ನನ್ನ ಪಕ್ಕ ನಟಿಸುವಷ್ಟು ಜನಪ್ರಿಯತೆ ಅವರಿಗಿಲ್ಲ: ಪ್ರತಿಭಾವಂತ ನಟನ ಬಗ್ಗೆ ನಯನತಾರಾ ಅಸಮಾಧಾನ??

0 3

ಮಲಯಾಳಂ ಭಾಷೆಯಲ್ಲಿ ಸಂಚಲನ ಸೃಷ್ಟಿಸಿ, ಸೂಪರ್ ಹಿಟ್ ಆದಂತಹ ಲೂಸಿಫರ್ ಸಿನಿಮಾ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಾಯಕನಾಗಿ ಗಾಡ್‌ಫಾದರ್ ಹೆಸರಿನಲ್ಲಿ ರಿಮೇಕ್ ಆಗುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಮಲಯಾಳಂನಲ್ಲಿ ಮೋಹನ್ ಲಾಲ್ ನಟಿಸಿದ್ದ ಅದೇ ಪಾತ್ರವನ್ನು ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಪೋಷಿಸುತ್ತಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಹೀರೋ ಪಾತ್ರಕ್ಕೆ ಎಷ್ಟು ಪ್ರಾಧಾನ್ಯತೆಯನ್ನು ನೀಡಲಾಗಿದೆಯೋ ಅಷ್ಟೇ ಪ್ರಾಧಾನ್ಯತೆಯನ್ನು ನಾಯಕನ ತಂಗಿ ಪಾತ್ರಕ್ಕೂ ಕೂಡಾ ನೀಡಲಾಗಿದೆ.

ಮಲಯಾಳಂನಲ್ಲಿ ನಾಯಕನ ತಂಗಿಯ ಪಾತ್ರವನ್ನು ನಟಿ ಮಂಜು ವಾರಿಯರ್ ಪೋಷಿಸಿದ್ದರು. ಅದೇ ಪಾತ್ರವನ್ನು ತೆಲುಗಿನಲ್ಲಿ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನತಾರಾ ಪೋಷಿಸುತ್ತಿದ್ದಾರೆ. ನಟಿ ನಯನತಾರಾ ಚಿರಂಜೀವಿ ಅವರ ತಂಗಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಮಲಯಾಳಂ ಸಿನಿಮಾದಲ್ಲಿ ಈ ಪಾತ್ರಕ್ಕೆ ಗಂಡನ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲಿ ನಯನತಾರಾ ಗಂಡನಾಗಿ ಪ್ರತಿಭಾವಂತ ಯುವ ನಟನಾಗಿ ಗುರ್ತಿಸಿಕೊಂಡಿರುವ ಸತ್ಯದೇವ್ ಕಾಣಿಸಿಕೊಳ್ಳಲಿದ್ದಾರೆ.

ವಿಚಾರ ಹೀಗಿರುವಾಗಲೇ ನಯನತಾರ ತನ್ನ ಜೋಡಿಯಾಗಿ ನಟಿಸುವ ನಟನ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಸಿನಿಮಾದಲ್ಲಿ ತನ್ನ ಪಕ್ಕದಲ್ಲಿ ಜನಪ್ರಿಯ ನಟ ನಟಿಸುತ್ತಾನೆ ಎಂದು ತಿಳಿದಿದ್ದ ನಯನತಾರಾ ಅವರು ಈ ವಿಷಯಕ್ಕೆ ಪ್ರತಿಕ್ರಿಯೆ ನೀಡುತ್ತಾ, “ಯುವ ನಟ ಸತ್ಯದೇವ್ ತನ್ನ ಜೊತೆಯಲ್ಲಿ ನಟಿಸುವಷ್ಟು ಜನಪ್ರಿಯತೆಯನ್ನು ಇನ್ನು ಪಡೆದುಕೊಂಡಿಲ್ಲ” ಎನ್ನುವ ಮಾತನ್ನು ಹೇಳಿದ್ದಾರೆ ಎನ್ನುವ ವಿಷಯವೊಂದು ಹರಿದಾಡುತ್ತಿದೆ.

ಆದರೆ ಸಿನಿಮಾ ನಿರ್ದೇಶಕ ಮೋಹನ್ ರಾಜುರವರು ಚಿರಂಜೀವಿ ಅವರ ಪಾತ್ರದ ನಂತರ ಮತ್ತೊಂದು ಪಾತ್ರಕ್ಕೆ ತಾವು ಅಂದು ಕೊಟ್ಟಿದ್ದು ನಟ ಸತ್ಯದೇವ ಅವರನ್ನೇ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವರನ್ನು ಬದಲಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ನಟ ಸತ್ಯದೇವ್ ತೆಲುಗು ಸಿನಿಮಾ ರಂಗದಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕವೇ ಜನರನ್ನು ರಂಜಿಸುತ್ತಿರುವ, ನಟನೆಗೆ ಪ್ರಾಶಸ್ತ್ಯವಿರುವ ಪಾತ್ರಗಳಲ್ಲಿ ಹೆಚ್ಚಾಗಿ ಮಿಂಚುತ್ತಿರುವ ನಾಯಕನಟನಾಗಿದ್ದಾರೆ.

Leave A Reply

Your email address will not be published.