ನನಗೆ ಸೌಂದರ್ಯಕ್ಕಿಂತ ಆರೋಗ್ಯಾನೇ ಮುಖ್ಯ, ಆರೋಗ್ಯ ಇಲ್ಲದ ಜೀವನದ ಪ್ರಯೋಜನ ಏನು? ನಟಿ ರಮ್ಯ

Entertainment Featured-Articles News
85 Views

ಸ್ಯಾಂಡಲ್ವುಡ್ ನಟಿ ರಮ್ಯ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟೀವ್ ಆಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಯಲ್ಲಿ ಆರೋಗ್ಯವೇ ಸಂಪತ್ತು ಎಂದು, ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಎನ್ನುವ ಸಂದೇಶವೊಂದನ್ನು ನೀಡುತ್ತಾ ಎಲ್ಲರಿಗೂ ಕೆಲವೊಂದು ಚಿಪ್ಸ್ ಗಳನ್ನು ನೀಡುತ್ತಾ ಪೋಸ್ಟ್ ಶೇರ್ ಮಾಡಿದ್ದಾರೆ. ರಮ್ಯ ಅಗರು ತಮ್ಮ ಪೋಸ್ಟ್ ನಲ್ಲಿ ಆರೋಗ್ಯವೇ ಇಲ್ಲದಿದ್ದರೆ ಜೀವನದ ಪ್ರಯೋಜನವೇನು? ಎಂದು ಪ್ರಶ್ನೆ ಮಾಡುತ್ತಾ ಆರೋಗ್ಯದ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ರಮ್ಯ ಅವರು ಆರೋಗ್ಯದ ಕುರಿತಾಗಿ ಜನರಿಗೆ ಮಾಹಿತಿ ನೀಡಲು, ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿ ಎಂದು ತಿಳಿಸುವಂತಹ ಒಂದು ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವೀಡಿಯೋದಲ್ಲಿ ನಟಿ ರಮ್ಯ ಅವರು ನಾವು ಆರೋಗ್ಯದ ವಿಚಾರವಾಗಿ ಬಹಳ ಎಚ್ಚರಿಕೆಯಿಂದ ಇರಬೇಕು. ಆರೋಗ್ಯವೇ ಭಾಗ್ಯವಾಗಿದೆ. ಕೆಲಸ ಮಾಡಿ ಹಣವನ್ನು ಮಾಡುತ್ತೇವೆ‌. ಆದರೆ ಜೀವನವನ್ನು ಎಂಜಾಯ್ ಮಾಡಲು ಆರೋಗ್ಯವೇ ಸರಿಯಿಲ್ಲವೆಂದರೆ ಏನು ಪ್ರಯೋಜನ?? ನಾನು ಈ ಹಿಂದೆ ಸಿನಿಮಾ ಎಂದು ಬ್ಯುಸಿಯಾಗಿರುತ್ತಿದ್ದಾಗ, ಸರಿಯಾದ ಸಮಯದಲ್ಲಿ ಊಟ ಮಾಡದೇ ಆರೋಗ್ಯ ಹಾಳಾಗುತ್ತಿತ್ತು. ಆಗ ನನ್ನ ಪೋಷಕರು ಎಷ್ಟು ಕೆಲಸ ಮಾಡ್ತೀಯಾ, ಎಷ್ಟು ಫೇಮಸ್ ಆಗ್ತೀಯಾ ಆದರೆ ಆರೋಗ್ಯ ಸರಿ ಇಲ್ಲ ಅಂದ್ರೆ ಜೀವನ ಎಂಜಾಯ್ ಮಾಡೋದು ಯಾವಾಗಾ? ಎಂದು ಕೇಳ್ತಾ ಇದ್ರು.

ಅವರ ಮಾತುಗಳನ್ನು ಕೇಳಿ ನಾನು ಆರೋಗ್ಯದ ಕಡೆ ಕಾಳಜಿಯನ್ನು ವಹಿಸಿದೆ. ಸರಿಯಾದ ಸಮಯಕ್ಕೆ ಊಟ ಮಾಡುತ್ತೇನೆ. ಹೆಚ್ಚಾಗಿ ನೀರು ಕುಡಿಯುವುದು, ಹಣ್ಣು ತರಕಾರಿಗಳನ್ನು ತಿನ್ನುವುದನ್ನು ಮಾಡುತ್ತೇನೆ.ಮಹಿಳೆಯರು ಪ್ರ ಫೋಟೀಸ್ ಹೆಚ್ಚಾಗಿರುವ ಆಹಾರವನ್ನು ಸೇವನೆ ಮಾಡಬೇಕು. ನಾವು ಬೆಳ್ಳಗೆ ಕಾಣಬೇಕೆಂದು ಅಂದು ಕೊಳ್ಳುತ್ತೇವೆ. ಆದರೆ ಕಪ್ಪಾಗಿರುವವರೇ ಚೆನ್ನಾಗಿ ಕಾಣಿಸಿಕೊಳ್ಳುತ್ತಾರೆ. ನಾವು ಅವರಂತೆ ಚೆನ್ನಾಗಿ ಕಾಣಬೇಕು ಎಂದು ರಾಸಾಯನಿಕ ಕ್ರೀಮ್ ಗಳನ್ನು ಬಳಸುತ್ತೇವೆ. ಮೊದಲು ನಾವು ನಮ್ಮ ತಲೆಯಿಂದ ಹಾಗೆ ಇರಬೇಕು, ಹೀಗೆ ಇರಬೇಕು ಎನ್ನುವ ಆಲೋಚನೆಯನ್ನು ತೆಗದು ಹಾಕಬೇಕು.

ಇರುವ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದು ಮುಖ್ಯವಾಗಿರುತ್ತದೆ. ನಮ್ಮ‌ ಬಳಿ ಇಲ್ಲದಿರುವುದರ ಬಗ್ಗೆ ಚಿಂತೆ ಮಾಡುವ ಬದಲು, ಇರುವುದರಲ್ಲಿಯೇ ಹೆಮ್ಮೆ ಪಡಬೇಕು, ನನಗೆ ಸೌಂದರ್ಯ ಕ್ಕಿಂತ ಆರೋಗ್ಯವೇ ಮುಖ್ಯ ಎಂದು ನಟಿ ರಮ್ಯ ಅವರು ಸೋಶಿಯಲ್ ಮೀಡಿಯಾ ಮೂಲಕ ಆರೋಗ್ಯದ ಕುರಿತಾಗಿ ಒಂದಷ್ಟು ಉತ್ತಮವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಮ್ಯ ಅವರ ಈ ವೀಡಿಯೋ ನೋಡಿದ ಅನೇಕ ಮಂದಿ ಇದಕ್ಕೆ ಮೆಚ್ಚುಗೆಯನ್ನು ಸೂಚಿಸಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *