್ನು ಮುಂದುವರೆಸಿರುವುದು ನೆಟ್ಟಿಗರ ಕೋಪಕ್ಕೆ ಸಹಾ ಕಾರಣವಾಗಿದೆ.

ಕೆ ಆರ್ ಕೆ ಟ್ವೀಟ್ ಮಾಡಿ, ಕೆಜಿಎಫ್-2 ಸಿನಿಮಾ‌ ಮೂರು ಗಂಟೆಗಳ ಟಾಪ್ ಕ್ಲಾಸ್ ಟಾರ್ಚರ್ ಎಂದಿದ್ದು, ಸಿನಿಮಾ ನಿರ್ಮಾಣ ಎನ್ನುವ ಹೆಸರಲ್ಲಿ ಹಣವನ್ನು ವ್ಯರ್ಥ ಮಾಡಲಾಗಿದೆ. ಈ ಸಿನಿಮಾ ಒಂದು ವೇಳೆ ಹಿಟ್ ಆದ್ರೆ ಬಾಲಿವುಡ್ ಅವನತಿ ಆದಂತೆ. ಬಾಲಿವುಡ್ ಇಂತದೊಂದು ಸಿನಿಮಾ ಮಾಡಿದರೆ ಅದು ಖಂಡಿತ ಡಿಸಾಸ್ಟರ್ ಆಗುತ್ತೆ.‌ ನಾನು ಈ ಸಿನಿಮಾಕ್ಕೆ ನೀಡುವ ರೇಟಿಂಗ್ ಆ… ಥೂ ಎಂದು ಉದ್ದಟತನ ಮೆರೆದಿದ್ದಾರೆ.

ಇದೇ ವೇಳೆ ನಟ ಯಶ್ ಅವರನ್ನು ವ್ಯಂಗ್ಯ ಮಾಡಿದ್ದು, ನೀವು ಕನ್ನಡಕ ತೆಗಿದೇನೆ ಒಂದೇ ಗಂಟೆಯಲ್ಲಿ ರಷ್ಯಾ ಯು ದ್ಧ ಕೂಡಾ ನಿಲ್ಲಿಸಬಲ್ಲಿರಿ, ಆ ಕೆಲಸ ಮಾಡಿ ಲಕ್ಷಾಂತರ ಜನರ ಪ್ರಾಣ ಉಳಿಸಿ.‌ ಕೆಜಿಎಫ್-2 ಸಿನಿಮಾ‌‌ ಮಾಡಿದ್ದಕ್ಕೆ ನಿಮಗೆ ನಾಚಿಕೆ ಆಗಬೇಕು, ಆ, ಥೂ ಅನ್ನೋದು ನನ್ನ ರೇಟಿಂಗ್ ಎಂದು ಮತ್ತೊಮ್ಮೆ ನಾಲಗೆ ಹರಿ ಬಿಟ್ಟಿದ್ದಾರೆ ಕೆ ಆರ್ ಕೆ. ಕಮಾಲ್ ಖಾನ್ ಟ್ವೀಟ್ ಗೆ ನೆಟ್ಟಿಗರು ಅಸಮಾಧಾನವನ್ನು ಹೊರ ಹಾಕಿದ್ದಾರೆ. ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *