ನನ್ನ ಕಣ್ಮುಂದೆ ಹೀರೋ ಆದವನು, ಮಾತಾಡೋವಾಗ ಎಚ್ಚರವಾಗಿರು: ತೆಲುಗು ಚಿತ್ರರಂಗದಲ್ಲಿ ಸ್ಟಾರ್ ವಾರ್

Written by Soma Shekar

Published on:

---Join Our Channel---

ತೆಲುಗು ಚಿತ್ರರಂಗದಲ್ಲಿ ನಟ ಶ್ರೀಕಾಂತ್ ದೊಡ್ಡ ಹೆಸರು ಮಾಡಿರುವ ನಟ. ತೆಲುಗು ಸಿನಿಮಾ ರಂಗದ ಸ್ಟಾರ್ ನಟರ ಸಾಲಿನಲ್ಲಿ ಸ್ಥಾನವನ್ನು ಪಡೆದಿರುವ ನಟ ಶ್ರೀಕಾಂತ್ ಅವರು ಕರ್ನಾಟಕದ ಗಂಗಾವತಿ ಮೂಲದವರು. ಆದರೆ ಅವರು ಹೆಚ್ಚು ಹೆಸರನ್ನು ಮಾಡಿರುವುದು ಮಾತ್ರ ತೆಲುಗು ಚಿತ್ರರಂಗದಲ್ಲಿ. ದಶಕಗಳ ಕಾಲದಿಂದ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಶ್ರೀಕಾಂತ್ ಅವರು ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿರುವ ನಟ. ಆದರೆ ಇದೀಗ ಅದೇ ಚಿತ್ರರಂಗದ ಮತ್ತೊಬ್ಬ ಹಿರಿಯ ನಟ ಸಿಟ್ಟಿನಿಂದ ಶ್ರೀಕಾಂತ್ ಅವರಿಗೆ ಬೆ ದ ರಿಕೆಯನ್ನು ಹಾಕುವ ಹಾಗೆ ಮಾತನಾಡಿರುವ ಘಟನೆ ನಡೆದಿದೆ.

ಕೆಲವೇ ದಿನಗಳ ಹಿಂದೆಯಷ್ಟೇ ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದ ಯುವ ನಾಯಕ ನಟ ಸಾಯಿ ಧರಮ್ ತೇಜ ಅವರು ಬೈಕ್ ಅ ಪ ಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ಚಿಕಿತ್ಸೆ ನಡೆಯುತ್ತಿದೆ. ಈ ವಿಚಾರದಲ್ಲಿ ತೆಲುಗಿನ ಹಿರಿಯ ನಟ ನರೇಶ್ ಅವರು ಮಾತನಾಡುತ್ತಾ, ನನ್ನ ಮಗ ಹಾಗೂ ಸಾಯಿ ಧರಮ್ ತೇಜಾ ಒಳ್ಳೆಯ ಗೆಳೆಯ. ಇಬ್ಬರಿಗೂ ಸಹಾ ರೇಸಿಂಗ್ ಅಭ್ಯಾಸವಿದೆ. ನಾನು ಅದನ್ನು ಗಮನಿಸಿ ಅವರಿಗೆ ಕೌನ್ಸಿಲಿಂಗ್ ಕೊಡಿಸಬೇಕು ಎಂದುಕೊಂಡಿದ್ದೆ.

ಈ ಹಿಂದೆ ಕೂಡಾ ಕೆಲವು ಸ್ಟಾರ್ ನಟರ ಮಕ್ಕಳು ರೇಸಿಂಗ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದರು ಎನ್ನುವ ಮಾತನ್ನು ಹೇಳಿದ್ದರು. ಇದಾದ ನಂತರ ಶ್ರೀಕಾಂತ್ ಅವರು, ಸಾಯಿ ಧರಮ್ ತೇಜ ಒಬ್ಬ ಪ್ರಬುದ್ಧ ಯುವಕ, ರಸ್ತೆಯಲ್ಲಿ ಮರಳು ಬಿದ್ದಿದ್ದರಿಂದ ಅಪಘಾತ ಸಂಭವಿಸಿದೆ. ಇದು ಒಂದು ಸಣ್ಣ ಅಪಘಾತ ಅಷ್ಟೇ. ಅಪಘಾತದ ನಂತರ ಅವರ ಕುಟುಂಬದವರು ಸಾಕಷ್ಟು ಆತಂಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ನರೇಶ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀಕಾಂತ್ ಅವರ ಪ್ರತಿಕ್ರಿಯೆ ಕೇಳಿದ ನರೇಶ್ ಸಿಟ್ಟಾಗಿದ್ದಾರೆ. ನರೇಶ್ ಮಾತನಾಡುತ್ತಾ ಏಕವಚನದಲ್ಲೇ ಶ್ರೀಕಾಂತ್ ಅವರ ಕುರಿತಾಗಿ ಅವರ ಹೆಸರನ್ನು ಹೇಳುತ್ತಾ ಮಾತನಾಡಿದ್ದಾರೆ. ಅಲ್ಲದೇ ಮಾಧ್ಯಮಗಳ ಮುಂದೆ ಮಾತನಾಡುವಾಗ ಎಚ್ಚರಿಕೆಯಿಂದ ಹೇಳಿಕೆಗಳನ್ನು ಕೊಡು ಎನ್ನುವ ಸಲಹೆಯನ್ನು ನೀಡಿದ್ದಾರೆ. ಮೊದಲ ಬೈಟ್ ನೀಡಿದ ನಂತರ ಕೆಲವರು ನನಗೆ ಕರೆ ಮಾಡಿ ವಿಷಯ ಏನೆಂದು ಹೇಳಿದರು. ನಂತರ ನಾನು ಮತ್ತೊಂದು ಬೈಟ್ ನೀಡಿದೆ. ನೀನು ಅದನ್ನು ತಿಳಿಯದೇ ಮಾತನಾಡುತ್ತೀಯಾ ಎಂದಿದ್ದಾರೆ.

ಅಷ್ಟಕ್ಕೇ ನಿಲ್ಲಿಸದ ನರೇಶ್ ಅವರು ನನ್ನ ಕಣ್ಣ ಮುಂದೆ ಹೀರೋ ಆದವನು ನೀನು. ಒಳ್ಳೆಯ ಸಿನಿಮಾಗಳನ್ನು ಮಾಡಿ ಹೆಸರು ಸಂಪಾದನೆಯನ್ನು ಮಾಡಿರುವೆ. ಮಾ ಚುನಾವಣೆಯಲ್ಲಿ ನನ್ನ ಸಿಂಡಿಕೇಟ್ ಎದುರು ಸ್ಪರ್ಧಿಸಿ ನನ್ನ ಜನರ ಮುಂದೆ ಸೋತಿರುವೆ. ಅದೆಲ್ಲಾ ಇರಲಿ, ಇನ್ನು ಮುಂದೆ ಮಾಧ್ಯಮಗಳ ಮುಂದೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡು ಎನ್ನುವ ಎಚ್ಚರಿಕೆಯೊಂದನ್ನು ನರೇಶ್ ಶ್ರೀ ಕಾಂತ್ ಅವರಿಗೆ ರವಾನಿಸಿದ್ದಾರೆ.

Leave a Comment