ರಾಖೀ ಸಾವಂತ್ ನ ಟಚ್ ಮಾಡಿದ್ರೆ 500 ಕೋಟಿ ಮಾನನಷ್ಟ ಮೊಕದ್ದಮೆ: ಖಡಕ್ ವಾರ್ನಿಂಗ್ ಕೊಟ್ಟ ನಟಿ

Entertainment Featured-Articles News Viral Video
32 Views

ಬಾಲಿವುಡ್ ನಟಿ, ಡಾನ್ಸರ್,‌ಡ್ರಾಮಾ ಕ್ವೀನ್, ಟಿ ಆರ್ ಪಿ ಕ್ವೀನ್ ಎಂದೆಲ್ಲಾ ಹೆಸರನ್ನು ಪಡೆದಿರುವ ನಟಿ ಎಂದರೆ ಅದು ಮತ್ತಾರೂ ಅಲ್ಲ ರಾಖೀ ಸಾವಂತ್. ರಾಖೀ ಸಾವಂತ್ ಇದ್ದ ಕಡೆ‌‌ ದೊಡ್ಡ ಸದ್ದು,‌ಸುದ್ದಿಗಳು ಆಗುವುದು ಸಹಜ. ರಾಖೀ ಸಾವಂತ್ ಕೆಲವೇ ದಿನಗಳ ಹಿಂದೆಯಷ್ಟೇ ಮುಗಿದ ಬಿಗ್ ಬಾಸ್ ಸೀಸನ್ 15 ರ ಭಾಗವಾಗಿದ್ದರು. ಎಂದಿನಂತೆ ಕಾರ್ಯಕ್ರಮದ ಟಿ ಆರ್ ಪಿ ಕುಸಿದ ವೇಳೆ, ಎಂಟರ್ಟೈನ್ಮೆಂಟ್ ಹೆಸರಿನಲ್ಲಿ ಈ ಬಾರಿಯೂ ರಾಖೀ ಸಾವಂತ್ ಗೆ ಅವರನ್ನು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡಿಸಲಾಗಿತ್ತು. ವಿಐಪಿ ಸ್ಪರ್ಧಿಯಾಗಿ ರಾಖಿ ಬಿಗ್ ಹೌಸ್ ಪ್ರವೇಶ ಮಾಡಿದ್ದರು.

ಈ ಬಾರಿ ರಾಖೀ ಸಾವಂತ್ ಬಿಗ್ ಬಾಸ್ ಎಂಟ್ರಿ ಬಹಳ ವಿಶೇಷವಾಗಿತ್ತು. ಇದಕ್ಕೆ ಕಾರಣ ರಾಖೀ ಸಾವಂತ್ ಜೀವನದ ಒಂದು ಬಹುದೊಡ್ಡ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ರಾಖೀ ಸಾವಂತ್ ಪತಿಯ ಬಗ್ಗೆ ಆತ ಯಾರು? ಮುಖ ಏಕೆ ತೋರಿಸುವುದಿಲ್ಲ ಎಂದೆಲ್ಲಾ ಕೆಲವು ವರ್ಷಗಳಿಂದ ಎದುರಾಗಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು. ಏಕೆಂದರೆ ರಾಖೀ ಬಿಗ್ ಬಾಸ್ ಮನೆಗೆ ತಮ್ಮ ಪತಿ ರಿತೇಶ್ ಜೊತೆಗೆ ಎಂಟ್ರಿ ನೀಡಿದ್ದರು. ಅನಂತರ ಮನೆಯಲ್ಲಿ ಇಬ್ಬರಿಗೂ ಒಂದಷ್ಟು ಮಾತಿನ ಚಕಮಕಿ ನಡೆದಿತ್ತು ಕೂಡಾ.

ಇನ್ನು ಬಿಗ್ ಬಾಸ್ ಮುಗಿದಾಗಿದೆ. ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ, ಈ ಬಾರಿ ಸ್ಪರ್ಧಿಯಾಗಿದ್ದ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ತಮ್ಮ‌ ಜನ್ಮದಿನದ ಪಾರ್ಟಿಯನ್ನು ವ್ಯವಸ್ಥೆ ಮಾಡಿದ್ದರು. ಈ ಪಾರ್ಟಿಗೆ ರಾಖೀ ಸಾವಂತ್ ಸಹಾ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಪಾಪರಾಜಿಗಳು ( ಸೆಲೆಬ್ರಿಟಿ ಫೋಟೋಗ್ರಾಫರ್) ರಾಖೀ ಸಾವಂತ್ ಫೋಟೋಗಳನ್ನು ಕ್ಲಿಕ್ ಮಾಡಲು ಮುಂದಾಗಿದ್ದಾರೆ. ಫೋಟೋಗ್ರಾಫರ್ ಗಳು ಹಾಗೂ ರಾಖೀ ಸಾವಂತ್ ನಡುವೆ ಒಂದು ಉತ್ತಮ ಬಾಂಧವ್ಯ ಖಂಡಿತ ಇದೆ.

ಇನ್ನು ಕ್ಯಾಮರಾ ಮ್ಯಾನ್ ಗಳ ಫೋಟೋಗಳಿಗೆ ತನ್ನದೇ ಆದ ಸ್ಟೈಲ್ ನಲ್ಲಿ ರಾಖೀ ಪೋಸ್ ಗಳನ್ನು ನೀಡಿದ್ದಾರೆ. ಆಗ ಫೋಟೋಗ್ರಾಫರ್ ಗಳು ರಾಖಿಯನ್ನು ಸುತ್ತುವರೆದಿದ್ದಾರೆ, ಆಕೆಯ ಫೋಟೋಗಳನ್ನು ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ರಾಖಿ ಅವರಿಗೆ ಪಕ್ಕಕ್ಕೆ ಸರಿಯುವಂತೆ ಹೇಳಿದ್ದಾರೆ. ಅಲ್ಲದೇ ಅದೇ ವೇಳೆ ರಾಖೀ, ನನ್ನನ್ನು ಯಾರಾದ್ರೂ ಮುಟ್ಟಿದ್ರೆ 500 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹಾಕುವೆ ಎಂದು ಎಚ್ಚರಿಕೆ ಸಹಾ ನೀಡಿದ್ದಾರೆ.

ರಾಖೀ ಸಾವಂತ್ ಫೋಟೋಗ್ರಾಫರ್ ಗಳಿಗೆ ಆವಾಜ್ ಹಾಕಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ರಾಖೀ ಮಾತಿಗೆ ವೈವಿದ್ಯಮಯ ಎನಿಸುವಂತಹ ಪ್ರತಿಕ್ರಿಯೆಗಳನ್ನು ಸಹಾ ನೀಡುತ್ತಿದ್ದಾರೆ ನೆಟ್ಟಿಗರು. ಕೆಲವರು ಹಾಸ್ಯ ಚಟಾಕಿಗಳನ್ನು ಹಾರಿಸಿದರೆ, ಇನ್ನೂ ಕೆಲವರು ಫೋಟೋಗ್ರಾಫರ್ ಗಳು ಇಲ್ಲವಾದರೆ ನಿಮ್ಮನ್ನು ಜನ ನೋಡೋಕೆ ಸಾಧ್ಯ ಇಲ್ಲ ಎಂದು ಕಾಲೆಳೆದಿದ್ದಾರೆ.

Leave a Reply

Your email address will not be published. Required fields are marked *