“ನನ್ನ ಕಣ್ಣಲ್ಲಿ ಜಾದೂ, ಮನಸ್ಸಿನಲ್ಲೊಂದು ಕಿಚ್ಚು ಇದೆ”-ರಶ್ಮಿಕಾ ಮಂದಣ್ಣ

0 0

ಕಿರಿಕ್ ಪಾರ್ಟಿ ಹುಡುಗಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹೋದಲ್ಲಿ, ಬಂದಲ್ಲಿ ಸುದ್ದಿ ಎನ್ನುವಂತಹ ಕ್ರೇಜ್ ಒಂದು ಸೃಷ್ಟಿಯಾಗಿದೆ. ದಕ್ಷಿಣ ಸಿನಿ ರಂಗದಲ್ಲಿ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಬಹಳ ಬೇಡಿಕೆಯ ಹಾಗೂ ಬ್ಯುಸಿ ನಟಿಯಾಗಿ, ಸ್ಟಾರ್ ನಟಿಯರಿಗೆ ಪೈಪೋಟಿ ನೀಡುತ್ತಾ, ಸ್ಟಾರ್ ನಟಿಯರ ಸ್ಥಾನ ಮಾನವನ್ನು ಪಡೆದಕೊಂಡಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ ಗೂ ಎಂಟ್ರಿ ನೀಡಿ ಮಿಷನ್ ಮಜ್ನು, ಗುಡ್ ಬೈ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಮತ್ತೊಂದು ಕಡೆ ಜಾಹೀರಾತುಗಳಲ್ಲಿ ಕೂಡಾ ಕಾಣಿಸಿಕೊಂಡು ಫುಲ್ ಜೋಶ್ ನಲ್ಲಿ ಮಿಂಚುತ್ತಿದ್ದಾರೆ ನಟಿ ರಶ್ಮಿಕಾ.

ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ. ತನ್ನ ಫೋಟೋಗಳನ್ನು ಆಗಾಗ ಶೇರ್ ಮಾಡಿಕೊಂಡು ಅಭಿಮಾನಿಗಳ ದಿಲ್ ಖುಷ್ ಮಾಡುತ್ತಾರೆ. ವಿಶೇಷವಾದ ಸಂದರ್ಭಗಳಲ್ಲಿ ಅಭಿಮಾನಿಗಳಿಗೆ ವಿಶ್ ಮಾಡುತ್ತಾರೆ. ಇನ್ನೂ ಕೆಲವೊಮ್ಮೆ ಕೆಲವು ಅನುಭವಗಳನ್ನು ಸಹಾ ಹಂಚಿಕೊಂಡು, ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಅವರು ಉತ್ತರವನ್ನು ನೀಡುವ ಕೆಲಸವನ್ನು ಮಾಡುತ್ತಾರೆ.

ಇದೀಗ ರಶ್ಮಿಕಾ ಒಂದು ಹೊಸ ಫೋಟೋ ಹಂಚಿಕೊಂಡು, ಅದರ ಜೊತೆಗೆ “ನನ್ನ ಕಣ್ಣಲ್ಲಿ ಜಾದೂ , ಆತ್ಮದಲ್ಲೊಂದು ಕಿಚ್ಚು” ಇದೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ರಶ್ಮಿಕಾ ತಮ್ಮ ಕೈ ಮೇಲೆ ಇರುವ ಟ್ಯಾಟೂ ವನ್ನು ಎಲ್ಲರಿಗೂ ತೋರಿಸಿದ್ದಾರೆ. ರಶ್ಮಿಕಾರ ಈ ಹೊಸ ಮಾದಕ ಲುಕ್ ನ ಫೋಟೋ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಾಮೆಂಟ್ ಗಳನ್ನು ಮಾಡುವ ಮೂಲಕ ರಶ್ಮಿಕಾ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಲೈಕ್ಸ್ ಗಳು ಹರಿದು ಬರುತ್ತಿವೆ.

ರಾಷ್ಟ್ರ ಮಟ್ಟದಲ್ಲಿ ಇತ್ತೀಚಿಗೆ ಸದ್ದು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸಿನಿಮಾಗಳ ಜೊತೆಗೆ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುವ ಮೂಲಕ ತನ್ನ ಚಾರ್ಮ್ ಹಾಗೂ ಫೇಮ್ ಎರಡನ್ನೂ ಹೆಚ್ಚಿಸಿಕೊಂಡಿದ್ದಾರೆ. ಸದಾ ಸುದ್ದಿಯಲ್ಲಿರುವ ಪಿ ಆರ್ ಟೀಮ್ ಕೂಡಾ ನೇಮಕ ಮಾಡಿಕೊಂಡಿದ್ದಾರೆ ಎನ್ನುವ ವಿಷಯ ಕೆಲವೇ ದಿನಗಳ ಹಿಂದೆ ಸುದ್ದಿಯಾಗಿತ್ತು. ಅಲ್ಲದೇ ಅವರ ಹೊಸ ಜಾಹೀರಾತು ಒಂದು ಸಂಚಲನ ಸೃಷ್ಟಿಸಿದೆ.

ಹೌದು, ರಶ್ಮಿಕಾ ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆ ಮಾಡಿರುವ ಒಳ ಉಡುಪುಗಳ ಜಾಹೀರಾತಿನ ಕಾನ್ಸೆಪ್ಟ್ ಬಗ್ಗೆ ನೆಟ್ಟಿವರು ಸಿಟ್ಟು, ಅಸಮಾಧಾನ ಹೊರ ಹಾಕುತ್ತಿದ್ದಾರೆ. ಪಾಸಿಟಿವ್ ಅಥವಾ ನೆಗೆಟಿವ್ ಅಂತೂ ರಶ್ಮಿಕಾ ಮಾತ್ರ ಮಾದ್ಯಮಗಳ ಸುದ್ದಿಗಳಲ್ಲಿ ಮಾತ್ರ ಸದಾ ಮಿಂಚುವುದು ಸಾಮಾನ್ಯ ಎನಿಸಿದ್ದು, ಇದು ಅವರ ಜನಪ್ರಿಯತೆಗೆ ಪರೋಕ್ಷವಾಗಿ ಕಾರಣ ಎನ್ನುವುದರಲ್ಲಿ ಅನುಮಾನವೇ ಇಲ್ಲ.

Leave A Reply

Your email address will not be published.