ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಬಹು ಚರ್ಚಿತ ನಟಿಯರಲ್ಲಿ ಒಬ್ಬರು, ಅದರಲ್ಲೂ ವಿಶೇಷವಾಗಿ ನಟಿ ಕಂಗನಾ ಮತ್ತು ಸ್ವರಾ ಭಾಸ್ಕರ್ ನಡುವೆ ನಡೆಯುವ ಸೋಶಿಯಲ್ ಮೀಡಿಯಾ ಹೇಳಿಕೆಗಳ ವಾರ್ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಇನ್ನು ಕೆಲವೇ ದಿನಗಳ ಹಿಂದೆಯಷ್ಟೇ ನಟಿ ಸ್ವರಾ ಭಾಸ್ಕರ್ ಗೆ ಕೋವಿಡ್ ಪಾಸಿಟಿವ್ ಎಂದು ವರದಿಯಾಗಿದೆ. ನಟಿ ಸೋಶಿಯಲ್ ಮೀಡಿಯಾಗಳ ಮೂಲಕ ತನಗೆ ಕೋವಿಡ್ ಪಾಸಿಟಿವ್ ಆಗಿರುವ ವಿಚಾರವನ್ನು ಘೋಷಿಸಿದ್ದಾರೆ. ಇದಾದ ನಂತರ ಅವರಿಗೆ ವೈವಿದ್ಯಮಯ ಪ್ರತಿಕ್ರಿಯೆಗಳು ಹರಿದು ಬರಲು ಆರಂಭಿಸಿದೆ.
ನಟಿ ಸ್ವರಾ ಭಾಸ್ಕರ್ ಸೋಶಿಯಲ್ ಮೀಡಿಯಾಗಳಲ್ಲಿ ಮಾಡುವ ಪೋಸ್ಟ್ ಗಳಿಗೆ ಅವರ ಅಭಿಮಾನಿ ಬಳಗವು ಎಷ್ಟು ಮುತುವರ್ಜಿಯಿಂದ ಪ್ರತಿಕ್ರಿಯೆ ನೀಡುವುದೋ, ಅದಕ್ಕೆ ವಿ ರು ದ್ಧ ವಾಗಿ ಅವರನ್ನು, ಅವರ ವಿಚಾರಧಾರೆಗಳನ್ನು ಇಷ್ಟ ಪಡದವರು ಸಹಾ ಅಷ್ಟೇ ತೀ ವ್ರ ವಾಗಿ ಟೀಕೆ ಟಿಪ್ಪಣಿಗಳನ್ನು ಮಾಡುವುದು ಹಾಗೂ ನಟಿಯನ್ನು ಟ್ರೋಲ್ ಮಾಡುವುದು ಸಹಾ ಬಹಳ ಜೋರಾಗಿಯೇ ನಡೆಸುತ್ತಾರೆ. ಈಗ ನಟಿಯ ಕೊರೊನಾ ಪಾಸಿಟಿವ್ ವಿಚಾರದಲ್ಲೂ ಅದೇ ಆಗಿದೆ.
ನಟಿ ಸ್ವರಾ ಭಾಸ್ಕರ್ ಅವರು ಕೋವಿಡ್ ಪಾಸಿಟಿವ್ ಆದ ಕಾರಣ ನಾನು ಕ್ವಾರಂಟೈನ್ ನಲ್ಲಿ ಇದ್ದೇನೆ ಎಂದು ಪೋಸ್ಟ್ ಮಾಡಿದ ಬೆನ್ನಲ್ಲೇ ಅವರ ಅಭಿಮಾನಿಗಳು ಹಾಗೂ ಅವರ ಹಿತೈಷಿಗಳು ನಟಿಗೆ ಕೋವಿಡ್ ಪಾಸಿಟಿವ್ ಆಗಿರುವ ವಿಚಾರವನ್ನು ತಿಳಿದು, ಬೇಗ ಚೇತರಿಸಿಕೊಳ್ಳಿ ಎಂದೆಲ್ಲಾ ಶುಭ ಕೋರಿದರೆ, ಅವರ ವಿ ರೋ ಧಿಗಳು ರೆಸ್ಟ್ ಇನ್ ಪೀಸ್, ಸಾವಿಗೆ ಹತ್ತಿರವಾಗು ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡುವ ಮೂಲಕ ನಟಿಯನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ತನ್ನ ಬಗ್ಗೆ ಟ್ರೋಲ್ ಮಾಡುತ್ತಿರುವುದನ್ನು ಕಂಡು ನಟಿ, ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡು ಟ್ರೋಲ್ ಮಾಡಿದವರಿಗೆ, “ಸ್ನೇಹಿತರೆ ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಿ, ನನಗೇನಾದರೂ ಆದರೆ ನಿಮ್ಮ ನಿತ್ಯದ ಅನ್ನ ದೂರಾಗಿ ಬಿಡುತ್ತದೆ, ಆಮೇಲೆ ನಿಮ್ಮ ಕುಟುಂಬ ನಡೆಯೋದು ಹೇಗೆ??” ಎಂದು ವ್ಯಂಗ್ಯವಾಡಿ, ಖಡಕ್ ಉತ್ತರವನ್ನು ಸಹಾ ನೀಡಿದ್ದಾರೆ.
ನಟಿ ಸ್ವರಾ ಭಾಸ್ಕರ್ ಈ ಹಿಂದೆ ಒಮ್ಮೆ ನಾನು ವರ್ಷದ 150 ದಿನ ಮುಸ್ಲಿಂ, 100 ದಿನ ಕ್ರಿಶ್ಚಿಯನ್, 100 ದಿನ ನಾಸ್ತಿಕಳು, 15 ದಿನ ಸಿಖ್ ಆಗಿರುತ್ತೇನೆ, ಕೇವಲ ವರ್ಷದ ಒಂದೇ ಒಂದು ದಿನ ಮಾತ್ರ ಹಿಂದೂ ಆಗಿರುತ್ತೇನೆ ಎಂದು ಹೇಳಿದ್ದರು. ಆಗಲೂ ಕೂಡಾ ನಟಿಯ ಈ ಮಾತು ಬಹಳಷ್ಟು ಜನರ ಅಸಮಾಧಾನಕ್ಕೆ ಕಾರಣವಾಗಿತ್ತು ಹಾಗೂ ಆಗಲೂ ನಟಿ ಯನ್ನು ಭರ್ಜರಿಯಾಗಿ ಟ್ರೋಲ್ ಮಾಡಲಾಗಿತ್ತು. ಈಗ ಮತ್ತೊಮ್ಮೆ ನಟಿ ಟ್ರೋಲ್ ಆಗಿದ್ದಾರೆ.