ನನ್ನ ಮುಂದಿನ 3 ಸಿನಿಮಾಗಳು ಬ್ಲಾಕ್ ಬಸ್ಟರ್ ಪಕ್ಕಾ: ಶಾರೂಖ್ ಆತ್ಮವಿಶ್ವಾಸಕ್ಕೆ ಸಿಗುತ್ತಾ ಗೆಲುವು?

Written by Soma Shekar

Published on:

---Join Our Channel---

ಬಾಲಿವುಡ್ ಮಾತ್ರವೇ ಅಲ್ಲದೇ ಬಾಲಿವುಡ್ ಸ್ಟಾರ್ ಗಳ ಸಮಯ ಕೂಡಾ ಏಕೋ ಸರಿ ಇಲ್ಲ ಎನ್ನುವಂತೆ ಇದೆ ಸಮಯ. ಬಾಲಿವುಡ್ ನಲ್ಲಿ ಕಿಂಗ್ ಖಾನ್ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ನಟ ಶಾರೂಖ್ ಖಾನ್ ನಟಿಸಿದ ಯಾವುದೇ ಹೊಸ ಸಿನಿಮಾ ಕಳೆದ ಮೂರು ವರ್ಷಗಳಿಂದಲೂ ತೆರೆ ಕಂಡಿಲ್ಲ. ಅದು ಮಾತ್ರವೇ ಅಲ್ಲ, ಮೂರು ವರ್ಷಗಳ ಹಿಂದೆ ಶಾರೂಖ್ ನಾಯಕನಾಗಿ ಕಾಣಿಸಿಕೊಂಡಿದ್ದ ಸಿನಿಮಾಗಳು ಹೀನಾಯ ಸೋಲನ್ನು ಕಂಡಿದ್ದವು. ಅದಾದ ನಂತರ ಅಭಿಮಾನಿಗಳು ಶಾರೂಖ್ ಸಿನಿಮಾಗಳಿಗಾಗಿ ಕಾಯುತ್ತಿದ್ದಾರೆ. ನಟ ಶಾರೂಖ್ ಖಾನ್ ಅವರಿಗೆ ಕೂಡಾ ಒಂದು ಭರ್ಜರಿ ಯಶಸ್ಸು ಎನ್ನುವುದು ಈಗ ಅನಿವಾರ್ಯವಾಗಿದೆ. ಮತ್ತೆ ತನ್ನ ಚಾರ್ಮ್ ಮರಳಿ ಪಡೆಯಲು ನಟ ಸಹಾ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ.

ಪ್ರಸ್ತುತ ನಟ ಮೂರು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಪಠಾಣ್, ಡಂಕಿ ಮತ್ತು ಜವಾನ್ ಸಿನಿಮಾಗಳಲ್ಲಿ ಶಾರೂಖ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ನಟ ಶಾರೂಖ್ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರನ್ನು ಅವರ ಮುಂದಿನ ಸಿನಿಮಾಗಳ ಕುರಿತಾಗಿ ಪ್ರಶ್ನೆಯನ್ನು ಮಾಡಿದಾಗ ಅವರು ತಮ್ಮ ಸಿನಿಮಾಗಳ ಬಗ್ಗೆ ಭವಿಷ್ಯವಾಣಿಯನ್ನು ನುಡಿದು ಗಮನ ಸೆಳೆದಿದ್ದಾರೆ. ಹೌದು, ಹಿಂದಿನ ಸಿನಿಮಾಗಳ ಸೋಲಿನ ಹಿನ್ನೆಲೆಯಲ್ಲಿ ಸಂದರ್ಶನದಲ್ಲಿ ಅವರನ್ನು ಹೊಸ ಸಿನಿಮಾಗಳ ಕುರಿತಾಗಿ ನರ್ವಸ್ ಆಗಿದ್ದೀರಾ? ಎನ್ನುವ ಪ್ರಶ್ನೆಯೊಂದನ್ನು ಕೇಳಿದಾಗ ಶಾರೂಖ್ ಬಹಳ ಆತ್ಮವಿಶ್ವಾಸದಿಂದ ಉತ್ತರ ನೀಡಿದ್ದಾರೆ.

ಶಾರೂಖ್ ಖಾನ್ ಮಾತನಾಡುತ್ತಾ, ನಾನು ಖಂಡಿತಾ ನರ್ವಸ್ ಆಗಿಲ್ಲ ಏಕೆಂದರೆ ಸಿನಿಮಾ ಗೆಲ್ಲುತ್ತವೆ ಎನ್ನುವ ಆತ್ಮವಿಶ್ವಾಸ ಇದೆ ಎಂದಿದ್ದಾರೆ. ಈ ವೇಳೆ ಶಾರೂಖ್ ಅವರು ದುರಹಂಕಾರದಿಂದ ಈ ರೀತಿ ಮಾತನಾಡುತ್ತಿಲ್ಲ. ಚಿತ್ರ ಗೆಲ್ಲುತ್ತದೆ ಎನ್ನುವ ನಂಬಿಕೆಯಿದೆ. ಅದೇ ನಂಬಿಕೆಯಿಂದಲೇ ಮಲಗುತ್ತಿದ್ದೇನೆ ಮತ್ತು ಏಳುತ್ತಿದ್ದೇನೆ. ಅದೇ ನಂಬಿಕೆಯಿಂದಲೇ ದಿನಕ್ಕೆ 18 ಗಂಟೆಗಳ ಕೆಲಸವನ್ನು ಮಾಡುತ್ತಾ, 57 ನೇ ವಯಸ್ಸಿನಲ್ಲಿಯೂ ರಿ ಸ್ಕ್ ತೆಗೆದುಕೊಂಡು ಸ್ಟಂಟ್ ಗಳನ್ನು ಮಾಡುತ್ತಿದ್ದೇನೆ. ಈ ಸಿನಿಮಾಗಳ ಮೇಲೆ ನಂಬಿಕೆ ಇಲ್ಲದಿದ್ದರೆ ಈ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಲೇ ಇರಲಿಲ್ಲ ಎಂದು ಹೇಳಿದ್ದಾರೆ.

ತನಗೆ ಬಾಲ್ಯದಿಂದಲೂ ಇಂತಹುದೊಂದು ಆತ್ಮ ವಿಶ್ವಾಸ ಇದೆ ಎನ್ನುವ ಮಾತನ್ನು ಸಹಾ ಶಾರೂಖ್ ಈ ವೇಳೆ ಹೇಳಿದ್ದಾರೆ. ಗಣಿತ ಪರೀಕ್ಷೆಯನ್ನು ಚೆನ್ನಾಗಿ ಮಾಡಿದ್ದೆ ಎಂದು ಕೊಂಡಿದ್ದೆ ಆದರೆ ನೂರಕ್ಕೆ ಮೂರು ಅಂಕ ಮಾತ್ರವೇ ಬಂದಿತ್ತು ಎಂದಿರುವ ಅವರು ಎಲ್ಲಾ ಸಿನಿಮಾಗಳಿಗೂ ಸಹಾ ಒಂದೇ ರೀತಿಯ ಶ್ರಮವನ್ನು ಹಾಕುತ್ತೇನೆ. ಅದು ಕೆಲವೊಮ್ಮೆ ದಿಲ್ವಾಲೇ ದುಲ್ಹನಿಯಾ ಲೇಜಾಯೇಂಗೇ ಆದರೆ ಇನ್ನೂ ಕೆಲವೊಮ್ಮೆ ಅದು ಜೀರೋ ಸಿನಿಮಾ ಆಗುತ್ತದೆ ಎಂದಿದ್ದಾರೆ. ಶಾರೂಖ್ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

Leave a Comment