ಡೇಟಿಂಗ್ ಗೆ ಕೊಡಗಿನ ಹುಡುಗ ಸಿಗಲಿಲ್ಲವೆಂದು ರಶ್ಮಿಕಾ ಬಿಂದಾಸ್ ಆಗಿ ಹೇಳುತ್ತಾ ಕೊಟ್ಟ ಕಾರಣ ನೋಡಿ ಹೇಗಿದೆ

0
203

ಕನ್ನಡತಿ, ಕೊಡಗಿನ ಸುಂದರಿ, ನ್ಯಾಷನಲ್ ಕ್ರಶ್ ಕೂಡಾ ಆಗಿ ದಕ್ಷಿಣ ಸಿನಿರಂಗ ಮಾತ್ರವೇ ಅಲ್ಲದೇ ಬಾಲಿವುಡ್ ಅಂಗಳದಲ್ಲಿ ಕೂಡಾ ತನ್ನ ಸಿನಿಮಾ‌ ಬಿಡುಗಡೆಗೂ ಮೊದಲೇ ಸಖತ್ ಕ್ರೇಜ್ ಹುಟ್ಟು ಹಾಕಿರುವ ನಟಿ ರಶ್ಮಿಕಾ ಮಂದಣ್ಣ‌ ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇನ್ಸ್ಟಾಗ್ರಾಂ ನಲ್ಲಿ ತೆಲುಗಿನ ಸ್ಟಾರ್ ನಟಿಯರನ್ನು ಕೂಡಾ ಹಿಂದಿಕ್ಕಿ ದೊಡ್ಡ ಮಟ್ಟದ ಹಿಂಬಾಲಕರನ್ನು ಪಡೆದುಕೊಂಡು ರಶ್ಮಿಕಾ ಸುದ್ದಿಯಾಗಿದ್ದಾರೆ. ಸಿನಿಮಾ ಮಾತ್ರವೇ ಅಲ್ಲದೇ ಜಾಹೀರಾತಿಗಳ ಮೂಲಕ ಮತ್ತಷ್ಟು ಜನಪ್ರಿಯತೆ ಯನ್ನು ತನ್ನದಾಗಿಸಿಕೊಂಡಿರುವ ಈ ನಟಿ ಒಂದಲ್ಲಾ ಒಂದು ವಿಷಯದಿಂದ ಸುದ್ದಿಯಲ್ಲಿ ಇರುತ್ತಾರೆ.

ರಶ್ಮಿಕಾ ಮಂದಣ್ಣ‌ ನೀಡುವ ಹೇಳಿಕೆಗಳು ಸಹಾ ಸಿಕ್ಕಾಪಟ್ಟೆ ಟ್ರೋಲ್ ಆಗುವುದು ಕೂಡಾ ಉಂಟು. ಇಂತಹ ರಶ್ಮಿಕಾ ಮಂದಣ್ಣ‌ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ಡೇಟಿಂಗ್ ಕುರಿತಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ರಶ್ಮಿಕಾ ತಮಗಿಂತ ಕಿರಿಯ ಹುಡುಗನ ಜೊತೆ ಡೇಟಿಂಗ್ ನ ಕುರಿತಾಗಿ ಮಾತನಾಡಿದ್ದಾರೆ. ಕುಶಾ ಕಪಿಲಾ ಅವರ ದಿ ಸ್ವೈಪ್ ರೈಟ್ ಶೋ ನಲ್ಲಿ ನಿರೂಪಕಿಯು ರಶ್ಮಿಕಾ ರನ್ನು ತಮಗಿಂತ ಚಿಕ್ಕ ಹುಡುಗನ ಜೊತೆಗೆ ಡೇಟಿಂಗ್ ಮಾಡುವ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಲಾಯಿತು. ಆಗ ರಶ್ಮಿಕಾ ಬಹಳ ಜಾಣ್ಮೆಯಿಂದ ಉತ್ತರ ನೀಡಿದ್ದಾರೆ.

ರಶ್ಮಿಕಾ ಈ ವಿಚಾರಕ್ಕೆ ಉತ್ತರವನ್ನು ನೀಡುತ್ತಾ ವಯಸ್ಸು ಮುಖ್ಯವಾಗುವುದಿಲ್ಲ, ವ್ಯಕ್ತಿ ಮುಖ್ಯವಾಗುತ್ತಾರೆ ಎಂದಿದ್ದಾರೆ. ಅಲ್ಲದೇ ರಶ್ಮಿಕಾ ತಮ್ಮ ಬಾಲ್ಯ ಹಾಗೂ ಕಾಲೇಜಿನ ದಿನಗಳನ್ನು ಸ್ಮರಿಸಿ ಕೊಡಗಿನಲ್ಲಿ ಮನೆಗಳು ಒಂದಕ್ಕೊಂದು ಬಹಳ ದೂರದಲ್ಲಿ ಇರುತ್ತವೆ, ಆದ್ದರಿಂದ ಹುಡುಗರು ಎಲ್ಲಿದ್ದಾರೆ ಎಂದು ಹುಡುಕಬೇಕಾಗಿತ್ತು. ನಾನು ಅಲ್ಲಿದ್ದಾಗ ನನಗೆ ಕೊಡಗಿನ ಯಾವುದೇ ಹುಡುಗ ಸಿಗಲಿಲ್ಲ. ನಾನು ಕೊಡಗಿನ ಹುಡುಗರು ಎಲ್ಲಿ ಹೋದರೆಂದು ನಮ್ಮ ಅಪ್ಪ ಅಮ್ಮನನ್ನು ಕೇಳುತ್ತಿದ್ದೆ ಎಂದಿದ್ದಾರೆ.

ಅಲ್ಲದೇ ತನ್ನ ಸ್ಕೂಲ್ ಹಾಗೂ ಕಾಲೇಜಿನ ಬಹಳಷ್ಟು ಸಮಯ ಬೋರ್ಡಿಂಗ್ ಸ್ಕೂಲ್, ಹಾಸ್ಟೆಲ್ ಗಳಲ್ಲೇ ಕಳೆದಿದ್ದರಿಂದ ಹುಡುಗನ ಜೊತೆ ಡೇಟಿಂಗ್ ಮಾಡಲು ಹೇಗೆ ತಾನೇ ಸಾಧ್ಯ?? ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆ ರಶ್ಮಿಕಾ ನೀಡುವ ಹೇಳಿಕೆಗಳು ಹಾಗೂ ಹಂಚಿಕೊಳ್ಳುವ ವಿಚಾರಗಳು ಮಾತ್ರ ಸದಾ ದೊಡ್ಡ ಮಟ್ಟದ ಸುದ್ದಿಯಾಗುವುದು ಖಚಿತ. ಈಗ ಈ ಡೇಟಿಂಗ್ ವಿಚಾರ ಸಹಾ ಸಿಕ್ಕಾಪಟ್ಟೆ ಸುದ್ದಿಯಾಗಿದ್ದು, ಎಂದಿನಂತೆ ಮಿಶ್ರ ಪ್ರತಿಕ್ರಿಯೆ ಗಳು ಬರುತ್ತಿವೆ.

LEAVE A REPLY

Please enter your comment!
Please enter your name here