ಪುಣ್ಯ ಕ್ಷೇತ್ರಗಳಲ್ಲಿ ನದಿ ಸ್ನಾನಕ್ಕೆ ವಿಶೇಷವಾದ ಮಹತ್ವ ಹಾಗೂ ಪ್ರಾಧಾನ್ಯತೆ ಇದೆ. ಪವಿತ್ರ ಧಾಮಗಳಲ್ಲಿ ನದಿ ಸ್ನಾನ ಮಾಡುವುದರಿಂದ ಸರ್ವ ಪಾಪಗಳು ಸಹಾ ಪರಿಹಾರವಾಗುವುದು ಎನ್ನುವುದು ಸನಾತನ ಸಂಪ್ರದಾಯವಾಗಿದೆ. ಆದ್ದರಿಂದಲೇ ತೀರ್ಥ ಕ್ಷೇತ್ರಗಳಿಗೆ ಹೋದಾಗ ಅಲ್ಲಿ ನದಿ ಸ್ನಾನ ಮಾಡದೇ ಬಹಳಷ್ಟು ಜನರು ಕ್ಷೇತ್ರ ದರ್ಶನದ ಫಲ ಸಿಗುವುದಿಲ್ಲ ಎಂದೇ ಹೇಳುತ್ತಾರೆ. ಪವಿತ್ರ ನದಿಗಳಾದ ಗಂಗಾ, ಯುಮನಾ, ಕಾವೇರಿ ಯಾವುದೇ ನದಿಯಾಗಿರಲಿ ಈ ನದಿಗಳಿಗೂ ಸಹಾ ದೈವಿಕ ಸ್ಥಾನವನ್ನು ನೀಡಲಾಗಿದ್ದು, ಈ ನದಿಗಳ ನೀರನ್ನು ಪುಣ್ಯ ಜಲವೆಂದೇ ಆರಾಧಿಸಲಾಗುತ್ತದೆ.
ಆದರೆ ಇಲ್ಲೊಂದು ಜೋಡಿ ಪುಣ್ಯಕ್ಷೇತ್ರಕ್ಕೆ ಹೋದ ವೇಳೆ ನದಿ ಸ್ನಾನ ಮಾಡುವಾಗ ಮಾಡಿಕೊಂಡ ಎಡವಟ್ಟು ಇದೀಗ ದೊಡ್ಡ ಸುದ್ದಿಯಾಗಿದೆ. ಈ ದಂಪತಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಹಳಷ್ಟು ಜನರು ವೀಡಿಯೋ ನೋಡಿ ಜನ ಅವರಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಅದೇ ವೇಳೆ ಕೆಲವರು ಕೇವಲ ಎಚ್ಚರಿಕೆ ನೀಡಿದ್ದರೆ ಸಾಕಾಗಿತ್ತು ಎಂದು ಆ ಜೋಡಿಯ ಪರವಾಗಿ ಸಹಾ ಮಾತನಾಡಿದ್ದಾರೆ. ಇಷ್ಟಕ್ಕೂ ಘಟನೆ ಏನೆಂದು ತಿಳಿಯೋಣ ಬನ್ನಿ.
ಉತ್ತರ ಪ್ರದೇಶದ ಪವಿತ್ರ ಧಾಮ, ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಹರಿಯುವ ಪವಿತ್ರ ಸರೆಯೂ ನದಿಯಲ್ಲಿ ಬಹಳಷ್ಟು ಜನರು ನದಿ ಸ್ನಾನವನ್ನು ಮಾಡುತ್ತಿದ್ದರು. ಈ ವೇಳೆ ಜೋಡಿಯೊಂದು ನದಿ ಸ್ನಾನಕ್ಕಾಗಿ ನೀರಿಗೆ ಇಳಿದಿದೆ. ಆದರೆ ಅವರ ನಡುವೆ ಆಕರ್ಷಣೆ ಹೆಚ್ಚಿದಂತೆ ಸಾರ್ವಜನಿಕ ಸ್ಥಳ ಎನ್ನುವುದನ್ನು ಮರೆತು ಹತ್ತಿರವಾಗಿದ್ದಾರೆ. ಈ ವೇಳೆ ಪತಿಯು ಪತ್ನಿಗೆ ಮುತ್ತು ನೀಡಿದ್ದಾನೆ. ಇದನ್ನು ಗಮನಿಸಿದ ಜನರು ಇದೆಂತ ಕೆಲಸ ಎಂದು ಆತನನ್ನು ನದಿಯಿಂದ ಹೊರಗೆ ಎಳೆದು ಕೊಂಡಿದ್ದಾನೆ.
ಅಯೋಧ್ಯೆಯಲ್ಲಿ ನದಿ ಸ್ನಾನ ಮಾಡುವಾಗ ಇದೆಂತಹ ಅಸಭ್ಯ ವರ್ತನೆ ಎಂದು ಜನರು ಆ ವ್ಯಕ್ತಿಯನ್ನು ಥಳಿಸಿದ್ದಾರೆ. ಹೆಂಡತಿ ಗಂಡನನ್ನು ಬಿಡಿಸಿಕೊಳ್ಳುವ ಪ್ರಯತ್ನವನ್ನು ಮಾಡಿದರೂ ಸಹಾ ಆ ವೇಳೆಗೆ ಜನರ ದೊಡ್ಡ ಗುಂಪು ಅವರ ಸುತ್ತ ಸೇರಿತ್ತು. ಸಾರ್ವಜನಿಕರು ಪತ್ನಿಯನ್ನು ಚುಂಬಿಸಿದ ಪತಿಗೆ ಹೊಡೆಯುವಾಗ, ವ್ಯಕ್ತಿಯೊಬ್ಬರು ಅದನ್ನು ತಡೆದು ಪತಿ ಪತ್ನಿಯನ್ನು ದೂರ ಕರೆದೊಯ್ಯುವ ಕೆಲಸವನ್ನು ಮಾಡಿದ್ದಾರೆ. ಅಧಿಕಾರಿಗಳು ಈ ವಿಚಾರವಾಗಿ ಸೂಕ್ತವಾದ ಕ್ರಮ ಜರುಗಿಸುವಂತೆ ಅಯೋಧ್ಯೆಯ ಪೋಲಿಸರಿಗೆ ನಿರ್ದೇಶನ ನೀಡಿದ್ದಾರೆ.