ನನಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ: ರಣ್ವೀರ್ ಬೆತ್ತಲೆ ಫೋಟೋ ಬಗ್ಗೆ ಆಲಿಯಾ ಭಟ್ ಮೊದಲ ಪ್ರತಿಕ್ರಿಯೆಗೆ ಎಲ್ಲರೂ ಶಾಕ್

Written by Soma Shekar

Published on:

---Join Our Channel---

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ತಮ್ಮ ನ ಗ್ನ ಫೋಟೋಶೂಟ್‌ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗಿನಿಂದಲೂ ಟ್ರೋಲ್ ಗೆ ಗುರಿಯಾಗಿದ್ದು, ಪ್ರತಿದಿನ ಟ್ರೋಲಿಂಗ್ ಅನ್ನು ಎದುರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜನರು ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ ಮತ್ತು ಟೀಕೆ ಮಾಡುತ್ತಲೇ ಇದ್ದಾರೆ. ರಣವೀರ್ ಸಿಂಗ್ ಅವರು ಈ ಬೆತ್ತಲೆ ಅವತಾರಕ್ಕೆ ಕೆಲವರು ಬೆಂಬಲ ನೀಡಿದರೆ, ಇನ್ನೂ ಕೆಲವರು ಟೀಕೆ ಮಾಡಿದ್ದಾರೆ. ಈಗ ಈ ವಿಚಾರವಾಗಿ ಅವರ ಆಪ್ತ ಸ್ನೇಹಿತೆ ಅಲಿಯಾ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.

ಆಲಿಯಾ ಭಟ್ ತಮ್ಮ ಡಾರ್ಲಿಂಗ್ ಚಿತ್ರದ ಟ್ರೈಲರ್ ಬಿಡುಗಡೆಗೆ ಬಂದಾಗ, ಅವರು ರಣವೀರ್ ಸಿಂಗ್ ಕುರಿತಾಗಿ ಒಂದಷ್ಟು ಮಾತನಾಡಿದಾರೆ. ಆಲಿಯಾ ಭಟ್ ಹೇಳಿ ಮಾತು ಕೇಳಿದರೆ ಅವರ ಪತಿ ನಟನ ರಣಬೀರ್ ಕಪೂರ್ ಖಂಡಿತವಾಗಿಯೂ ಶಾ ಕ್ ಆಗುತ್ತಾರೆ ಅನ್ನೋದ್ರಲ್ಲಿ ಅನುಮಾನವೇ ಬೇಡ. ಹಾಗದ್ರೆ ತೀವ್ರ ಚರ್ಚೆಯನ್ನು ಹುಟ್ಟು ಹಾಕುವ ಹಾಗೆ ಆಲಿಯಾ ಭಟ್ ರಣವೀರ್ ಸಿಂಗ್ ಬಗ್ಗೆ ಹೇಳಿದಾದ್ರು ಏನು ಎಂದು ತಿಳಿಯುವ ಕುತೂಹಲ ನಿಮ್ಮಲ್ಲಿ ಇದ್ದಲ್ಲಿ ಅದಕ್ಕೆ ಉತ್ತರ ಇಲ್ಲಿದೆ.

ಪತ್ರಿಕಾಗೋಷ್ಠಿಯಲ್ಲಿ ರಣವೀರ್ ಅವರ ನ ಗ್ನ ಫೋಟೋಶೂಟ್ ಬಗ್ಗೆ ಆಲಿಯಾರನ್ನು ಪ್ರಶ್ನೆ ಮಾಡಿದಾಗ ನಟಿಯು, ನಾನು ನನ್ನ ಫೇವರಿಟ್ ರಣವೀರ್ ಬಗ್ಗೆ ನೆಗೆಟಿವ್ ಆಗಿ ಏನನ್ನೂ ಕೇಳಲು ಇಷ್ಟ ಪಡುವುದಿಲ್ಲ. ಆದ್ದರಿಂದ ಈ ಪ್ರಶ್ನೆಯನ್ನು ನಾನು ಸಹಿಸಿಕೊಳ್ಳಲಾರೆ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ. ಅವರು ನನಗೆ ಮಾತ್ರವಲ್ಲ, ಎಲ್ಲರಿಗೂ ಸಹಾ ಫೇವರಿಟ್ ಆಗಿದ್ದಾರೆ. ಅವರು ಅತ್ಯುತ್ತಮ ಸಿನಿಮಾಗಳನ್ನು ಮಾಡಿದ್ದು, ನಾವೆಲ್ಲರೂ ಅವರಿಗೆ ಪ್ರೀತಿಯನ್ನು ಮಾತ್ರವೇ ನೀಡಬೇಕು ಎಂದಿದ್ದಾರೆ.

ನಟಿ ಆಲಿಯಾ ಭಟ್ ತಮ್ಮ ವಿವಾಹದ ಕೆಲವೇ ತಿಂಗಳುಗಳ ನಂತರ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಘೋಷಣೆ ಮಾಡಿ ಅಭಿಮಾನಿಗಳು ಹಾಗೂ ನೆಟ್ಟಿಗರಿಗೆ ಶಾ ಕ್ ನೀಡಿದ್ದರು. ಗರ್ಭಿಣಿ ಎಂದು ಘೋಷಣೆ ಮಾಡಿದ ನಂತರ ಇದೇ ಮೊದಲ ಬಾರಿಗೆ ಸಿನಿಮಾವೊಂದರ ಪ್ರಚಾರದ ಭಾಗವಾಗಿ ಆಲಿಯಾ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ. ಮಾದ್ಯಮಗಳ ವರದಿಗಾರರು ನಟಿಗೆ ತಾಯಿಯಾಗುತ್ತಿರುವ ಹಿನ್ನಲೆಯಲ್ಲಿ ಶುಭಾಶಯವನ್ನು ತಿಳಿಸಿದ್ದಾರೆ. ಆಲಿಯಾ ಸಹಾ ಖುಷಿಯಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ.

Leave a Comment