ನಡು ರಸ್ತೆಯಲ್ಲಿ ನಡೆದ ರೌಡಿ ಹೀರೋ ಎಂಗೇಜ್ಮೆಂಟ್: ಭಾವುಕಳಾದ ಯುವತಿ, ಅಚ್ಚರಿಪಟ್ಟ ಅಭಿಮಾನಿಗಳು

0 1

ಟಾಲಿವುಡ್ ನ ಯುವ ಸ್ಟಾರ್ ನಟ ವಿಜಯ ದೇವರಕೊಂಡ ದಕ್ಷಿಣ ಸಿನಿಮಾ ರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅರ್ಜುನ್ ರೆಡ್ಡಿ ಸಿನಿಮಾದ ನಂತರ ರೌಡಿ ಹೀರೋ ಎಂದೇ ಹೆಸರಾಗಿರುವ ಈ ನಟನಿಗೆ ಯುವ ಜನರ ವಿಶೇಷವಾದ ಅಭಿಮಾನ ದಕ್ಕಿದೆ. ನಟ ವಿಜಯ ದೇವರಕೊಂಡ ಅವರಿಗೆ ತೆಲುಗು ರಾಜ್ಯಗಳಲ್ಲಿ ಮಾತ್ರವೇ ಅಲ್ಲದೇ ಕರ್ನಾಟಕದಲ್ಲಿ ಸಹಾ ಅಭಿಮಾನಿಗಳು ಇದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ನಟ ವಿಜಯ ದೇವರಕೊಂಡ ಅವರಿಗೆ ಮಹಿಳಾ ಅಭಿಮಾ‌ನಿಗಳು ಸಹಾ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅವರನ್ನು ಅಭಿಮಾನಿಸುವ ಯುವತಿಯರ ಪಾಲಿಗೆ ವಿಜಯ ದೇವರಕೊಂಡ ಅವರ ಡ್ರೀಮ್ ಬಾಯ್ ಎನ್ನುವುದರಲ್ಲಿ ಅನುಮಾನ ಖಂಡಿತ ಇಲ್ಲ.‌

ಇನ್ನು ಇತ್ತೀಚಿಗೆ ತಮ್ಮನ್ನು ಬಹಳ ಇಷ್ಟ ಪಡುವ ಅಭಿಮಾನಿಗಾಗಿ ನಡು ರಸ್ತೆಯಲ್ಲಿ ವಿಜಯ ದೇವರಕೊಂಡ ಮಾಡಿದ ಕೆಲಸದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಹೌದು, ಇತ್ತೀಚಿಗೆ ನಟ ಸಿನಿಮಾವೊಂದರ ಪ್ರಚಾರ ಕಾರ್ಯದ ಹಿನ್ನೆಲೆಯಲ್ಲಿ ಬೆಂಗಳೂರು ನಗರಕ್ಕೆ ಆಗಮಿಸಿದ್ದರು. ಈ ವೇಳೆ ಅವರ ಕ್ರೇಜಿ ಮಹಿಳಾ ಅಭಿಮಾನಿ ನಟನನ್ನು ಭೇಟಿಯಾಗಿದ್ದಾರೆ, ಆಕೆ ನಟನನ್ನು ನೋಡಿ ಭಾವುಕರಾಗಿದ್ದಾರೆ. ಆ ಕ್ಷಣಗಳ ದೃಶ್ಯಗಳು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದ್ದು, ವೈರಲ್ ಆದ ಫೋಟೋಗಳನ್ನು ನೋಡಿದ ನಂತರ ವೈವಿದ್ಯಮಯ ಪ್ರತಿಕ್ರಿಯೆಗಳು ಹರಿದು ಬಂದಿದೆ.

ಬೆಂಗಳೂರಿಗೆ ಬಂದಿದ್ದ ತನ್ನ ಅಭಿಮಾನ ನಟನನ್ನು ಭೇಟಿ ಮಾಡಿದ ಅವರ ಮಹಿಳಾ ಅಭಿಮಾನಿ ಬಹಳ ಪ್ರೀತಿಯಿಂದ ನಟನಿಗೆ ಒಂದು ಉಂಗುರವನ್ನು ನೀಡಿದ್ದಾರೆ. ಅದನ್ನು ನಟ ವಿಜಯ ದೇವರಕೊಂಡ ಮಂಡಿಯೂರಿ ಕುಳಿತು ಸ್ವೀಕಾರ ಮಾಡಿದ್ದಾರೆ. ಅನಂತರ ತಮ್ಮ ಅಭಿಮಾನಿಯ ಆಸೆಯಂತೆ ಆಕೆಯ ಕೈಯಿಂದಲೇ ಉಂಗುರವನ್ನು ತೊಡಿಸಿಕೊಂಡಿದ್ದಾರೆ. ಅಭಿಮಾನಿಯ ಜೊತೆಗೆ ಹೀಗೊಂದು ಆತ್ಮೀಯತೆ ಹಾಗೂ ಅಭಿಮಾನದ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ನಟ. ಈ ವೇಳೆ ನಟನ ಅಭಿಮಾನಿಯಾದ ಯುವತಿ ಭಾವುಕಳಾಗಿದ್ದು, ನಟ ವಿಜಯ ದೇವರಕೊಂಡು ಆಕೆಯನ್ನು ಸಮಾಧಾನ‌ ಮಾಡಿದ್ದಾರೆ.

Leave A Reply

Your email address will not be published.