‘ನನ್ನೊಳಗೆ ಇನ್ಯಾರೋ ಇದ್ದಾರೆ’- ಹೊಸ ಆರ್ಯನ ಸ್ಮೃತಿಯಲ್ಲಿ ಹಳೇ ದೃಶ್ಯಗಳು: ಆದರೂ ಪ್ರೇಕ್ಷಕರಿಗೆ ಸಿಕ್ತಿಲ್ಲ ತೃಪ್ತಿ

Entertainment Featured-Articles Movies News

ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಮಹತ್ವದ ತಿರುವಿನೊಂದಿಗೆ ಮುಂದೆ ಸಾಗಿದೆ. ಧಾರಾವಾಹಿಯಲ್ಲ ಜನರ ಅಪಾರವಾದ ಮೆಚ್ಚುಗೆಯಲ್ಲಿ ಪಡೆದುಕೊಂಡಿದ್ದ ಪ್ರಮುಖ ಪಾತ್ರದಲ್ಲಿ ಬದಲಾವಣೆ ಆಗಿದೆ. ಈ ಹಿಂದೆ ಆ ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದ ನಟ ಅನಿರುದ್ಧ್ ಅವರ ಜಾಗಕ್ಕೆ ಈಗ ಹರೀಶ್ ರಾಜ್ ಅವರು ಪ್ರವೇಶ ನೀಡಿದ್ದಾರೆ.ಆದರೆ ಪ್ರೇಕ್ಷಕರು ಮಾತ್ರ ಈ ಬದಲಾವಣೆಯನ್ನು ಇನ್ನೂ ಒಪ್ಪಿಕೊಂಡಂತೆ ಕಾಣುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ನೆಟ್ಟಿಗರು ವಾಹಿನಿಯು ಹಂಚಿಕೊಳ್ಳುವ ಪ್ರೋಮೋಗಳ ಕಾಮೆಂಟ್ ಸೆಕ್ಷನ್ ನಲ್ಲಿ ತಮ್ಮ ಸಿಟ್ಟು ಮತ್ತು ಅಸಮಾಧಾನವನ್ನು ಹೊರ ಹಾಕುತ್ತಿರುವುದು ಪ್ರತಿದಿನ ನಡೆಯುತ್ತಲೇ ಇದೆ..

ಆದರೆ ದಿನ ಕಳೆದಂತೆ ಪ್ರೇಕ್ಷಕರು ಸಹಾ ಈ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆಯೊಂದಿಗೆ ಸೀರಿಯಲ್ ತಂಡವು ತಮ್ಮ ಪ್ರಯತ್ನಗಳನ್ನು ಮಾಡುತ್ತಿದೆ. ಸೀರಿಯಲ್ ಕಥೆಯ ಪ್ರಕಾರ ರಸ್ತೆ ಅ ಪ ಘಾತದಲ್ಲಿ ಗಾಯಗೊಂಡ ಆರ್ಯವರ್ಧನ್ ಪ್ಲಾಸ್ಟಿಕ್ ಸರ್ಜರಿಯ ಮೂಲಕ ಮುಖ ಬದಲಾವಣೆಯಾಗಿದೆ. ಅಲ್ಲದೇ ಆರ್ಯವರ್ಧನ್ ಗೆ ತನ್ನ ಹಿಂದಿನ ಜೀವನದ ಯಾವುದೇ ವಿಷಯಗಳು ನೆನಪಿಲ್ಲ. ಆರ್ಯವರ್ಧನ್ ನೆನಪನ್ನು ಮರಳಿ ತರುವ ಪ್ರಯತ್ನಗಳು ಈಗ ನಡೆದಿದ್ದು ಅದರ ಭಾಗವಾಗಿಯೇ ಆರ್ಯವರ್ಧನ್ ವೈದ್ಯರ ಬಳಿಗೆ ಹೋಗಿದ್ದಾನೆ.

ವೈದ್ಯರು ಚಿಕಿತ್ಸೆಯ ಭಾಗವಾಗಿ ಆರ್ಯನ ಕಣ್ಣು ಮುಚ್ಚಿ ಪರ್ಫ್ಯೂಮ್ ಒಂದರ ಸುವಾಸನೆಯನ್ನು ಗ್ರಹಿಸಲು ಹೇಳಿದಾಗ, ಅದರ ಪರಿಮಳದಿಂದ ಇದನ್ನು ತನಗೆ ಆಪ್ತರಾದವರು ಇದನ್ನು ಬಳಸುತ್ತಿದ್ದರು ಎನ್ನುವ ಮಾತನ್ನು ಹೇಳಿದ್ದಾನೆ ಆರ್ಯ. ಅಲ್ಲದೇ ಸಂಪಿಗೆಯ ಹೂವಿನ ಪರಿಮಳವನ್ನು ಹತ್ತಿರ ತಂದಾಗ ಆ ಪರಿಮಳಕ್ಕೆ ವಿಚಲಿತನಾಗಿ, ನನಗೆ ಈ ಹೂವನ್ನು ಕಂಡರೆ ಆಗುವುದಿಲ್ಲ ದೂರವಿಡಿ ಎಂದು ಅರಚಾಡಿದ್ದಾನೆ. ಆತನಿಗೆ ರಾಜನಂದಿನಿಯ ನೆನಪುಗಳು ಕಾಡಿದೆ. ಅ ಪ ಘಾ ತ ದ ವೇಳೆ ಓಡಿಸುತ್ತಿದ್ದ ಬೆನ್ಜ್ ಕಾರನ್ನು ವೈದ್ಯರು ತೋರಿಸಿದಾಗ ಅ ಪ ಘಾತದ ನೆನಪಾಗಿ ಕೂಗಾಡಿದಾಗ ವೈದ್ಯರು ಆತನನ್ನು ಸಮಾಧಾನ ಮಾಡಿದ್ದಾರೆ.

ಇದೆಲ್ಲವನ್ನು ಗಮನಿಸಿದ ವಿಶ್ವಾಸ್ ದೇಸಾಯಿ ರೂಪದಲ್ಲಿರುವ ಆರ್ಯವರ್ಧನ್, ನನ್ನಲ್ಲಿ ಇನ್ಯಾರೋ ಇದ್ದಾರೆ ಎಂದು ಅನಿಸುತ್ತಿದೆ ಎನ್ನುವ ಮಾತನ್ನು ಹೇಳಿದ್ದಾನೆ. ಈ ಹಿಂದೆ ಕೂಡಾ ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಬದಲಾವಣೆ ಆಗಿ, ಆ ಪಾತ್ರಕ್ಕೆ ಹೊಸ ಕಲಾವಿದರು ಬಂದಾಗ ಪ್ರೇಕ್ಷಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಉಂಟು.. ಆದರೆ ದಿನ ಕಳೆದಂತೆ ಪ್ರೇಕ್ಷಕರು ಹೊಸ ಕಲಾವಿದರನ್ನು ಒಪ್ಪಿಕೊಂಡಿದ್ದಾರೆ. ಬಹುಶಃ ಮುಂದಿನ ದಿನಗಳಲ್ಲಿ ಅಂತಹದೇ ಒಂದು ಭಾವನೆ ಇಲ್ಲಿ ಸಹಾ ಪ್ರೇಕ್ಷಕರಲ್ಲಿ ಮೂಡಬಹುದು ಎನ್ನುವ ನಿರೀಕ್ಷೆಯೊಂದಿಗೆ ಜೊತೆ ಜೊತೆಯಲಿ ಸೀರಿಯಲ್ ಹೊಸ ಹೊಸ ತಿರುವುಗಳಿಗೆ ಮುಂದೆ ಸಾಗುತ್ತಿದೆ.

Leave a Reply

Your email address will not be published.