Malaika Arora : ಬಾಲಿವುಡ್ ನಟಿ ಮಲೈಕಾ ಅರೋರಾ(Malaika Arora) ತಮ್ಮ ಪತಿ ಅರ್ಬಾಜ್ ಖಾನ್(Arbaz Khan) ಗೆ ವಿಚ್ಛೇದನ ನೀಡಿದ ಮೇಲೆ ಕಳೆದ ಕೆಲವು ವರ್ಷಗಳಿಂದಲೂ ಸಹಾ ತಮಗಿಂತ ವಯಸ್ಸಿನಲ್ಲಿ 12 ವರ್ಷ ಕಿರಿಯವನಾದ, ಬಾಲಿವುಡ್ ನಟ ಅರ್ಜನ್ ಕಪೂರ್(Arjun Kapoor) ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ರಹಸ್ಯವಾಗಿ ಖಂಡಿತ ಉಳಿದಿಲ್ಲ. ಈ ಜೋಡಿ ಆಗಾಗ ಪಾರ್ಟಿ, ಪ್ರವಾಸ ಎಂದೆಲ್ಲಾ ಜೊತೆಜೊತೆಯಾಗಿ ಕಾಣಿಸಿಕೊಂಡು ಮಾದ್ಯಮಗಳ ಕ್ಯಾಮರಾ ಗಳಿಗೆ ಭರ್ಜರಿ ಪೋಸ್ ಗಳನ್ನು ನೀಡುತ್ತಾರೆ. ಅಲ್ಲದೇ ನಿಮ್ಮ ಮದುವೆ ಯಾವಾಗ? ಎನ್ನುವ ಪ್ರಶ್ನೆ ಕೂಡಾ ಅವರಿಗೆ ಎದುರಾಗುತ್ತಲೇ ಇರುತ್ತದೆ.
ಮಲೈಕಾಗೆ(Malaika) ವಯಸ್ಸು 49 ಆದರೂ ಫಿಟ್ನೆಸ್ ವಿಚಾರದಲ್ಲಿ ಯುವ ನಟಿಯರನ್ನು ಹಿಂದಿಕ್ಕುವ ಮೈಮಾಟವನ್ನು ಹೊಂದಿದ್ದು ನಟಿ ಆಗಾಗ ತಾನು ಧರಿಸುವ ಡ್ರೆಸ್ ಗಳ ಕಾರಣದಿಂದಾಗಿ ಸುದ್ದಿಯಾಗುವ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಕೂಡಾ ಆಗುತ್ತಾರೆ. ಅರ್ಜುನ್ ಕಪೂರ್(Arjun Kapoor) ವಿಚಾರವಾಗಿಯೂ ನಟಿಯನ್ನು ಆಗಾಗ ಟ್ರೋಲ್ ಮಾಡುತ್ತಲೇ ಇರುತ್ತಾರೆ. ಈಗ ಇವೆಲ್ಲವುಗಳ ನಡುವೆಯೇ ಓಟಿಟಿಯಲ್ಲಿ ಮಲೈಕಾ ಅವರ ಶೋ ಮೂವಿಂಗ್ ವಿತ್ ಮಲೈಕಾ(Moving with Malaika) ದಲ್ಲಿ ಅವರ ಮಗ ಆಡಿದ ಮಾತುಗಳಿಂದ ನಟಿ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.
ಇದನ್ನೂ ಓದಿ: ಅಮ್ಮ ಮಲೈಕಾ ಡ್ರೆಸ್ ಮೇಲೆ ಹಾಸ್ಯ ಚಟಾಕಿ ಹಾರಿಸಿದ ಅರ್ಹಾನ್: ಶೋ ನಲ್ಲೇ ಮಗ ಹೀಗೆ ಅನ್ನೋದಾ?
ಹೌದು, ಇತ್ತೀಚಿಗೆ ಮಲೈಕಾ ಅವರ ಮಗ ಅರ್ಹಾನ್ ಖಾನ್(Arhan Khan) ತಾಯಿಯ ಶೋ ಗೆ ಅತಿಥಿಯಾಗಿ ಆಗಮಿಸಿದ ವೇಳೆ ಇಬ್ಬರ ನಡುವೆ ಒಂದಷ್ಟು ಮಾತುಕತೆ ನಡೆದಿದೆ. ಈ ವೇಳೆ ಅರ್ಹಾನ್ ತಾಯಿಯ ಬಗ್ಗೆ ತನ್ನ ಅಸಮಾಧಾನವನ್ನು ಹೊರ ಹಾಕಿರುವ ವೀಡಿಯೋ ತುಣುಕು ವೈರಲ್ ಆಗಿದೆ. ಶೋ ನಲ್ಲಿ ಮಾತುಕತೆ ನಡೆಯುವಾಗಲೇ ಅರ್ಹಾನ್, “ನಾನು ನಿನ್ನಂತೆ ಅಲ್ಲ, ನಿನ್ನ ತರ ವರ್ತಿಸುವುದೂ ಇಲ್ಲ” ಎಂದು ತಾಯಿಯ ಮುಖಕ್ಕೆ ಹೊಡೆದಂತೆ ಮಾತನಾಡಿದ್ದಾನೆ. ಈ ವೇಳೆ ಮಲೈಕಾ(Malaika) ಅವರಿಗೆ ಮುಜುಗರ ಆದರೂ ಅದನ್ನು ನಗುವಿನಲ್ಲೇ ಮರೆ ಮಾಚಿದ್ದಾರೆ.
ವಿಡಿಯೋ ವೈರಲ್ ಆದ ಮೇಲೆ ಅನೇಕರು ಈ ವೀಡಿಯೋವನ್ನು ಅರ್ಜುನ್ ಕಪೂರ್ ಗೆ ಟ್ಯಾಗ್ ಮಾಡಿ ಎಂದಿದ್ದಾರೆ. ಇನ್ನೂ ಕೆಲವರು ಸ್ಟಾರ್ ಕಿಡ್ ಗಳು ತಮ್ಮ ತಂದೆ ತಾಯಿಗೆ ಗೌರವ ನೀಡೋದಿಲ್ಲ ಎಂದು ಟೀಕೆ ಮಾಡಿದ್ದಾರೆ. ಇದಲ್ಲದೇ ಮತ್ತೆ ಕೆಲವರು ವಿಚ್ಛೇದನ ಪಡೆದ ದಂಪತಿಗಳ ಮಕ್ಕಳ ಮೇಲೆ ಅದು ಕೆಟ್ಟ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಒಟ್ಟಾರೆ ಅರ್ಹಾನ್ ಖಾನ್ ಹೇಳಿದ ಮಾತು ಈಗ ಸಖತ್ ಸುದ್ದಿಯಾಗಿದೆ. ಇಪ್ಪತ್ತರ ಹರೆಯದ ಅರ್ಹಾನ್(Arhan) ಮಲೈಕಾ ಮತ್ತು ಅವರ ಮಾಜಿ ಪತಿ ಅರ್ಬಾಜ್ ಅವರ ಪುತ್ರನಾಗಿದ್ದಾನೆ.