ನಡುರಸ್ತೆಯಲ್ಲೇ ಯುವಕರ ಗುಂಪನ್ನು ಅಟ್ಟಾಡಿಸಿ, ವಾರ್ನಿಂಗ್ ನೀಡಿದ ಗಾಯಕಿ ಮಂಗ್ಲಿ: ಇಷ್ಟಕ್ಕೂ ಅಲ್ಲಿ ನಡೆದಿದ್ದೇನು??

Entertainment Featured-Articles News
31 Views

ತೆಲುಗಿನ ಖ್ಯಾತ ಗಾಯಕಿ, ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾದ ಒಂದು ಹಾಡಿಗೆ ಧ್ವನಿಯಾಗಿರುವ ಹಾಗೂ ಇತ್ತೀಚಿಗಷ್ಟೇ ಬಿಡುಗಡೆಯಾದ ಪುಪ್ಪ ಸಿನಿಮಾದ ಕನ್ನಡ ವರ್ಶನ್ ನಲ್ಲಿ ನಟಿ ಸಮಂತ ಹೆಜ್ಜೆ ಹಾಕಿರುವ ಐಟಂ ಹಾಡು ಹೂಂ ಅಂತೀಯಾ ಮಾವ, ಉಹೂಂ ಅಂತೀಯ ಮಾವ ಎನ್ನುವ ಹಾಡಿಗೆ ಹಿನ್ನೆಲೆ ಗಾಯನ ಮಾಡಿರುವ ಗಾಯಕಿ ಮಂಗ್ಲಿ ಜೊತೆಯಲ್ಲಿ ಸೆಲ್ಫಿಗಾಗಿ ಬಂದ ಯುವಕರ ಗುಂಪೊಂದು ಗಾಯಕಿಯ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡು ಆಕೆ ಯುವಕರನ್ನು ಹೊ ಡೆಯಲು ಮುಂದಾದ ಘಟನೆಯೊಂದು ನಡೆದಿದೆ.

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಗಾಯಕಿ ಮಂಗ್ಲಿತೆರಳಿದ್ದರು. ಕಾರ್ಯಕ್ರಮದ ನಂತರ ಅವರು ಮರಳಿ ಬರಲು, ಕಾರು ಹತ್ತುವ ಸಮಯದಲ್ಲಿ ಕೆಲವು ಯುವಕರು ಮಂಗ್ಲಿ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದಾರೆ. ಈ ವೇಳೆ ಅವರು ಸೆಲ್ಫಿಗಾಗಿ ಬಂದ ಯುವಕರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಅವರನ್ನು ಹೊಡೆಯಲು ಮುಂದಾಗಿದ್ದಾರೆ ಮಂಗ್ಲಿ. ರಸ್ತೆಯಲ್ಲಿ ಕೂಗಾಡುತ್ತಾ, ಗಾಯಕಿ ಮಂಗ್ಲಿ ತಮ್ಮ ಸಹಾಯಕರನ್ನು ಕೂಡ ಬೈದಿದ್ದಾರೆ.

ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಂಗಲಿ ಫೋನುಗಳನ್ನು ಒಡೆದು ಹಾಕಿ ತಮ್ಮ ಸಹಾಯಕರ ಮೇಲೆ ಗರಂ ಆದ ದೃಶ್ಯ ಕಂಡುಬಂದಿದೆ. ಸಚಿವರೊಬ್ಬರ ಪುತ್ರಿಯ ವಿವಾಹ ಕಾರ್ಯಕ್ರಮಕ್ಕೆ ಮಂಗ್ಲಿ ಆಗಮಿಸಿದ್ದರು ಎನ್ನಲಾಗಿದ್ದು , ಕಾರ್ಯಕ್ರಮ ಮುಗಿದ ನಂತರ ಹೊರಡುವಾಗ ಇಂತಹದೊಂದು ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಂಗ್ಲಿ ಯುವಕರ ಮೇಲೆ ತಿರುಗಿ ಬಿದ್ದಿರುವ ವಿಡಿಯೋ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *