ನನ್ನ ತಾಯಿ ಇಂದು ಬದುಕಿದ್ದಾರೆ ಅಂದ್ರೆ ಅದಕ್ಕೆ ರವಿ ಸರ್ ಕಾರಣ: ನಟಿ ಖುಷ್ಬೂ ಹೇಳಿದ ಭಾವುಕ ವಿಚಾರ

Entertainment Featured-Articles Movies News

ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡಿರುವ, ಕ್ರೇಜಿಸ್ಟಾರ್, ಕನಸುಗಾರ ಎಂದೆಲ್ಲಾ ಜನರಿಂದ ಕರೆಸಿಕೊಂಡಿರುವ, ಕನ್ನಡ ಸಿನಿಮಾಗಳಿಗೆ ಒಂದು ಅದ್ಭುತ ಶ್ರೀಮಂತಿಕೆಯನ್ನು ನೀಡಿ, ಬಣ್ಣದ ಲೋಕದಲ್ಲಿ ಕನಸಿನಂತ ಸಿನಿಮಾಗಳನ್ನು ನಿರ್ಮಾಣ ಮಾಡಿದ ನಟ ರವಿಚಂದ್ರನ್ ಅವರು ಮೇ 31 ಕ್ಕೆ 61 ವಸಂತಕ್ಕೆ ಕಾಲಿರಿಸುತ್ತಿದ್ದಾರೆ. ಅವರ ಈ ಜನ್ಮದಿನದ ಸಂತೋಷವನ್ನು, ಡ್ರಾಮ ಜೂನಿಯರ್ಸ್ ಬಹಳ ವಿಶೇಷವಾಗಿ ಸಂಭ್ರಮಿಸಿದೆ. ನಟನಿಗೆ ದೊಡ್ಡ ಸರ್ಪ್ರೈಸ್ ನೀಡಿ ಖುಷಿ ಪಡಿಸಿದೆ. ಅವರ ಮೆಚ್ಚುಗೆ ಗಳಿಸಿದೆ. ಇದೇ ವೇಳೆ ಒಂದು ಹೊಸ ವಿಷಯ ಕೂಡ ಹೊರ ಬಂದು ಜನ ಮೆಚ್ಚುಗೆ ಪಡೆದಿದೆ.

ಇನ್ನು ಈ ಎಪಿಸೋಡ್ ನ ಮತ್ತೊಂದು ವಿಶೇಷ ಏನೆಂದರೆ ರಣಧೀರ, ಅಂಜದ ಗಂಡು ಸಿನಿಮಾಗಳಲ್ಲಿ ಕ್ರೇಜಿಸ್ಟಾರ್ ಪಕ್ಕ ನಾಯಕಿಯಾಗಿ ಮಿಂಚಿದ್ದ ನಂತರ ದಕ್ಷಿಣದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ನಟಿ ಖುಷ್ಬೂ ಸುಂದರ್ ಅವರು ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಅವರು ರವಿಚಂದ್ರನ್ ಅವರ ಜನ್ಮದಿನದ ಈ ಸ್ಪೆಷಲ್ ಎಪಿಸೋಡ್ ನಲ್ಲಿ ಮಕ್ಕಳ ಪ್ರತಿಭೆಯನ್ನು ಎಂಜಾಯ್ ಮಾಡಿದ್ದು ಮಾತ್ರವೇ ಅಲ್ಲದೇ ಯಾವುದೇ ಸದ್ದು, ಸುದ್ದಿಯಿಲ್ಲದೇ ರವಿಚಂದ್ರನ್ ಅವರು ಮಾಡಿದ ಸಹಾಯದ ಬಗ್ಗೆ ಮಾತನಾಡಿದ್ದಾರೆ.

ನಟಿ ಖುಷ್ಬೂ ಅವರು ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ನಟ ರವಿಚಂದ್ರನ್ ಅವರ ಜೊತೆಗಿನ ತಮ್ಮ 35 ವರ್ಷಗಳ ಸ್ನೇಹವನ್ನು ಸ್ಮರಿಸಿದ್ದಾರೆ. ಈ ವೇಳೆ ಅವರು, “ರವಿ ಸರ್ ಸದಾ ಸೈಲೆಂಟ್ ಆಗಿಯೇ ಸಹಾಯವನ್ನು ಮಾಡುತ್ತಾರೆ. ನನ್ನ ತಾಯಿ ಒಂದು ನನ್ನ ಜೊತೆ ಜೀವಂತವಾಗಿದ್ದಾರೆ ಎಂದರೆ ಅದಕ್ಕೆ ಕಾರಣ ರವಿ ಸರ್, ಅದಕ್ಕಾಗಿ ನಾನು ಸದಾ ಅವರಿಗೆ ಋಣಿಯಾಗಿರುವೆ” ಎನ್ನುವ ಮಾತುಗಳನ್ನು ಹೇಳುವ ಮೂಲಕ ರವಿಚಂದ್ರನ್ ಅವರು ಹಿಂದೆ ಮಾಡಿದ್ದ ಸಹಾಯವನ್ನು ಸ್ಮರಿಸಿದ್ದಾರೆ.

ಇನ್ನು ನಟಿ ಖುಷ್ಬೂ ಅವರು ರವಿಚಂದ್ರನ್ ಅವರಿಗೆ ಹೂಗುಚ್ಛವನ್ನು ನೀಡುತ್ತಾ ಶುಭ ಹಾರೈಸಿದ್ದಾರೆ. ಈ ವೇಳೆ ರವಿಚಂದ್ರನ್ ಅವರು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ, ಹೂವಿನ ಕಡೆಯಿಂದ ಹೂವನ್ನು ಪಡೆದಿದ್ದೇನೆ ಎನ್ನುವ ಕಾಂಪ್ಲಿಮೆಂಟ್ ಅನ್ನು ಖುಷ್ಬೂ ಅವರಿಗೆ ನೀಡಿದ್ದಾರೆ. ಖುಷ್ಬೂ ಅವರು 35 ವರ್ಷಗಳ ಹಿಂದೆ ರವಿಚಂದ್ರನ್ ಅವರನ್ನು ರಣಧೀರ ಸಿನಿಮಾ ಸೆಟ್ ನಲ್ಲಿ ಮೊದಲ ಬಾರಿಗೆ ನೋಡಿದ, ಭೇಟಿ ಮಾಡಿದ ವಿಚಾರಗಳನ್ನು ಸ್ಮರಿಸಿ, ಡ್ರಾಮಾ ಜೂನಿಯರ್ಸ್ ನ ವಿಶೇಷ ಸಂಚಿಕೆಯ ಭಾಗವಾಗಿದ್ದಕ್ಕೆ ಸಂತೋಷವಾಯಿತು ಎಂದಿದ್ದಾರೆ.

Leave a Reply

Your email address will not be published.