ನನ್ನನ್ನು ಹೊಂದಲು IPL ತಂಡಗಳು ಅದೃಷ್ಟಶಾಲಿ ಆಗಿರಬೇಕು: ರವಿಶಾಸ್ತ್ರಿ ಮಾತಿಗೆ ಅಮೀರ್ ಖಾನ್ ತಿರುಗೇಟು

Entertainment Featured-Articles Movies News

ಬಾಲಿವುಡ್ ನಲ್ಲಿ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಕೆಲವು ದಿನಗಳ ಹಿಂದೆ ತಾನು ಕ್ರಿಕೆಟ್ ಆಡುತ್ತಿರುವ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ನಟ ಅಮೀರ್ ಖಾನ್ ತಮ್ಮ ಮುಂದಿನ ಸಿನಿಮಾ ಲಾಲ್ ಸಿಂಗ್ ಚಡ್ಡಾ ತಂಡದೊಂದಿಗೆ ಕ್ರಿಕೆಟ್ ಆಡಿದ್ದರು. ಈ ವೀಡಿಯೋ ಹಂಚಿಕೊಂಡ ಅವರು ಅದರ ಜೊತೆಗೆ, ಈ ಬಾರಿ ನನಗೆ ಐಪಿಎಲ್ ನಲ್ಲಿ ಆಡಲು ಅವಕಾಶ ಸಿಗುತ್ತದೆಯಾ? ಎಂದ ತಮಾಷೆಯಾಗಿ ಕೇಳಿದ್ದರು. ಅಮೀರ್ ಖಾನ್ ಅವರು ಇದನ್ನು ಕೇವಲ ತಮಾಷೆಯಾಗಿ ಕೇಳಿದ್ದರು‌‌.

ಏಕೆಂದರೆ ಅಮೀರ್ ಖಾನ್ ಅವರಿಗೆ ಐಪಿಎಲ್ ನಲ್ಲಿ ಆಡಬೇಕಾದರೆ ಕೆಲವೊಂದು ನೀತಿ, ನಿಯಮಗಳು ಇವೆ ಎನ್ನುವುದು ಅವರಿಗೆ ತಿಳಿದೇ ಇದೆ. ಆದರೆ ಕೇವಲ ತಮಾಷೆಯ ಉದ್ದೇಶದಿಂದ ಅವರು ವೀಡಿಯೋದಲ್ಲಿ ಹಾಗೆ ಹೇಳಿದ್ದರು. ಆದರೆ ಇದಾದ ನಂತರ ಇತ್ತೀಚಿಗೆ ವಾಹಿನಿಯೊಂದು ರವಿ ಶಾಸ್ತ್ರಿ ಅವರಿಗೆ ಪ್ರಶ್ನೆ ಮಾಡುತ್ತಾ, ಅಮೀರ್ ಖಾನ್ ಅವರು ಐಪಿಎಲ್ ನಲ್ಲಿ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಅದಕ್ಕೆ ನೀವೇನು ಹೇಳುವಿರಿ? ಎಂದು ಕೇಳಿದ್ದಾರೆ.

ರವಿ ಶಾಸ್ತ್ರಿ ಅವರು ತಮ್ಮ ಉತ್ತರದಲ್ಲಿ, ನೆಟ್ಸ್ ಅಭ್ಯಾಸದಲ್ಲಿ ಅಮೀರ್ ಖಾನ್ ಅವರು ಉತ್ತಮವಾಗಿಯೇ ಕಾಣುತ್ತಾರೆ. ಬಹುಶಃ ಅವರು ಫುಟ್ವರ್ಕ್ ಕಡೆಗೆ ಹೆಚ್ಚಿನ ಕಡೆಗೆ ಗಮನ ನೀಡಬೇಕಾಗಯತ್ತದೆ, ಹೆಚ್ಚಿನ ತಂಡಗಳಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ ಎನ್ನುವ ಮಾತನ್ನು ಹೇಳಿದ್ದರು. ರವಿಶಾಸ್ತ್ರಿ ಅವರ ಈ ಮಾತು ಅಮೀರ್ ಖಾನ್ ಅವರಿಗೆ ಬೇಸರವನ್ನು ಉಂಟು ಮಾಡಿದಂತೆ ಕಾಣುತ್ತಿದೆ.

ಅಮೀರ್ ಖಾನ್ ಕ್ರಿಕೆಟ್ ಆಡುತ್ತಿರುವ ಮತ್ತೊಂದು ವೀಡಿಯೋ ಮಾಡಿ, ಅದನ್ನು ಶೇರ್ ಮಾಡಿ, ನನ್ನ ಫುಟ್ವರ್ಕ್ ನೋಡಿ ನಿಮಗೆ ಇಷ್ಟವಾಗಿಲ್ಲ ಎಂದು ಕೇಳಿ ಬೇಸರವಾಯ್ತು. ನೀವು ಲಗಾನ್ ಸಿನಿಮಾ ನೋಡಿಲ್ಲ ಅನ್ಸುತ್ತೆ. ಒಮ್ಮೆ ಲಗಾನ್ ಸಿನಿಮಾ ನೋಡಿ. ನನ್ನನ್ನು ಹೊಂದಲು ಯಾವುದೇ ತಂಡ ಅದೃಷ್ಟಶಾಲಿಯಾಗಿದೆ.
ನನಗೆ ಸರಿಯಾಗಿ ರೆಕಮೆಂಡ್ ಮಾಡಿ. ಇದು ನಿಜಕ್ಕೂ ಫನ್ ಆಗಿರುತ್ತದೆ. ನಿಮಗೆ ನನ್ನ ಫುಟ್ವರ್ಕ್ ಬೇಕು ಅಲ್ಲವೇ ? ನೋಡಿ ಎಂದಿದ್ದಾರೆ.

ಅಷ್ಟೇ ಅಲ್ಲದೇ ಅಮೀರ್ ಖಾನ್ ಬ್ಯಾಟ್ ಹಿಡಿದು ಡ್ಯಾನ್ಸ್ ಮಾಡಿದ್ದಾರೆ. ಇದೇ ಅಲ್ವಾ ಫುಟ್ ವರ್ಕ್ ಎಂದು ವ್ಯಂಗ್ಯವಾಡುವ ಮೂಲಕ ರವಿಶಾಸ್ತ್ರಿ ಅವರು ನೀಡಿದ ಉತ್ತರಕ್ಕೆ ತನ್ನ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಅಮೀರ್ ಖಾನ್ ಅವರು. ಅಮೀರ್ ಖಾನ್ ಅವರು ಶೇರ್ ಮಾಡಿಕೊಂಡ ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬಂದಿದೆ. ನಟನ ಅಭಿಮಾನಿಗಳು ಅಮೀರ್ ಖಾನ್ ಅವರ ಉತ್ತರಕ್ಕೆ ಮೆಚ್ಚುಗೆ ನೀಡಿದ್ದಾರೆ.

Leave a Reply

Your email address will not be published. Required fields are marked *