ನನ್ನ ಪ್ರೇಮಕಥೆ ಎಂದಿಗೂ ಮುಗಿಯುವುದಿಲ್ಲ: ನಟಿ ಸಮಂತಾ ನಿರೀಕ್ಷೆ! ಇದು ಬಹಳ ವಿಶೇಷ ದಿನ

Entertainment Featured-Articles News

ತೆಲುಗು ಸಿನಿಮಾ ರಂಗದಲ್ಲಿ ಪ್ರಸ್ತುತ ಹೆಚ್ಚು ಸುದ್ದಿಯಾಗುತ್ತಿರುವ ನಟಿ ಎಂದರೆ ಸಮಂತಾ. ವಿಚ್ಛೇದನದ ನಂತರ ನಟಿ ಸಮಂತಾ ಮೊದಲಿಗಿಂತಲೂ ಹೆಚ್ಚು ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಸಾಲು ಸಾಲು ನಾಯಕಿ ಪ್ರಧಾನ ಕಥಾಹಂದರ ಗಳನ್ನು ಹೊಂದಿರುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಪುಷ್ಪ ಸಿನಿಮಾದ ವಿಶೇಷ ಹಾಡಿನಲ್ಲಿ ಸಮಂತಾ ಹಾಕಿದ ಮಾದಕ ಹೆಜ್ಜೆಗಳಿಗೆ ಅಭಿಮಾನಿಗಳು ಮನಸೋತಿದ್ದಾರೆ. ಸಿನಿಮಾ ಮಾತ್ರವೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಸಮಂತಾ ಹೆಚ್ಚು ಸಕ್ರಿಯವಾಗಿದ್ದಾರೆ.

ಸಮಂತ ಇತ್ತೀಚಿನ ದಿನಗಳಲ್ಲಿ ಸಿನಿಮಾ ವಿಷಯಗಳು ಮಾತ್ರವೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪೋಸ್ಟ್ ಗಳಿಂದಾಗಿಯೂ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಸ್ಪೂರ್ತಿ ಹಾಗೂ ಪ್ರೇರಣೆಯ ಅರ್ಥಪೂರ್ಣ ಮಾತುಗಳನ್ನು ಹಂಚಿಕೊಳ್ಳುವ ಮೂಲಕ, ಸಮಂತಾ ತಮ್ಮ ಅಭಿಮಾನಿಗಳಿಗೆ ಕೆಲವು ಸಂದೇಶಗಳನ್ನು ನೀಡುತ್ತಾರೆ. ಅಲ್ಲದೇ ತಮ್ಮ ಪ್ರವಾಸದ ಬಹಳ ಅಂದವಾದ ಫೋಟೋಗಳನ್ನು ಕೂಡಾ ಆಗಾಗ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಈಗ ಸಮಂತ ಮತ್ತೊಮ್ಮೆ ತಾವು ಮಾಡಿದ ಪೋಸ್ಟ್ ನಿಂದಾಗಿ ಸುದ್ದಿಯಾಗಿದ್ದಾರೆ. ಹೌದು ನಟಿ ಸಮಂತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಬರೋಬ್ಬರಿ 12 ವರ್ಷಗಳು ಕಳೆದಿದ್ದು, ಈ ವಿಶೇಷ ದಿನದ ಹಿನ್ನಲೆಯಲ್ಲಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಫೋಟೋವನ್ನು ಶೇರ್ ಮಾಡುತ್ತಾ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ತೆಲುಗಿನಲ್ಲಿ ನಟಿ ಸಮಂತಾ ನಟಿಸಿದ ಮೊದಲ ಸಿನಿಮಾ ಏಮ್ ಮಾಯ ಚೇಸಾವೆ ? ಬಿಡುಗಡೆ ಹೊಂದಿ ಫೆಬ್ರವರಿ 26ಕ್ಕೆ ಹನ್ನೆರಡು ವರ್ಷಗಳಾಗಿವೆ.

ಈ ದಿನಕ್ಕೆ ಮತ್ತೊಂದು ವಿಶೇಷತೆ ಕೂಡಾ ಇದೆ. ಅದೇನೆಂದರೆ ಸಮಂತ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಟ ನಾಗಚೈತನ್ಯ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರರಂಗದಲ್ಲಿ 12 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಟಿ ಸಮಂತಾ ತಮ್ಮ ಪೋಸ್ಟ್ ನಲ್ಲಿ, ಒಂದು ಬೆಳಿಗ್ಗೆ ಚಲನಚಿತ್ರೋದ್ಯಮದಲ್ಲಿ 12 ವರ್ಷಗಳನ್ನು ಪೂರೈಸಿದ್ದೇನೆ ಎನ್ನುವ ಸಂತೋಷದಿಂದ ಎಚ್ಚರಗೊಂಡಿದ್ದೇನೆ. ಲೈಟ್ಸ್, ಕ್ಯಾಮೆರಾ,‌ ಆಕ್ಷನ್ ಹಾಗೂ ಬಣ್ಣಿಸಲಾಗದ ನೆನಪುಗಳ ಸುತ್ತ ಸುತ್ತುವ 12ವರ್ಷಗಳಿವು.

ಈ ಸುಂದರವಾದ ಪಯಣ, ಇಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವುದಕ್ಕೆ ಕೃತಜ್ಞಳಾಗಿದ್ದೇನೆ. ಸಿನಿಮಾದ ಜೊತೆ ನನ್ನ ಪ್ರೇಮ ಕಥೆ ಎಂದಿಗೂ ಮುಗಿಯುವುದಿಲ್ಲ. ಇಲ್ಲಿ ಶಕ್ತಿ ಇನ್ನಷ್ಟು ಸಮೃದ್ಧವಾಗಿದೆ ಎಂದು ಬರೆದುಕೊಂಡು, ತಮ್ಮ 12 ವರ್ಷದ ಸಿನಿಮಾ ಪ್ರಯಾಣದ ಖುಷಿಯನ್ನು ತಮ್ಮೆಲ್ಲಾ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸಮಂತಾ ಅಭಿಮಾನಿಗಳು ಈ ಪೋಸ್ಟಿಗೆ ಪ್ರತಿಕ್ರಿಯೆ ನೀಡುತ್ತಾ ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತಿದ್ದಾರೆ.

Leave a Reply

Your email address will not be published.