ನಟ ಪ್ರಭಾಸ್ ಒಡೆತನದ ದೇಶದ ಅತಿದೊಡ್ಡ ಚಿತ್ರ ಮಂದಿರ ಬಂದ್: ಸಿಎಂ ಜಗನ್ ಆದೇಶಕ್ಕೆ ಚಿತ್ರರಂಗ ಅಸಮಾಧಾನ

0 3

ಆಂಧ್ರಪ್ರದೇಶದಲ್ಲಿ ಸಿಎಂ‌ ಜಗನ್ ಸರ್ಕಾರವು ಸಿನಿಮಾ ಟಿಕೆಟ್ ದರಗಳನ್ನು ಭಾರಿ ಮೊತ್ತದಲ್ಲಿ ಕಡಿತಗೊಳಿಸಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರದ ಬೆನ್ನಲ್ಲೇ ಆಂಧ್ರ ಪ್ರದೇಶದ ಚಿತ್ರರಂಗ ಸಿನಿಮಾ ಥಿಯೇಟರ್ ಗಳ ಮಾಲೀಕರು ತೀವ್ರವಾದ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಸಿಎಂ ಜಗನ್ ಅವರ ಈ ನಿರ್ಧಾರದ ಕಾರಣದಿಂದಾಗಿ ಇದೀಗ ದೇಶದಲ್ಲೇ ಅತಿದೊಡ್ಡ ಚಿತ್ರಮಂದಿರ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದ ಸಿನಿಮಾ ಥಿಯೇಟರ್ ಕೂಡಾ‌ ಇದೀಗ ಮುಚ್ಚಲ್ಪಡುತ್ತಿದೆ.

ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಅವರು ಪಾಲುದಾರರಾಗಿ ನೆಲ್ಲೂರಿನ ಸಮೀಪದ ಸೂಲ್ಲೂರು ಪೇಟ ಎನ್ನುವಲ್ಲಿ ಎರಡು ವರ್ಷಗಳ ಹಿಂದೆ ವಿ ಎಪಿಕ್ ಎನ್ನುವ ಹೆಸರಿನಲ್ಲಿ ಅತಿ ದೊಡ್ಡ ಮೂರು ಸ್ಕ್ತೀನ್ ನ ಚಿತ್ರ ಮಂದಿರ ವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಈಗ ಸರ್ಕಾರ ಟಿಕೆಟ್ ದರದಲ್ಲಿ ಮಾಡಿರುವ ಭಾರೀ ಇಳಿಕೆಯ ನಿರ್ಧಾರದಿಂದಾಗಿ ಅಷ್ಟು ಕಡಿಮೆ ದರದಲ್ಲಿ ಟಿಕೆಟ್ ಅಂದರೆ ಕನಿಷ್ಠ ಬೆಲೆಯಲ್ಲಿ ಟಿಕೆಟ್ ಮಾರಾಟ ಮಾಡಬೇಕಾಗಿರುವುದರಿಂದ ಚಿತ್ರ ಮಂದಿರದ ವ್ಯವಹಾರಕ್ಕೆ ದೊಡ್ಡ ಮಟ್ಟ ನಷ್ಟ ಸಂಭವಿಸಲಿದೆ.

ಇದೇ ಕಾರಣದಿಂದ ಈಗ ಆಡಳಿತ ಮಂಡಳಿ ಚಿತ್ರ ಮಂದಿರದಲ್ಲಿ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಿದೆ. ಹೈಟೆಕ್ ಚಿತ್ರಮಂದಿರವಾದ ವಿ ಎಪಿಕ್ ನಲ್ಲಿ 30 ರೂ. ಗೆ ಟಿಕೆಟ್ ಮಾರಾಟ ಮಾಡಿ ಚಿತ್ರಮಂದಿರ ನಡೆಸುವುದು ಅಸಾಧ್ಯ ಎನ್ನುವುದು ಥಿಯೇಟರ್ ಆಡಳಿತ ಮಂಡಳಿಯ ಮಾತಾಗಿದೆ. ಈ ಚಿತ್ರಮಂದಿರವನ್ನು ಯುವಿ ಕ್ರಿಯೇಷನ್ಸ್ ಅವರು ನಿರ್ಮಾಣ ಮಾಡಿದ್ದು, ನಟ ಪ್ರಭಾಸ್ ಇದರಲ್ಲಿ ಪಾಲುದಾರರಾಗಿದ್ದಾರೆ.

ವಿ ಎಪಿಕ್ ಸಿ‌ನಿಮಾ ಮಂದಿರವನ್ನು 2019 ರಲ್ಲಿ ನಟ ರಾಮ್ ಚರಣ್ ತೇಜಾ ಉದ್ಘಾಟನೆ ಮಾಡಿದ್ದರು. ಆದರೆ ಅದಾದ ನಂತರದಲ್ಲಿ ಕೊರೊನಾ ಕಾರಣದಿಂದ ಸಿನಿಮಾ ಥಿಯೇಟರ್ ಗಳು ಬಂದ್ ಆದವು. ಅನಂತರ ಥಿಯೇಟರ್ ಏನೋ ತೆರೆದಿದೆ ಆದರೆ ಈಗ ಸರ್ಕಾರದ ಹೊಸ ನಿಯಮದಿಂದಾಗಿ ಮುಚ್ಚುವ ಹಂತಕ್ಕೆ ಬಂದಿದೆ. ಇದೊಂದೇ ಸಿನಿಮಾ ಥಿಯೇಟರ್ ಅಲ್ಲ ಆಂದ್ರಪ್ರದೇಶದಲ್ಲಿ ಹಲವು ಥಿಯೇಟರ್ ಗಳು ಇದೇ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಆಂಧ್ರಪ್ರದೇಶದಲ್ಲಿ ನಗರ, ಜಿಲ್ಲಾ ಪಂಚಾಯಿತಿ,‌ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಚಿತ್ರ ಮಂದಿರಗಳಿಗೆ ಬೇರೆ ಬೇರೆ ರೀತಿಯಲ್ಲಿ ಟಿಕೆಟ್ ಬೆಲೆ ನಿಗಧಿಯಾಗಿದೆ. ವಿ ಎಪಿಕ್ ಸೂಲ್ಲೂರು ಪೇಟ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾರಣ ಈಗ 30 ರೂ. ಗೆ ಟಿಕೆಟ್ ಮಾರಾಟ ಮಾಡಬೇಕಾಗಿದೆ. ಇನ್ನು ಟಿಕೆಟ್ ದರಗಳನ್ನು ಕುರಿತಾಗಿ ಸಿನಿಮಾ ಮಂದಿ ಕೂಡಾ ಸರ್ಕಾರದ ವಿ ರು ದ್ಧ ದನಿಯನ್ನು ಎತ್ತಿದ್ದಾರೆ.

Leave A Reply

Your email address will not be published.