ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅಂತರರಾಷ್ಟ್ರೀಯ ಮಟ್ಟದ ಟೆನಿಸ್ ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ದೊಡ್ಡ ಮಟ್ಟದಲ್ಲಿ ಹೆಸರನ್ನು ಮಾಡಿ, ಜನಪ್ರಿಯತೆ ಪಡೆದು, ದೇಶಕ್ಕಾಗಿ ಹಲವು ಟೆನಿಸ್ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಸಾನಿಯಾ ಮಿರ್ಜಾ ಇದೀಗ ತಮ್ಮ ಅಭಿಮಾನಿಗಳಿಗೆ ಬೇಸರ ಮೂಡಿಸುವಂತಹ ವಿಚಾರವನ್ನು ಹಂಚಿಕೊಂಡಿದ್ದಾರೆ. ಹೌದು ಸಾನಿಯಾ ಮಿರ್ಜಾ 2022 ತನ್ನ ಕೊನೆಯ ಸೀಸನ್ ಎಂದು ಹೇಳಿಕೆಯನ್ನು ನೀಡುವ ಮೂಲಕ ಟೆನಿಸ್ ಅಭಿಮಾನಿಗಳಿಗೊಂದು ಶಾ ಕ್ ನೀಡಿದ್ದಾರೆ.
ಸಾನಿಯಾ ಮಿರ್ಜಾ ಅವರು ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್ ನ ಮೊದಲ ಸುತ್ತಿನಲ್ಲಿ ಪಾರ್ಟ್ನರ್ ಆಗಿರುವ ನಾಡಿಯಾ ಕಿಚೆನೊಕ್ ಅವರ ಜೊತೆಗೆ ಸೋತ ನಂತರದಲ್ಲಿ ಸಾನಿಯಾ ಅವರ ತಮ್ಮ ನಿವೃತ್ತಿಯ ಕುರಿತಾಗಿ ಮಾತನಾಡಿದ್ದಾರೆ. ಸಾನಿಯಾ ಅವರು ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಈ ವೇಳೆ ಅವರು, ನನ್ನ ದೇಹವು ಕ್ಷೀಣಿಸುತ್ತಿದೆ, ಇಂದು ನಿಜವಾಗಿಯೂ ಮೊಣಕಾಲು ನೋಯುತ್ತಿದೆ. ನಾವು ಸೋತೆವೆಂದು ಹೇಳುತ್ತಿಲ್ಲ ಆದರೆ ವಯಸ್ಸಾದಂತೆ ನಾನು ಚೇತರಿಸಿಕೊಳ್ಳಲು ಸಮಯವಾಗುತ್ತಿದೆ ಎಂದಿದ್ದಾರೆ.
ನನ್ನ ಮಗನಿಗೆ ಮೂರು ವರ್ಷ ತುಂಬಿದೆ. ನಾನು ಅವನೊಂದಿಗೆ ತುಂಬಾ ಪ್ರಯಾಣಿಸುವ ಮೂಲಕ ಅವನಿಗೂ ಹೆಚ್ಚು ಅ ಪಾ ಯಕ್ಕೆ ಸಿಲುಕಿಸುತ್ತಿದ್ದೇನೆ ಎನಿಸುತ್ತಿದೆ. ಅದನ್ನು ನಾನು ಪರಿಗಣಿಸಬೇಕು ಎಂದಿದ್ದಾರೆ. ಸಾನಿಯಾ ಅವರಿಗೆ 35 ವರ್ಷ ವಯಸ್ಸಾಗಿದ್ದು, 2019 ರಲ್ಲಿ ಮಗನಿಗೆ ಜನ್ಮ ನೀಡಿದ ನಂತರ ಮತ್ತೆ ಟೆನಿಸ್ ಗೆ ಮರಳಿದ್ದರು. ಆದರೆ ಅನಂತರ ಕೊರೊನಾ ಕಾರಣದಿಂದ ಅವರ ಚಟುವಟಿಕೆಗಳಿಗೆ ಅಡೆತಡೆಗಳನ್ನು ಉಂಟು ಮಾಡಿತ್ತು.