ನಟ ಪ್ರಭಾಸ್ ಅಭಿಮಾನಿಗಳಿಗೆ ದೊಡ್ಡ ನಿರಾಸೆ: ಥಿಯೇಟರ್ ಅಲ್ಲ ಓಟಿಟಿ ಗೆ ಬರುತ್ತಾ ರಾಧೇ ಶ್ಯಾಮ್??

Written by Soma Shekar

Published on:

---Join Our Channel---

ಬಾಹುಬಲಿ ಸಿನಿಮಾದಿಂದ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.‌ ಇದೊಂದು ಸಿನಿಮಾದಿಂದ ಪ್ರಭಾಸ್ ಅವರ ಸ್ಟಾರ್ ಡಂ ಹಾಗೂ ಕ್ರೇಜ್ ಸಂಪೂರ್ಣವಾಗಿ ಬದಲಾಗಿ ಹೋಗಿದ್ದು ಕೂಡಾ ವಾಸ್ತವ. ಬಾಹುಬಲಿ ನಂತರ ಪ್ರಭಾಸ್ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್, ಬಾಲಿವುಡ್ ನಿರ್ದೇಶಕ, ನಿರ್ಮಾಪಕರು ಪ್ರಭಾಸ್ ಜೊತೆಗೆ ಸಿನಿಮಾ ಮಾಡುವ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಈಗಾಗಲೇ ಅವರ ಮೂರು ಸಿನಿಮಾಗಳು ಕೆಲಸಗಳು ನಡೆಯುತ್ತಿವೆ.

ಓಂ ರಾವತ್ ನಿರ್ದೇಶನದ ಭಾರೀ ಬಜೆಟ್ ನಲ್ಲಿ ನಿರ್ಮಾಣ ಆಗುತ್ತಿರುವ ರಾಮಾಯಣ ಕಥೆಯನ್ನು ಆಧರಿಸಿದ ಆದಿಪುರುಷ್ ಸಿನಿಮಾ ಮಾಡುತ್ತಿದ್ದರೆ, ಇನ್ನೊಂದು ಕಡೆ ಕೆಜಿಎಫ್ ಮೂಲಕ ಸಂಚಲನ ಸೃಷ್ಟಿಸಿದ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಇವೆಲ್ಲವುಗಳ ನಡುವೆ ರಾಧಾಕೃಷ್ಣ ಕುಮಾರ್ ನಿರ್ದೇಶನದ ರಾಧೇ ಶ್ಯಾಮ್ ಸಿನಿಮಾ ಕೂಡಾ ಮಾಡಿದ್ದಾರೆ. ಈ ಸಿನಿಮಾದ ಟೀಸರ್ ಮತ್ತು ಟ್ರೈಲರ್ ಈಗಾಗಲೇ ಸದ್ದು ಮಾಡಿದೆ.

ಅಲ್ಲದೇ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ ಎಂದು ಕೂಡಾ ಈಗಾಗಲೇ ಘೋಷಣೆಯನ್ನು ಸಹಾ ಮಾಡಲಾಗಿದೆ. ಇತ್ತೀಚಿಗಷ್ಟೇ ಸಿನಿಮಾದ ಪ್ರಿರಿಲೀಸ್ ಈವೆಂಟ್ ಕೂಡಾ ಬಹಳ ಅದ್ದೂರಿಯಾಗಿ ನಡೆದಿತ್ತು. ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆಯಾದ ಟ್ರೈಲರ್ ದೊಡ್ಡ ಸದ್ದು ಮಾಡಿದೆ. ಸುಮಾರು ಎರಡು ವರ್ಷಗಳ ನಂತರ ಪ್ರಭಾಸ್ ಸಿನಿಮಾ ಬರುತ್ತಿರುವ ಕಾರಣ ರಾಧೇ ಶ್ಯಾಮ್ ಸಿನಿಮಾದ ಮೇಲೆ ನಿರೀಕ್ಷೆಗಳು ಸಹಾ ದೊಡ್ಡ ಮಟ್ಟದಲ್ಲೇ ಇದೆ.

ವಿಭಿನ್ನ ಪ್ರೇಮಕಥೆಯೊಂದಿಗೆ ರಾಧೇ ಶ್ಯಾಮ್ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ಹೇಳುವಾಗಲೇ ಹೊಸದೊಂದು ಸುದ್ದಿ ಹರಿದಾಡಿದೆ. ಹೌದು ಹೊಸ ಸುದ್ದಿಯೇನೆಂದರೆ ಸಿನಿಮಾ ನಿರ್ಮಾಪಕರು ರಾಧೇ ಶ್ಯಾಮ್ ಸಿನಿಮಾವನ್ನು ಥಿಯೇಟರ್ ಬದಲಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡುವ ಆಲೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಥಿಯೇಟರ್ ಗಳಿಗಿಂತ ಓಟಿಟಿಯಲ್ಲಿ ಬಿಡುಗಡೆ ಮಾಡುವುದೇ ಉತ್ತಮ ಎನ್ನುವುದು ನಿರ್ಮಾಪಕ ಆಲೋಚನೆಯಾಗಿದೆ ಎನ್ನಲಾಗಿದೆ.

ಈ ವಿಷಯದ ಬಗ್ಗೆ ಶೀಘ್ರದಲ್ಲೇ ಎಲ್ಲಾ ವಿವರಗಳನ್ನು ಕೂಡಾ ಅಧಿಕೃತವಾಗಿ ಪ್ರಕಟಣೆ ಮಾಡಲಾಗುವುದು ಎನ್ನಲಾಗುತ್ತಿದೆ. ಪ್ರಭಾಸ್ ಅಭಿಮಾನಿಗಳು ಭಾರೀ ನಿರೀಕ್ಷೆಗಳೊಂದಿಗೆ ಸಿನಿಮಾಕ್ಕಾಗಿ ಎದುರು ನೋಡುವಾಗಲೇ ಇಂತಹುದೊಂದು ಸುದ್ದಿ ಈಗ ಎಲ್ಲರಿಗೂ ಶಾ ಕ್ ನೀಡಿದೆ. ಓಮಿಕ್ರಾನ್ ಭೀತಿ ಒಂದೆಡೆಯಾದರೆ ಆಂಧ್ರ ಪ್ರದೇಶದಲ್ಲಿ ಟಿಕೆಟ್ ಬೆಲೆಗಳನ್ನು ಸಹಾ ಸರ್ಕಾರ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿರುವುದು ಒಂದು ಚರ್ಚೆಗೆ ಕಾರಣವಾಗಿದೆ.

Leave a Comment