ತೆಲುಗು ಸಿನಿಮಾಗಳಲ್ಲಿ ನಟ ಪವನ್ ಕಲ್ಯಾಣ್ ಅವರಿಗೆ ಅಭಿಮಾನಿಗಳು ನೀಡಿರುವ ಬಿರುದು ಪವರ್ ಸ್ಟಾರ್ ಎನ್ನುವುದು. ಸಿನಿಮಾಗಳಲ್ಲಿ, ಪೋಸ್ಟರ್ ಗಳಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಎಂದೇ ತೋರಿಸಲಾಗುವುದು. ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ಅವರ ಪವರ್ ಫುಲ್ ನಟನೆ, ಸ್ಟಂಟ್, ಆ್ಯಕ್ಷನ್ ಗಳನ್ನು ನೋಡಿ ಅವರ ಅಭಿಮಾನಿಗಳು ಅವರನ್ನು ಪವರ್ ಸ್ಟಾರ್ ಎಂದು ಕರೆದು ಗೌರವಿಸುತ್ತಿದ್ದರು. ಆದರೆ ಈಗ ಸ್ವತಃ ಪವನ್ ಕಲ್ಯಾಣ್ ಅವರೇ ಈ ಬಿರುದಿನ ಬಗ್ಗೆ ಸಿಟ್ಟಾಗಿದ್ದಾರೆ, ಅಭಿಮಾನಿಗಳ ಮುಂದೆಯೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಕುಟುಂಬದಿಂದ ಬಂದಿರುವ ಯುವ ನಟ ಸಾಯಿ ಧರಮ್ ತೇಜಾ ಇತ್ತೀಚಿಗೆ ಅಪಘಾತಕ್ಕೆ ಈಡಾಗಿ ಆಸ್ಪತ್ರೆಗೆ ದಾಖಲಾಗಿ, ಕೋಮಾದಲ್ಲಿ ಇದ್ದಾರೆ. ಈ ವೇಳೆ ಅವರ ನಟನೆಯ ರಿಪಬ್ಲಿಕ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ಪವನ್ ಕಲ್ಯಾಣ್ ಅವರು ಭಾಗವಹಿಸಿದ್ದರು. ಆಗ ಅವರ ಮಾತನಾಡಲು ಆಗಮಿಸಿದ ವೇಳೆ ಅಭಿಮಾನಿಗಳು ಪವರ್ ಸ್ಟಾರ್, ಪವರ್ ಸ್ಟಾರ್ ಎಂದು ಕೂಗಿದ್ದಾರೆ. ಇದು ಪವನ್ ಕಲ್ಯಾಣ್ ಅವರ ಸಿಟ್ಟಿಗೆ ಕಾರಣವಾಗಿದೆ.
“ನನ್ನನ್ನೇಕೆ ಪವರ್ ಸ್ಟಾರ್ ಎಂದು ಕರೆಯುತ್ತೀರಿ?? ನನ್ನ ಬಳಿ ಯಾವ ಪವರ್ ಕೂಡಾ ಇಲ್ಲ. ನಾನಿಲ್ಲಿಗೆ ಪವರ್ ಸ್ಟಾರ್ ಎಂದು ಕರೆಸಿಕೊಳ್ಳುವುದಕ್ಕಾಗಿಯೋ ಅಥವಾ ನಿಮ್ಮಿಂದ ಸಿಎಂ ಎಂದು ಕರೆಸಿಕೊಳ್ಳುವುದಕ್ಕಾಗಿಯೋ ಬಂದಿಲ್ಲ, ಇನ್ಮುಂದೆ ನನ್ನನ್ನು ಯಾರೂ ಪವರ್ ಸ್ಟಾರ್ ಎಂದು ಕರೆಯಬೇಡಿ” ಎಂದು ನಟ ಪವನ್ ಕಲ್ಯಾಣ್ ಅವರು ಅಭಿಮಾನಿಗಳಿಗೆ ಸೂಚನೆಯನ್ನು ನೀಡುತ್ತಾ, ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಇದು ಮಾತ್ರವೇ ಅಲ್ಲದೇ ಇನ್ಮುಂದೆ ಸಿನಿಮಾಗಳಲ್ಲಿ ಸಹಾ ಟೈಟಲ್ ಕಾರ್ಡ್ ನಲ್ಲಿ ಪವರ್ ಸ್ಟಾರ್ ಹೆಸರನ್ನು ಬಳಸದಂತೆ ನಿರ್ಮಾಪಕ, ನಿರ್ದೇಶಕರಿಗೂ ಸೂಚನೆ ನೀಡಿದ್ದಾರೆ. ಯಾವುದೇ ಪವರ್ ಇಲ್ಲದ ತನಗೇಕೆ ಈ ಪವರ್ ಸ್ಟಾರ್ ಬಿರುದು ಎನ್ನುವ ಅವರ ಅಸಮಾಧಾನ ಈ ಮೂಲಕ ಹೊರ ಬಂದಿದೆ, ಅದೇ ವೇಳೆ ಅವರ ಈ ಅಸಮಾಧಾನಕ್ಕೆ ಕಾರಣವೇನು ಎನ್ನುವ ವಿಷಯವಾಗಿ ಸಹಾ ಈಗಾಗಲೇ ಗುಸು ಗುಸು ಆರಂಭವಾಗಿದೆ.
ಹೌದು, ಚುನಾವಣೆಯಲ್ಲಿ ಪವರ್ ಸ್ಟಾರ್ ಎಂದು ಕರೆಯುವ ಅಭಿಮಾನಿಗಳೇ ತನಗೆ ಮತ ನೀಡಲಿಲ್ಲ ಎನ್ನುವ ಬೇಸರ ಒಂದು ಕಡೆ ಇದಕ್ಕೆ ಕಾರಣ ಎಂದರೆ ಮತ್ತೊಂದು ಕಡೆ ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ಅವರು ತಮ್ಮ ಹೆಸರಿನ ಜೊತೆ ಇರುವ ಈ ಪವರ್ ಸ್ಟಾರ್ ಬಿರುದನ್ನು ತೆಗೆದುಹಾಕಲು ನಿರ್ಧಾರ ಮಾಡಿದ್ದಾರೆ ಎನ್ನುವ ವಿಷಯಗಳು ಟಾಲಿವುಡ್ ಅಂಗಳದಲ್ಲಿ ಸುತ್ತುತ್ತಿದೆ.