ನನ್ನ ಹಾಗೆನ್ನಬೇಡಿ, ನಾನಿನ್ನೂ ಚಿಕ್ಕವಳು: ವಿಲನ್ ಆಗಿ ಖದರ್ ನಿಂದ ನಟಿಸುವ ಪ್ರಿಯಾಂಕ ಮಾತು

Written by Soma Shekar

Updated on:

---Join Our Channel---

ಕನ್ನಡ ಕಿರುತೆರೆಯಲ್ಲಿ ಅಗ್ನಿಸಾಕ್ಷಿ ದೊಡ್ಡ ಜನಪ್ರಿಯತೆ ಪಡೆದಂತಹ ಸೀರಿಯಲ್ ಆಗಿತ್ತು. ಈ ಸೀರಿಯಲ್ ನಲ್ಲಿ ನಾಯಕ, ನಾಯಕಿಯ ಪಾತ್ರದಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡ ಪಾತ್ರ ಎಂದರೆ ವಿಲನ್ ಪಾತ್ರ. ಅಗ್ನಿ ಸಾಕ್ಷಿ ಸೀರಿಯಲ್ ನೋಡಿದವರಿಗೆ ಆ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ ಪ್ರಿಯಾಂಕ ಅವರ ಕುರಿತಾಗಿ ಪ್ರತ್ಯೇಕವಾಗಿ ಹೇಳುವ ಅಗತ್ಯ ಖಂಡಿತ ಇಲ್ಲ.‌ ಪ್ರಿಯಾಂಕ ಅವರು ಆ ಪಾತ್ರದಲ್ಲಿ ಎಷ್ಟು ಖದರ್ ಆಗಿ ನಟಿಸಿದ್ದರು ಎಂದರೆ ಅಗ್ನಿ ಸಾಕ್ಷಿ ಚಂದ್ರಿಕಾ ಎಂದರೆ ಅದು ಪ್ರಿಯಾಂಕ ಎನ್ನುವಷ್ಟರ ಮಟ್ಟಿಗೆ ಆ ಪಾತ್ರ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಹೀಗೆ ನೆಗೆಟಿವ್ ಪಾತ್ರಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಪ್ರಿಯಾಂಕ ತೆಲುಗು ಕಿರುತೆರೆಯಲ್ಲಿ ಸಹಾ ಖಳ ಪಾತ್ರಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರಿಯಾಂಕ ಅವರು ಕನ್ನಡದ ಬಹು ಜನಪ್ರಿಯ ಸೀರಿಯಲ್ ಸದ್ಯದಲ್ಲಿ ಕೂಡಾ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇದಲ್ಲದೇ ಫ್ಯಾಂಟಸಿ ಹೆಸರಿನ ಸಿನಿಮಾದಲ್ಲಿ ಕೂಡಾ ನಟಿಸುತ್ತಿರುವ ಪ್ರಿಯಾಂಕ ಅವರು ಮಾದ್ಯಮವೊಂದರ ಮುಂದೆ ನಗುವಿನಲ್ಲೇ ಮುನಿಸನ್ನು ಸಹಾ ವ್ಯಕ್ತಪಡಿಸಿದ್ದಾರೆ.

ತಾನು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾನು ವಿಲನ್, ಅದು ವಯಸ್ಸಿಗೆ ಮೀರಿದ ಪಾತ್ರವದು, ನಾನು ಮಾಡಿದ ಪಾತ್ರವನ್ನು ನೋಡಿ ಜನರು ಮೆಚ್ಚುಗೆಯನ್ನು ಸೂಚಿಸಿದರು. ತುಂಬಾ ಮೆಚ್ಯೂರ್ಡ್ ಆಗಿ ನಟಿಸುತ್ತಿದ್ದೀರಿ ಎಂದು ಹೊಗಳಿದರು. ಆದರೆ ಆ ಮೆಚ್ಯೂರ್ಡ್ ಅಥವಾ ಪ್ರಬುದ್ಧ ಅನ್ನೋದು ಈಗ ನನ್ನನ್ನು ಆಂಟಿ ಅನ್ನುವ ಮಟ್ಟದವರೆಗೆ ಹೋಗಿದೆ ಎಂದಿರುವ ಪ್ರಿಯಾಂಕ ನನ್ನನ್ನು ಯಾರೂ ಆಂಟಿ ಎನ್ನಬೇಡಿ, ನಾನು ದೊಡ್ಡ ವಯಸ್ಸಿನ ಮಹಿಳೆ ಎಂದುಕೊಳ್ಳಬೇಡಿ. ನಾನಿನ್ನೂ ಚಿಕ್ಕವಳು ಎಂದಿದ್ದಾರೆ ಪ್ರಿಯಾಂಕ.

ನನಗೆ ಆಂಟಿ ವಯಸ್ಸಾಗಿದೆ ಎಂದು ಭಾವಿಸಿದ್ದಾರೆ ಆದರೆ ಇಲ್ಲಪ್ಪ ನಾನಿನ್ನೂ ಚಿಕ್ಕವಳು ಎಂದರೂ ನಂಬೋದಿಲ್ಲ. ಏನ್ ಮಾಡೋದು , ನಾನು ಮಾಡೋ ಪಾತ್ರಗಳು ನನ್ನ ವಯಸ್ಸನ್ನು ಹೆಚ್ಚು ಮಾಡಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಒಂದು ಕಡೆ ಈ ವಿಷಯದಲ್ಲಿ ಅಂದರೆ ನನ್ನ ಪಾತ್ರಗಳಲ್ಲಿ ಜನರು ನನ್ನನ್ನು ಗುರ್ತಿಸಿರುವುದು ಖುಷಿಯನ್ನು ನೀಡಿದೆಯಾದರೂ, ನನ್ನನ್ನು ಒಂದೇ ರೀತಿಯ ಪಾತ್ರದಲ್ಲಿ ನೋಡಬೇಡಿ, ಕಲಾವಿದೆಯಾಗಿ ಎಲ್ಲಾ ಪಾತ್ರಗಳನ್ನು ಮಾಡಲು ಬಯಸುತ್ತೇನೆಂದು ಅವರು ಹೇಳಿದ್ದಾರೆ.

ಫ್ಯಾಂಟಸಿ ಸಿನಿಮಾದಲ್ಲಿ ಸಹಾ ನೆಗೆಟಿವ್ ಪಾತ್ರವನ್ನು ಮಾಡುತ್ತಿದ್ದೇನೆ, ನನ್ನ ಹೆಚ್ಚು ನೆಗೆಟಿವ್ ಮಾಡೋದು ಬೇಡ, ನಾನು ಕೂಡಾ ಗ್ಲಾಮರಸ್ ಪಾತ್ರವನ್ನು ಮಾಡಬಲ್ಲೆ. ನಟನೆಗೆ ಅವಕಾಶ ಇರುವ ಯಾವುದೇ ಪಾತ್ರವನ್ನು ಸಹಾ ಮಾಡಬಲ್ಲೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಪ್ರಿಯಾಂಕ ಅವರು ಕನ್ನಡ ಹಾಗೂ ತೆಲುಗು ಕಿರುತೆರೆಗಳಲ್ಲಿ ಏಕ ಕಾಲದಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ, ಆ ಪಾತ್ರಗಳಿಗೆ ಪ್ರಶಸ್ತಿಗಳನ್ನು ಕೂಡಾ ಪಡೆಯುವ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

Leave a Comment