ನಟ ಸೂರ್ಯನನ್ನು ಹೊಡೆದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ PMK ಪಾರ್ಟಿ: ಸಂಚಲನ ಸೃಷ್ಟಿಸಿದ ಘೋಷಣೆ

Written by Soma Shekar

Published on:

---Join Our Channel---

ತಮಿಳು ನಟ ಸೂರ್ಯ ಅಭಿನಯದ ಜೈ ಭೀಮ್ ಓಟಿಟಿ ಯಲ್ಲಿ ಬಿಡುಗಡೆ ಆಗಿ ಭರ್ಜರಿ ಯಶಸ್ಸನ್ನು ಕಂಡಿದೆ. ಅಲ್ಲದೇ ಈ ಸಿನಿಮಾದ ಕುರಿತಾಗಿ ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಿದೆ. ಸಿನಿಮಾ ಒಂದು ಕಡೆ ವಿಮರ್ಶಕರಿಂದ ಅಪಾರವಾದ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ. ಆದರೆ ಇದೇ ವೇಳೆ ಇನ್ನೊಂದು ಕಡೆ ತಮಿಳುನಾಡಿನಲ್ಲಿ ಸಿನಿಮಾ ವಿಚಾರವಾಗಿ ಏರ್ಪಟ್ಟಿರುವ ವಿ‌ಬವಾ ದಗಳು ದಟ್ಟವಾಗುತ್ತಾ ಸಾಗಿದೆ. ಈ ಸಿನಿಮಾದ ವಿ ರು ದ್ಧ ತಮಿಳುನಾಡಿನ ವನ್ನಿಯರ್ ಸಮುದಾಯದ ಮುಖ್ಯಸ್ಥರು ಆ ಕ್ರೋ ಶವನ್ನು ಹೊರಹಾಕುತ್ತಿದ್ದಾರೆ.

ಅದು ಮಾತ್ರವೇ ಅಲ್ಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಸಮುದಾಯವನ್ನು ಕೆಟ್ಟದಾಗಿ ಪ್ರತಿಬಿಂಬಿಸಿರುವ ನಟ ಸೂರ್ಯ ಅವರನ್ನು ಹೊ ಡೆ ದವರಿಗೆ ಒಂದು ಲಕ್ಷ ರೂಪಾಯಿಗಳ ಬಹುಮಾನವನ್ನು ನೀಡುವುದಾಗಿ ಪಿಎಂಕೆ ನಾಯಕರು ಪ್ರಕಟಣೆ ಹೊರಡಿಸಿ ಸಂಚಲನವನ್ನು ಸೃಷ್ಟಿಸಿದ್ದಾರೆ. ಪಿಎಂಕೆ ನಾಯಕರು ಸೂರ್ಯ ನಟಿಸಿರುವ ಸಿನಿಮಾಗಳು ಪ್ರದರ್ಶನವಾಗುತ್ತಿರುವ ಥಿಯೇಟರ್ ಗಳ ಮುಂದೆ ಹೋಗಿ ಧರಣಿ ಮಾಡಲು ಮುಂದಾಗಿದ್ದಾರೆ.

ಜೈಭೀಮ್ ಸಿನಿಮಾದಲ್ಲಿ ಉದ್ದೇಶಪೂರ್ವಕವಾಗಿಯೇ ಬಹಳಷ್ಟು ಸಂದರ್ಭಗಳಲ್ಲಿ, ಬಹಳಷ್ಟು ಸನ್ನಿವೇಶಗಳಲ್ಲಿ ವನ್ನಿಯರ್ ಸಮುದಾಯವನ್ನು ಕೆಟ್ಟದಾಗಿ ಪ್ರತಿಬಿಂಬಿಸಲಾಗದೆ ಎಂದು ಆರೋಪವನ್ನು ಮಾಡಿದ್ದಾರೆ ವನ್ನಿಯರ್ ಸಮುದಾಯದ ಮುಖಂಡರು. ಅಲ್ಲದೇ ತಮ್ಮ ಸಮುದಾಯಕ್ಕೆ ಅವಮಾನ ಮಾಡಿರುವ ಕಾರಣ ನಟ ಸೂರ್ಯ 5 ಕೋಟಿ ರೂಪಾಯಿಗಳ ಪರಿಹಾರವನ್ನು ನೀಡಬೇಕೆಂದು ವನ್ನಿಯರ್ ಸಂಘವು ನೋಟಿಸ್ ಅನ್ನು ಸಹಾ ಜಾರಿ ಮಾಡಿದೆ.

ಇದೇ ವಿವಾದದ ಕುರಿತಾಗಿ ಮಾಜಿ ಕೇಂದ್ರ ಸಚಿವ ಹಾಗೂ ಪಿಎಂಕೆ ನಾಯಕರಾಗಿರುವ ಅನ್ಬುಮಣಿ ನಟ ಸೂರ್ಯ ಅವರಿಗೆ ಪತ್ರವೊಂದನ್ನು ಬರೆದಿದ್ದು, ಇದಕ್ಕೆ ಪ್ರತ್ಯುತ್ತರ ನೀಡಿರುವ ಸೂರ್ಯ, ದಲಿತರ ಮೇಲೆ ನಡೆಯುತ್ತಿರುವ ದೌ ರ್ಜ ನ್ಯ ಕ್ಕೆ ನ್ಯಾಯ ದೊರಕಿಸಿಕೊಡುವುದು ಅಷ್ಟೇ ತಮ್ಮ ಸಿನಿಮಾದ ಉದ್ದೇಶವಾಗಿದೆ, ಈ ಸಿನಿಮಾ ಮುಖಾಂತರ ಯಾವುದೇ ಒಂದು ವರ್ಗ ಅಥವಾ ಸಮುದಾಯವನ್ನು ಕೆಟ್ಟದಾಗಿ ತೋರಿಸುವುದು ನಮ್ಮ ಉದ್ದೇಶವಾಗಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ.

Leave a Comment