ನನ್ನ ದೇಹದ ಆ ಭಾಗ ಬೇರೆ ನಟಿಯರಷ್ಟು ದಪ್ಪ ಇಲ್ಲವೆಂದು ರಿಜೆಕ್ಟ್ ಆದೆ: ಕರಾಳ ಸತ್ಯ ಬಿಚ್ಚಿಟ್ಟ ನಟಿ

Entertainment Featured-Articles Movies News

ಸಿನಿಮಾ ರಂಗದಲ್ಲಿ ಕೆಲವು ನಟಿಯರು ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದರೂ ಸಹಾ ಅವರಿಗೆ ಅವಕಾಶಗಳು ಎನ್ನುವುದು ಮಾತ್ರ ಬೆರಳೆಣಿಕೆಯಷ್ಟು ಎನ್ನುವುದು ವಾಸ್ತವದ ವಿಷಯವಾಗಿದೆ. ಅಂತಹ ನಟಿಯರ ಸಾಲಿಗೆ ಸೇರುತ್ತಾರೆ ಬಾಲಿವುಡ್ ಮತ್ತು ದಕ್ಷಿಣ ಸಿನಿಮಾ ರಂಗದಲ್ಲೂ ಸಹಾ ಹೆಸರನ್ನು ಮಾಡಿರುವಂತಹ ನಟಿ ರಾಧಿಕಾ ಆಪ್ಟೆ. ಪ್ರಸ್ತುತ ನಟಿ ರಾಧಿಕಾ ಆಪ್ಟೆ ಅವರು ಓಟಿಟಿ ಯಲ್ಲಿ ವೆಬ್ ಸಿರೀಸ್ ಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಆದ್ದರಿಂದಲೇ ಅವರನ್ನು ನೆಟ್ ಫ್ಲಿಕ್ಸ್ ಗರ್ಲ್ ಎಂದು ಸಹಾ ಕರೆಯಲಾಗುತ್ತಿದೆ.

ನಟಿ ರಾಧಿಕಾ ಆಪ್ಟೆ ಅವರಿಗೆ ಸುಮಾರು ಹದಿನೇಳು ವರ್ಷಗಳ ಸಿನಿ ಜರ್ನಿಯ ಅನುಭವ ಇದೆ. ಈ ಅವಧಿಯಲ್ಲಿ ಅವರು ನಟಿಸಿದ ಸಿನಿಮಾಗಳಲ್ಲಿ ತಮ್ಮ ಪಾತ್ರಕ್ಕೆ ಅವರು ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ರಾಧಿಕಾ ಅವರ ಸಿನಿಮಾಗಳು ಒಂದಷ್ಟು ವಿ ವಾ ದಗಳಿಗೆ ಸಹಾ ಕಾರಣವಾಗಿದ್ದು ವಾಸ್ತವ. ರಾಧಿಕಾ ನಟಿಸಿದ್ದ ಅಂಧಾದುನ್ ಮತ್ತು ಲವ್ ಸ್ಟೋರಿ ಸಖತ್ ಸದ್ದು ಮಾಡಿತ್ತು. ರಾಧಿಕಾ ಅವತ ಪಾತ್ರಕ್ಕೆ ದೊಡ್ಡ ಮೆಚ್ಚುಗೆ ಸಿಕ್ಕಿತ್ತು. ಆದರೆ ಆ ಮಾತ್ರಕ್ಕೆ ಬಾಲಿವುಡ್ ನಲ್ಲಿ ರಾಧಿಕಾ ಸ್ಟಾರ್ ನಟಿ ಖಂಡಿತ ಆಗಲಿಲ್ಲ ಎನ್ನುವುದು ಸತ್ಯ.

ತನಗೆ ಅವಕಾಶ ಗಳು ಸಿಗದೇ ಅನೇಕ ಸಿನಿಮಾಗಳಿಂದ ರಿಜೆಕ್ಟ್ ಆದ ವಿಚಾರವಾಗಿ ಮಾತನಾಡಿರುವ ರಾಧಿಕಾ ಅವರು ಅದಕ್ಕೆ ಕಾರಣ ನೀಡುತ್ತಾ, ತಾನು ತನ್ನ ದೇಹದ ಕಾರಣದಿಂದಾಗಿ ಅನೇಕ ಬಾರಿ ರಿಜೆಕ್ಟ್ ಆಗಿರುವುದಾಗಿ ಹೇಳಿದ್ದಾರೆ. ಬೇರೆ ನಟಿಯರು ದೊಡ್ಡ ಸ್ತನದ ಗಾತ್ರ ಮತ್ತು ತುಟಿಗಳನ್ನು ಹೊಂದಿರುವ ಕಾರಣದಿಂದ ನಾನು ಸಿನಿಮಾಗಳಿಂದ ರಿಜೆಕ್ಟ್ ಆದೆ ಎನ್ನುವ ಶಾಕಿಂಗ್ ವಿಚಾರವನ್ನು ರಾಧಿಕಾ ಆಪ್ಟೆ ಅವರು ಹಂಚಿಕೊಂಡಿದ್ದಾರೆ. ಹೆಚ್ಚು ಸೆ ಕ್ಸಿ ಯಾಗಿ ಕಾಣುವವರು ಹೆಚ್ಚು ಸೇಲ್ ಆಗುತ್ತಾರೆ ಎಂದು ಒಬ್ಬರು ನನಗೆ ಹೇಳಿದರು ಎಂದಿದ್ದಾರೆ ನಟಿ.

ಮತ್ತೊಂದು ಸಂದರ್ಶನದಲ್ಲಿ ಸಹಾ ನಟಿ ಮಾತನಾಡುತ್ತಾ, ವೃತ್ತಿ ಜೀವನದ ಆರಂಭದಲ್ಲಿ ತನ್ನ ಮೊದಲ ಮೀಟಿಂಗ್ ನಲ್ಲಿ ತನ್ನ ಮೂಗಿನ ಬಗ್ಗೆ, ಎರಡನೇ ಮೀಟಿಂಗ್ ನಲ್ಲಿ ಸ್ತನದ ಗಾತ್ರದ ಬಗ್ಗೆ ಹೇಳಿದರು. ಇನ್ನೊಮ್ಮೆ ನನ್ನ ಕಾಲುಗಳ ಬಗ್ಗೆ ಹೇಳಿದರು. ಸಿನಿಮಾ ರಂಗದಲ್ಲಿ ನಟಿಯರಿಗೆ ಪ್ಲಾಸ್ಟಿಕ್ ಸರ್ಜರಿಗೆ ಒತ್ತಡ ವನ್ನು ಹೇರಲಾಗುತ್ತದೆ ಎನ್ನುವ ಮಾತನ್ನು ಸಹಾ ರಾಧಿಕಾ ಆಪ್ಟೆ ಹೇಳಿದ್ದಾರೆ. ತಾನು ಕೂಡಾ ಅಂತಹುದೊಂದು ಒತ್ತಡಕ್ಕೆ ಒಳಗಾಗಿದ್ದೆ ಎನ್ನುವ ಮಾತನ್ನು ಸಹಾ ಹೇಳಿದ್ದಾರೆ.

Leave a Reply

Your email address will not be published.