ನಟ ಸೂರ್ಯ ಅಭಿಮಾನಿಗಳಿಗೆ ದೊಡ್ಡ ನಿರಾಸೆ:ಎಲ್ಲಾ ನಿರೀಕ್ಷೆಗಳು ಸುಳ್ಳಾಯ್ತು!

Written by Soma Shekar

Published on:

---Join Our Channel---

ಸಿನಿಮಾ ಪ್ರಶಸ್ತಿಗಳ ವಿಷಯ ಬಂದಾಗ, ಈ ಕ್ಷೇತ್ರದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಎಂದರೆ ಆಸ್ಕರ್ ಪ್ರಶಸ್ತಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾವೊಂದಕ್ಕೆ ಸಿಗುವ ಗೌರವ ಇದಾಗಿದ್ದು, ಈ ಗೌರವ ದಕ್ಕಿದರೆ ಅದು ಸಿನಿಮಾ ತಂಡದ ಶ್ರಮಕ್ಕೆ ಸಿಗುವ ಅತಿ ದೊಡ್ಡ ಗೌರವ ಮಾತ್ರವಲ್ಲದೇ, ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲವೂ ಇದಾಗಿರುತ್ತದೆ.‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾಕ್ಕೆ ಸಿಗುವ ಈ ಗೌರವವನ್ನು ಯಾರು ತಾನೇ ಬಯಸುವುದಿಲ್ಲ. ಆದರೆ ಆಸ್ಕರ್ ಪ್ರಶಸ್ತಿ ವಿಷಯ ಬಂದಾಗಲೆಲ್ಲಾ ಭಾರತೀಯ ಸಿನಿಮಾಗಳಿಗೆ ಇಲ್ಲಿ ಮಾನ್ಯತೆ ಸಿಕ್ಕಿರುವುದು ಅಪರೂಪ ಎಂದೇ ಹೇಳಬಹುದು.

ಭಾರತೀಯ ಸಿನಿಮಾ ರಂಗದಿಂದ ಕೇವಲ ಬೆರಳೆಣಿಕೆಯ ಮಂದಿ ಮಾತ್ರವೇ ಆಸ್ಕರ್ ಪ್ರಶಸ್ತಿಯ ಗೌರವಕ್ಕೆ ಭಾಜನರಾಗಿದ್ದಾರೆ. ಆದರೆ ಪ್ರತಿವರ್ಷ ಆಸ್ಕರ್ ಗೆ ನಾಮಿನೇಷನ್ ನಡೆದಾಗ ಭಾರತದ ಕೆಲವು ಪ್ರತಿಷ್ಠಿತ ಸಿನಿಮಾಗಳು ಕೂಡಾ ನಾಮಾಂಕಿತಗೊಳ್ಳುತ್ತವೆ. ಆದರೆ ಅಷ್ಟಕ್ಕೇ ಅವು ತೃಪ್ತಿ ಪಡುವಂತೆ ಆಗುತ್ತಿದೆ. ಇನ್ನು ಈ ಬಾರಿ ತಮಿಳಿನ ಸ್ಟಾರ್ ನಟ ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾ ಆಸ್ಕರ್ ಸಿನಿಮಾದ ಪ್ರಶಸ್ತಿಯ ರೇಸ್ ನಲ್ಲಿ ನಾಮಿನೇಟ್ ಆಗಿತ್ತು.

ಈ ಬಾರಿ ಆಸ್ಕರ್ ರೇಸ್ ಗೆ ಎರಡು ಭಾರತೀಯ ಸಿನಿಮಾಗಳು ಇದ್ದವು. ತಮಿಳಿನ ಜೈ ಭೀಮ್ ಮತ್ತು ಮಲೆಯಾಳಂ ನ ಮರಕ್ಕರ್ ಸಿನಿಮಾಗಳು ಆಸ್ಕರ್ ರೇಸ್ ಗೆ ನಾಮಿನೇಟ್ ಆಗಿದ್ದವು. ನಟ ಸೂರ್ಯ ಅವರ ನಿರ್ಮಾಣದ ಜೈ ಭೀಮ್ ಆಸ್ಕರ್ ಗೆ ನಾಮಿನೇಟ್ ಆಗಿದ್ದು, ಆಸ್ಕರ್ ನ ಯೂಟ್ಯೂಬ್ ಚಾನೆಲ್ ನಲ್ಲಿ ಜೈ ಭೀಮ್ ಸಿನಿಮಾದ ದೃಶ್ಯಗಳು ಕಂಡಿದ್ದು ಜನರಿಗೆ ಖುಷಿಯನ್ನು ನೀಡಿತ್ತು. ಸಿನಿಮಾಕ್ಕೆ ಆಸ್ಕರ್ ಪ್ರಶಸ್ತಿ ಖಂಡಿತ ಸಿಗುತ್ತದೆ ಎನ್ನುವ ನಿರೀಕ್ಷೆಗಳು ಸಹಾ ಇತ್ತು.

ಆದರೆ ಈಗ ಎಲ್ಲರ ನಿರೀಕ್ಷೆಗಳು ಸಹಾ ಸುಳ್ಳಾಗಿದೆ. ಆಸ್ಕರ್ ಪ್ರಶಸ್ತಿ ಯ ರೇಸ್ ನಿಂದ ಜೈ ಭೀಮ್ ಔಟಾಗಿದೆ. ಅಂತಿಮ ಹಂತಕ್ಕೆ ಹೋಗುವಲ್ಲಿ ಸಿನಿಮಾ ವಿ ಫ ಲವಾಗಿದ್ದು ಇದು ಸಿನಿಮಾ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ತೀ ವ್ರ ನಿರಾಶೆಯನ್ನುಂಟು ಮಾಡಿದೆ. ಅಲ್ಲದೇ ಅಭಿಮಾನಿಗಳು ಇನ್ನೊಮ್ಮೆ ಈ ಸಿನಿಮಾವನ್ನು ಪರಿಗಣಿಸಬೇಕು ಎನ್ನುವ ಮನವಿಯೊಂದನ್ನು ಸಹಾ ಸೋಶಿಯಲ್ ಮೀಡಿಯಾಗಳ ಮೂಲಕ ಮಾಡಿದ್ದಾರೆ. ಆದರೆ ಆಸ್ಕರ್ ಯೂಟ್ಯೂಬ್ ನಲ್ಲಿ ಸಿನಿಮಾಕ್ಕೆ ಅವಕಾಶ ಸಿಕ್ಕಿದ್ದು ಹೆಮ್ಮೆಯನ್ನು ತಂದಿದೆ ಎನ್ನುವುದು ಅನೇಕರ ಅಭಿಪ್ರಾಯ ಕೂಡಾ ಆಗಿದೆ.

Leave a Comment