ನನಗೇನಾದ್ರು ಹೆಚ್ಚು ಕಮ್ಮಿ ಆದ್ರೆ ಎಲ್ಲರೂ ಸೇರಿ ಮರ್ಡರ್ ಮಾಡಿದ್ದೀರಿ ಅಂದ್ಕೊಳ್ಳಿ: ವಿಜಯಲಕ್ಷ್ಮಿ ಹೊಸ ವೀಡಿಯೋ

0 0

ನಟಿ ವಿಜಯಲಕ್ಷ್ಮಿ ಎಂದರೆ ಇತ್ತೀಚಿನ ದಿನಗಳಲ್ಲಿ ನೆನಪಾಗುವುದು ವೀಡಿಯೋಗಳು. ನಟಿ ವಿಜಯಲಕ್ಷ್ಮಿ ತನ್ನ ಪರಿಸ್ಥಿತಿ ಹದಗೆಟ್ಟಿದೆಯೆಂದು ಹೇಳಿಕೊಂಡು, ಆರ್ಥಿಕ ಸಹಾಯವನ್ನು ಕೇಳುವ ದೃಶ್ಯಗಳು ವೈರಲ್ ಆಗುತ್ತಾ ಇರುತ್ತವೆ. ಅಲ್ಲದೇ ಇದಕ್ಕೆ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಅಲ್ಲದೇ ವಿಜಯಲಕ್ಷ್ಮಿ ಅವರ ಸ್ಟಾರ್ ನಟರ ಮೇಲೆ ಕೂಡಾ ಆರೋಪಗಳನ್ನು ಮಾಡುವ ಮೂಲಕ ಅವರ ಅಭಿಕಾನಿಗಳ ಸಿಟ್ಟಿಗೆ ಸಹಾ ಕಾರಣವಾಗುತ್ತಿದ್ದಾರೆ. ಇದೀಗ ಹೊಸ ವೀಡಿಯೋ ಶೇರ್ ಮಾಡಿಕೊಂಡ ನಟಿ ವಿಜಯ ಲಕ್ಷ್ಮಿ ತಾನು ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ನಟಿ ವಿಜಯಲಕ್ಷ್ಮಿ ಹೊಸ ವೀಡಿಯೋದಲ್ಲಿ ತನಗೆ ಕೊವಿಡ್ ನ್ಯೂಮೋನಿಯಾ ಆಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಕಳೆದ ಐದು ದಿನಗಳಿಂದ ತೀವ್ರವಾಗಿ ನರಳುತ್ತಿರುವುದಾಗಿ, ಬಹಳ ವಾಂತಿ ಆಗಿದ್ದು, ತೀವ್ರವಾದ ಜ್ವರ ಕಾಡುತ್ತಿದೆ. ಕೋವಿಡ್ ಸೆಂಟರ್ ಗೆ ದಾಖಲು ಆಗಲೇಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ವಿಜಯಲಕ್ಷ್ಮಿ ಅವರು ಹೇಳಿಕೊಂಡಿದ್ದು, ಯಾರ ನೆರವು ಸಿಗುತ್ತಿಲ್ಲ ಎಂದಿದ್ದಾರೆ.

ಕೋವಿಡ್ ಸೆಂಟರ್ ಗೆ ಸೇರುವ ಸಲುವಾಗಿ ಕಲಾವಿದರ ಸಂಘಕ್ಕೆ ತಿಳಿಸಿದರೂ , ಅನೇಕರನ್ನು ಸಂಪರ್ಕ ಮಾಡಿದರೂ ಪ್ರಯೋಜನವಾಗಿಲ್ಲ. ಅಲ್ಲದೇ ಐದು ದಿನಗಳಿಂದ ಸರಿಯಾದ ಊಟ ಸಿಗುತ್ತಿಲ್ಲ. ನಾನು ಹೆಚ್ಚು ದಿನ ಉಳಿಯುವುದಿಲ್ಲ, ನಾನು ಎಲ್ಲೂ ಹೋಗಿಲ್ಲ, ಕರ್ನಾಟಕದಲ್ಲೇ ಇದ್ದೀನಿ. ಯಶ್, ದರ್ಶನ್ ಕಡೆಯಿಂದಲೂ ಯಾವುದೇ ನೆರವು ನನಗೆ ಸಿಕ್ಕಿಲ್ಲ ಎಂದು ವಿಜಯಲಕ್ಷ್ಮಿ ಅವರು ಮಾತನಾಡಿದ್ದು, ನೆರವನ್ನು ಆಶಿಸಿದ್ದಾರೆ.

ಇದಲ್ಲದೇ ಅವರು ಒಂದು ವೇಳೆ ನನಗೇನಾದರೂ ಹೆಚ್ಚು ಕಡಿಮೆಯಾದರೆ ಎಲ್ಲರೂ ಸೇರಿ ನನ್ನನ್ನು ಮರ್ಡರ್ ಮಾಡಿದ್ದೀವಿ ಎಂದುಕೊಳ್ಳಿ ಎಂದಿದ್ದಾರೆ. ನಟಿ ವಿಜಯಲಕ್ಷ್ಮಿ ಅವರು ಕೆಲವೇ ದಿನಗಳ ಹಿಂದೆ ಅವರ ಅಕ್ಕನ ಪರಿಸ್ಥಿತಿ ಬಗ್ಗೆ, ಅಕ್ಕ ನಿಗೆ ಸರ್ಜರಿ ಆಗಿರುವ ವಿಚಾರ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.

ವಿಜಯಲಕ್ಷ್ಮಿ ಅವರ ಈ ಹೊಸ ವೀಡಿಯೋ ಸಹಾ ಮತ್ತೊಮ್ಮೆ ವೈರಲ್ ಆಗಿದೆ. ವೀಡಿಯೋ ನೋಡಿದ ಮೇಲೆಯೂ ಕೂಡಾ ಮತ್ತೊಮ್ಮೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಕೆಲವರು ಅಸಮಾಧಾನ ಹೊರಹಾಕಿದರೆ, ಇನ್ನೂ ಕೆಲವರು ಕಷ್ಟದಲ್ಲಿ ಇರುವ ಆಕೆಗೆ ನೆರವನ್ನು ನೀಡಿ ಮಾನವೀಯತೆಯನ್ನು ಮೆರೆಯಬೇಕು ಎಂದು ಸಹಾ ಹೇಳಿದ್ದಾರೆ.

Leave A Reply

Your email address will not be published.