ತಮಿಳು ಚಿತ್ರರಂಗದ ಪ್ರಖ್ಯಾತ ನಟ ವಿಜಯ್ ಸೇತುಪತಿ ಮೇಲೆ ಕ್ರಿ ಮಿ ನ ಲ್ ಕೇಸೊಂದು ದಾಖಲಾಗಿದೆ. ವಿಜಯ್ ಸೇತುಪತಿ ಜೊತೆಗೆ ಅವರ ಮ್ಯಾನೇಜರ್ ಜಾನ್ಸನ್ ಮೇಲೆಯೂ ಕೂಡಾ ದೂರು ದಾಖಲಾಗಿದ್ದು, ಈ ಇಬ್ಬರ ಮೇಲೆ ಸೂಕ್ತವಾದ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸೈದಾಪೇಟ್ ಕೋರ್ಟ್ ನಲ್ಲಿ ದೂರನ್ನು ದಾಖಲು ಮಾಡಲಾಗಿದೆ. ಕಳೆದ ತಿಂಗಳು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ವಿಜಯ್ ಸೇತುಪತಿ ಮೇಲೆ ಧಾ ಳಿ ಮಾಡಿದ ವಿಷಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ, ವೀಡಿಯೋ ಒಂದು ವೈರಲ್ ಆಗಿ ಎಲ್ಲರ ಗಮನಕ್ಕೆ ಬಂದಿತ್ತು.
ಮಹಾ ಗಾಂಧಿ ಎನ್ನುವ ಹೆಸರಿನ ವ್ಯಕ್ತಿ ನಟನ ಮೇಲೆ ದಾ ಳಿಯನ್ನು ಮಾಡಿದ್ದರು. ಆದರೆ ತಕ್ಷಣವೇ ಎಚ್ಚೆತ್ತುಕೊಂಡ ನಟನ ಮ್ಯಾನೇಜರ್ ಹಾಗೂ ಅವರ ದಭದ್ರತಾ ಸಿಬ್ಬಂದಿ ನಟನಿಗೆ ಭದ್ರತೆಯನ್ನು ನೀಡಿದ್ದರು. ಈ ಘಟನೆಯು ಸದ್ಯಕ್ಕೆ ವಿಜಯ್ ಸೇತುಪತಿ ಅವರ ಬೆನ್ನು ಬಿಡುವ ಹಾಗೆ ಕಾಣುತ್ತಿಲ್ಲ. ಈಗಾಗಲೇ ಇದೇ ಘಟನೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯನ್ನು ಹೂಡಿರುವ ಮಹಾ ಗಾಂಧಿ, ಇದೀಗ ನಟ ವಿಜಯ್ ಸೇತುಪತಿ ಮೇಲೆ ಕ್ರಿ ಮಿ ನ ಲ್ ಮೊಕದ್ದಮೆಯನ್ನು ಸಹಾ ಹೂಡಿದ್ದಾರೆ.
ನವೆಂಬರ್ 2ರಂದು ವೈದ್ಯಕೀಯ ತಪಾಸಣೆಗಾಗಿ ಮೈಸೂರಿಗೆ ಹೋಗುತ್ತಿದ್ದರು ಮಹಾ ಗಾಂಧಿ. ಅವರು ವಿಮಾನ ನಿಲ್ದಾಣದಲ್ಲಿ ನಟ ವಿಜಯ್ ಸೇತುಪತಿ ಅವರನ್ನು ಭೇಟಿಯಾಗಿದ್ದರು. ತಾನು ಕೂಡಾ ನಟನಾಗಿರುವ ಕಾರಣ ವಿಜಯ್ ಸೇತುಪತಿ ಅವರ ಜೊತೆ ಮಾತನಾಡಿ ಸೂಪರ್ ಡೀಲಕ್ಸ್ ಸಿನಿಮಾದಲ್ಲಿ ವಿಜಯ್ ಅತ್ಯುತ್ತಮ ಸಹನಟ ಪ್ರಶಸ್ತಿಯನ್ನು ಪಡೆದ ವಿಷಯಕ್ಕೆ ಅವರಿಗೆ ಅಭಿನಂದನೆಗಳನ್ನು ಹೇಳಿದೆನೆಂದೂ, ಆದರೆ ವಿಜಯ್ ಸೇತುಪತಿ ತನ್ನೊಡನೆ ಅಸಭ್ಯವಾಗಿ ವರ್ತಿಸಿದ್ದರು, ತನ್ನ ಜಾತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎಂದು ಗಾಂಧಿ ಹೇಳಿದ್ದಾರೆ.
ಅಲ್ಲದೇ ಈ ವೇಳೆ ನಟನ ಮ್ಯಾನೇಜರ್ ಹಾಗೂ ಭದ್ರತಾ ಸಿಬ್ಬಂದಿ ತನ್ನ ಮೇಲೆ ನಡೆಸಿದ ದಾ ಳಿಯಿಂದ ಕಿವಿಯಮೇಲೆ ಹೊಡೆತ ಬಿದ್ದು ಈಗ ಕಿವಿ ಸಂಪೂರ್ಣವಾಗಿ ಕೇಳುತ್ತಿಲ್ಲ. ವಿಜಯ್ ಸೇತುಪತಿ ಹಾಗೂ ಅವರ ಮ್ಯಾನೇಜರ್ ಮೇಲೆ ನಾನು ದಾಳಿ ಮಾಡಿಲ್ಲ ಎಂದು ಹೇಳಿದ್ದಾರೆ. ಇನ್ನು ಇದೇ ವ್ಯಕ್ತಿಯು ತಾನು ಮದ್ಯಪಾನ ಮಾಡಿದ್ದೆ ಎಂದು ವಿಜಯ್ ಸೇತುಪತಿ ವದಂತಿಗಳನ್ನು ಹಬ್ಬಿಸಿದ್ದು, ತನ್ನ ಪ್ರತಿಷ್ಠೆಗೆ ಅದು ಧ ಕ್ಕೆ ಉಂಟುಮಾಡಿದೆ ಎನ್ನುವ ಕಾರಣಕ್ಕೆ ಈ ಈಗಾಗಲೇ ಮೂರು ಕೋಟಿ ರೂಪಾಯಿಗಳ ಪರಿಹಾರವನ್ನು ಕೇಳಿ ಮೊಕದ್ದಮೆಯನ್ನು ಹೂಡಿದ್ದಾರೆ.